ನಿಮಗೆ ಗೊತ್ತೇ ಐಫೋನ್ ನ ಈ ಸೀಕ್ರೇಟ್ ಬಟನ್ ಬಗ್ಗೆ? ತಿಳಿದ್ರೆ ಖಂಡಿತಾ ಸೂಪರ್ ಅಂತೀರಾ!

ಹೆಚ್ಚಿನವರು ಬಯಸುವ ಆಪಲ್ ಐಫೋನ್ ದುಬಾರಿಯಾದರೂ ಕೂಡ ಅದರ ಕ್ರೇಜ್ ಎಂದಿಗೂ ಕಡಿಮೆಯಾಗದು. ಆಪಲ್‌ ಐಫೋನ್‌ ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಇವೆ. ಅದರಲ್ಲಿಯೂ ಇತ್ತೀಚಿಗಿನ ಕೆಲವು ಆವೃತ್ತಿಯ ಐಫೋನ್‌ಗಳು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಆದರೆ, ಕೆಲವು ಐಫೋನ್‌ಗಳಲ್ಲಿ ಸಿಕ್ರೆಟ್‌ ಬಟನ್‌ ಆಯ್ಕೆ ಹೊಂದಿರುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.. ಹಾಗಾದರೆ ಈ ಸಿಕ್ರೆಟ್‌ ಬಟನ್‌ ಎಲ್ಲಿರುತ್ತದೆ??? ಫೋನಿನ ಎಡ ಮತ್ತು ಬಲ ಭಾಗಗಳಲ್ಲಿ ನೀವು ಗಮನಿಸಿದರೆ ಅಲ್ಲಿ ಕಾಣಿಸುವುದಿಲ್ಲ. ಹಾಗೆಯೇ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿಯೂ ಕಾಣಸಿಗದು.

ಹೌದು, ಆಪಲ್‌ ಸಂಸ್ಥೆಯ ಕೆಲವು ಐಫೋನ್‌ ಮಾಡೆಲ್‌ಗಳು ಸಿಕ್ರೆಟ್‌ (ರಹಸ್ಯ) ಬಟನ್‌ ಆಯ್ಕೆ ಪಡೆದಿವೆ. ಅಂದಹಾಗೆ ಈ ಬಟನ್‌ ಫೋನ್‌ನ ಹಿಂಭಾಗದಲ್ಲಿ ಇರಿಸಲಾಗಿದೆ. ಅರೆರೇ ಹಿಂಭಾಗದಲ್ಲಿ ಬಟನ್‌ ಹೇಗೆ ಸಾಧ್ಯ ಎಂದು ಯೋಚಿಸಬೇಡಿ. ಹಿಂಭಾಗದಲ್ಲಿ ನೀಡಲಾಗಿರುವ ಬಟನ್‌ ಭೌತಿಕ ಮಾದರಿಯ ಬಟನ್ ಆಗಿರದೆ, ಸಂಪೂರ್ಣ ಹಿಂಭಾಗದ ಪ್ಯಾನೆಲ್ ಅನ್ನು ಬಟನ್ ಆಗಿ ಬಳಸಬಹುದಾಗಿದೆ.

ಹಿಂಭಾಗದ ಪ್ಯಾನೆಲ್‌ ಅನ್ನು ಬಟನ್‌ ನಂತೆ ಬಳಕೆ ಮಾಡಲು ಬಳಕೆದಾರರು ಐಫೋನ್‌ನಲ್ಲಿ ‘ಬ್ಲ್ಯಾಕ್ ಟ್ಯಾಪ್’ (black tap) ಫೀಚರ್ಸ್‌/ ಆಯ್ಕೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಬ್ಲ್ಯಾಕ್ ಟ್ಯಾಪ್ ಆಯ್ಕೆ ಆಕ್ಟಿವ್ ಮಾಡುವ ಮೂಲಕ ಕೆಲವು ಚಟುವಟಿಕೆಗಳನ್ನು ನಿರ್ವಹಿಸಲು ಪ್ಯಾನೆಲ್‌ ಮೇಲೆ ಟ್ಯಾಪ್ ಮಾಡಬಹುದು.

ಬ್ಲ್ಯಾಕ್ ಟ್ಯಾಪ್‌ ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿಯುವುದಾದರೆ

ಬಳಕೆದಾರರು ಅವರ ಅನುಕೂಲಕ್ಕೆ ತಕ್ಕಂತೆ ಬ್ಲ್ಯಾಕ್ ಟ್ಯಾಪ್‌ ಆಯ್ಕೆಗೆ ಶಾರ್ಟ್‌ಕಟ್‌ಗಳನ್ನು ಸೇರಿಸಬಹುದಾಗಿದೆ. ಉದಾಹರಣೆಗೆ, ಹಿಂಭಾಗದಲ್ಲಿ ಎರಡು ಬಾರಿ ಟ್ಯಾಪ್ ಮಾಡಿ, ಸ್ಕ್ರೀನ್‌ ಲಾಕ್ ಮಾಡಬಹುದು. ಅದೇ ರೀತಿ, ಒಮ್ಮೆ ಟ್ಯಾಪ್ ಮಾಡುವ ಮೂಲಕ ತಿರುಗುವಿಕೆಯ ಫೀಚರ್ ಅನ್ನು ಲಾಕ್ ಮಾಡಬಹುದು. ಇಷ್ಟೇ ಅಲ್ಲದೇ ಟ್ಯಾಪ್‌ ಮೂಲಕ ಬಳಸಿಕೊಂಡು ಕ್ಯಾಮೆರಾವನ್ನು ಸಹ ತೆರೆಯಬಹುದಾಗಿದೆ. ಹೀಗೆ ಬಳಕೆದಾರರು ಅವರಿಗೆ ಅನುಕೂಲವಾಗುವಂತೆ ಟ್ಯಾಪ್‌ ಸೆಟ್‌ ಮಾಡಬಹುದಾಗಿದೆ.

ಈ ವಿಶೇಷತೆ ತಿಳಿದ ಮೇಲೆ ಯಾವ ಐಫೋನ್‌ಗಳಲ್ಲಿ ಬ್ಲ್ಯಾಕ್ ಟ್ಯಾಪ್ ಲಭ್ಯವಾಗುತ್ತದೆ ಎಂದು ತಿಳಿಯಬೇಕಲ್ಲವೆ!!ಬ್ಲ್ಯಾಕ್ ಟ್ಯಾಪ್ ಆಯ್ಕೆಯು ಆಪಲ್ iOS 14 ಅಥವಾ ಅದಕ್ಕೂ ಮೇಲಿನ ಐಓಎಸ್‌ ಸೌಲಭ್ಯದಲ್ಲಿ ಕಾರ್ಯನಿರ್ವಹಿಸುವ ಐಫೋನ್‌ಗಳಲ್ಲಿ ಲಭ್ಯವಿದೆ. ಬಳಕೆದಾರರು ಬ್ಯಾಕ್ ಟ್ಯಾಪ್ ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ಐಫೋನ್‌ನ ಹಿಂಭಾಗದಲ್ಲಿ ತ್ವರಿತವಾಗಿ/ ಕ್ವಿಕ್‌ ಆಗಿ ಡಬಲ್ ಅಥವಾ ಟ್ರಿಪಲ್ ಟ್ಯಾಪ್ ಮಾಡಿದರೆ ಕಂಟ್ರೋಲ್ ಸೆಂಟರ್ (Control Center) ಅನ್ನು ತೆರೆಯಬಹುದಾಗಿದ್ದು, ಸ್ಕ್ರೀನ್‌ಶಾಟ್ ತೆಗೆಯುವ ಜೊತೆಗೆ ಇನ್ನಷ್ಟು ಆಯ್ಕೆಗಳು ಲಭ್ಯವಿದೆ.

ಬ್ಲ್ಯಾಕ್ ಟ್ಯಾಪ್ ಆಯ್ಕೆ ಆಕ್ಟಿವ್ ಮಾಡಲು ಸರಳ ವಿಧಾನ ಅನುಸರಿಸಿ:

ಮೊದಲಿಗೆ ಐಫೋನ್ ಅನ್‌ಲಾಕ್ ಮಾಡಿಕೊಂಡ ಬಳಿಕ ಸೆಟ್ಟಿಂಗ್‌ಗಳಿಗೆ ಹೋಗಿ ಆನಂತರ Accessibility ಆಯ್ಕೆ ಮೇಲೆ ಟ್ಯಾಪ್ ಮಾಡಬೇಕು. ಇದರ ಬಳಿಕ Touchಗೆ ಹೋಗಿ ಮತ್ತು ಬ್ಯಾಕ್ ಟ್ಯಾಪ್ ಆಯ್ಕೆ ಟ್ಯಾಪ್ ಮಾಡಿ ಟ್ರಿಪಲ್ ಟ್ಯಾಪ್ ಮಾಡಬೇಕು.ಅಲ್ಲಿ ಬ್ಯಾಕ್ ಟ್ಯಾಪ್ ಅನ್ನು ನಿಷ್ಕ್ರಿಯಗೊಳಿಸುವ ಅಥವಾ ಸಕ್ರಿಯಗೊಳಿಸುವ ಆಯ್ಕೆಯನ್ನು ನೋಡಬಹುದಾಗಿದೆ.ಡಬಲ್ ಟ್ಯಾಪ್ ಅಥವಾ ಟ್ರಿಪಲ್ ಟ್ಯಾಪ್ ಮಾಡಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು . ಬಳಿಕ ನೀವು ಸೆಟ್ ಮಾಡಿದ ಕ್ರಿಯೆಯನ್ನು ಚೆಕ್ ಮಾಡಲು, ನಿಮ್ಮ ಐಫೋನ್ ಹಿಂಭಾಗದಲ್ಲಿ ಎರಡು ಅಥವಾ ಮೂರು ಬಾರಿ ಟ್ಯಾಪ್ ಮಾಡಬೇಕು.

ಐಫೋನ್‌ ಅನ್ನು ವಾಯರ್‌ಲೆಸ್‌ ಆಗಿ ಅಪ್‌ಡೇಟ್‌ ಮಾಡಲು ಈ ಕ್ರಮ ಅನುಸರಿಸಿ

ಐಕ್ಲೌಡ್ ಅಥವಾ ಕಂಪ್ಯೂಟರ್ ಅನ್ನು ಬಳಸಿ ನಿಮ್ಮ ಫೋನ್‌ ಬ್ಯಾಕಪ್ ಮಾಡಿಕೊಳ್ಳಬೇಕು. ಬಳಿಕ, ನಿಮ್ಮ ಐಫೋನ್‌ ಪವರ್‌ಗೆ ಪ್ಲಗ್ ಮಾಡಿ ಮತ್ತು ವೈ-ಫೈ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಮಾಡಿಕೊಂಡು ಬಳಿಕ ಸೆಟ್ಟಿಂಗ್‌ಗಳು > General ಆಯ್ಕೆಗೆ ಹೋಗಿ, ನಂತರ ಸಾಫ್ಟ್‌ವೇರ್ ಅಪ್‌ಡೇಟ್‌ ಆಯ್ಕೆ ಟ್ಯಾಪ್ ಮಾಡಬೇಕು. ಪ್ರತಿಯೊಂದು ಮೊಬೈಲ್ ಕೂಡ ತನ್ನದೆ ವೈಶಿಷ್ಟ್ಯ ಹೊಂದಿದ್ದು, ಆಪಲ್ ಐಫೋನ್ ಬಳಕೆ ಮಾಡುವ ಬಳಕೆದಾರರು ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿ ಅನೇಕ ಪ್ರಯೋಜನ ಪಡೆಯಬಹುದು.

Leave A Reply

Your email address will not be published.