ಲೇಡಿ ಸ್ಟಂಟ್ | ಕಾರಿನ ಮುಂಭಾಗ ಕುಳಿತುಕೊಂಡು ಸ್ಟಂಟ್ ಮಾಡಿದ ಯುವತಿ | ಗಾಡಿ ಸಮೇತ ಯುವತಿ ಪೊಲೀಸರ ಅತಿಥಿ


ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಇಂದಿನ ಯುವ ಜನತೆ ಒಂದು ಕ್ಷಣ ಮರೆತು ಹೋಗುತ್ತಾರೆ. ಅಲ್ಲದೆ ಎಷ್ಟೋ ಜನ ಈ ರೀಲ್ಸ್ ಎಂಬ ಗೊಂಗಿನಲ್ಲಿ ಬಿದ್ದು ಮರಣ ಹೊಂದಿದವರನ್ನು ಈಗಾಗಲೇ ನೋಡಿರಬಹುದು, ಕೇಳಿರಬಹುದು.ಈ ಹದಿ ವಯಸ್ಸು ಹೀಗೇ ಸಾಹಸಗಳತ್ತ ಕೈಮಾಡಿ ಕರೆಯುತ್ತಿರುತ್ತದೆ. ಆದರೆ ಜೀವನದಲ್ಲಿ ಯಾವ ವಿಷಯವಾಗಿ ಮತ್ತು ಎಲ್ಲಿ ಸಾಹಸ ಮಾಡಬೇಕು ಎನ್ನುವುದು ಬಹಳ ಮುಖ್ಯ.

ಯಾವುದೋ ಸಾಮಾಜಿಕ ಜಾಲತಾಣದಲ್ಲಿ ಸೆಕೆಂಡುಗಳ ಲೆಕ್ಕದಲ್ಲಿ ಸಾಹಸ ಪ್ರದರ್ಶಿಸಿ ರೀಲು ಮಾಡಿ ಹಣ ಗಳಿಸಲು ಜೀವವನ್ನೇ ಅಪಾಯಕ್ಕೆ ತಳ್ಳಿಕೊಳ್ಳುತ್ತಿರುವ ಅನೇಕ ವಿಡಿಯೋಗಳನ್ನು ಈಗಾಗಲೇ ನೋಡಿದ್ದೀರಿ. ಇದೀಗ ಈ ಯುವತಿಯು ಅದೇ ಸಾಲಿನಲ್ಲಿ ಸಾಗುತ್ತಿದ್ದಾಳಾ ಎಂಬ ಅನುಮಾನ ಬಾರದೇ ಇರದು.
ಆದರೆ ಮಾನ ಹರಾಜಾಗಲು ಮತ್ತು ಶಿಕ್ಷೆ ಅನುಭವಿಸಲು ಇಂದಿನ ತಂತ್ರಜ್ಞಾನದ ಕಾಲದಲ್ಲಿ ಬಹಳ ಹೊತ್ತು ಹಿಡಿಯುವುದಿಲ್ಲ. ಹೌದು ನೋಯ್ಡಾದಲ್ಲಿ ರಾತ್ರಿಹೊತ್ತಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿ ಬೈನೆಟ್ ಮೇಲೆ ಕುಳಿತು ಸ್ಟಂಟ್ ಮಾಡುತ್ತಿದ್ದ ಯುವತಿಯನ್ನು ಮತ್ತು ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಘಟನೆ ನಡೆದ ಸಮಯ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ರೀಲ್ಸ್ ನ್ನು ಟೀಕಿಸುತ್ತಿದ್ದಾರೆ.
ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬಾನೆಟ್ ಮೇಲೆ ಕುಳಿತು ಸಾಗುತ್ತಿದ್ದ ಈ ಘಟನೆ ನಡೆದ ಸಮಯ ಬಗ್ಗೆ ನಿಖರ ಮಾಹಿತಿ ಇಲ್ಲ. ಉತ್ತರ ಪ್ರದೇಶದ ಪೊಲೀಸರು ಅವಳ ಈ ರಥಯಾತ್ರೆಯನ್ನು ಭಂಗಗೊಳಿಸಿ ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ವೀಡಿಯೋ ನೋಡಿದ ವೀಕ್ಷಕರು ರಸ್ತೆ ನಿಯಮ ಪಾಲಿಸುವುದನ್ನು ಬಿಟ್ಟು ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಕ್ಷಣಗಳ ಲೆಕ್ಕದ ಮೋಜಿಗಾಗಿ ಜೀವವನ್ನೇ ಬಲಿ ಕೊಟ್ಟುಕೊಳ್ಳುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ ಹಲವರು. ಇನ್ನು ಕೆಲವರು ಈಕೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಇಂತಹ ತಪ್ಪು ಮಾಡಲು ಯಾರೂ ಸಹ ಮುಂದೆ ಭಾರದಂತೆ ಭಯ ಹುಟ್ಟಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
