Murugha Matt Shree : ಬಟ್ಟೆ ಬಿಚ್ಚಿ ನಿಲ್ಲಲು ಹೇಳುತ್ತಿದ್ದ ಶ್ರೀಗಳು – ಹಳೆ ವಿದ್ಯಾರ್ಥಿನಿಯಿಂದ ಆಘಾತಕಾರಿ ಹೇಳಿಕೆ

ಎಲ್ಲೆಡೆ ಸಂಚಲನ ಮೂಡಿಸಿದ್ದ ಮುರುಘಾ ಶ್ರೀ ಗಳ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದ ಪರಿಣಾಮ ಪೋಲಿಸ್ ದೂರು ದಾಖಲಾಗಿ ಶ್ರೀಗಳನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಈ ನಡುವೆ ಶ್ರೀಗಳ ವಿರುದ್ದ ಕೊಲೆ ಆರೋಪ, ಮಾದಕವಸ್ತು ಬಳಕೆ ಆರೋಪ ಕೂಡ ಕೇಳಿ ಬರುತ್ತಿತ್ತು.

 

ಏನೂ ಅರಿಯದ ಅಪ್ರಾಪ್ತ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಂಧನಕ್ಕೆ ಒಳಗಾಗಿರುವ ಮುರುಘಾಶ್ರೀ ಶಿವಮೂರ್ತಿ ಸ್ವಾಮೀಜಿಯ ಆರೋಪಕ್ಕೆ ಇಂಬು ಕೊಡುವಂತಹ ಸಾಕ್ಷಿಯೊಂದು ಹೊರ ಬಿದ್ದಿದ್ದು, ಮುರುಘಾ ಶರಣರಿಗೆ ಸೆರೆಮನೆ ವಾಸ ಖಾತ್ರಿಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ರಾಸಲೀಲೆಯ ಹೊಸ ವಿಚಾರಗಳು ಒಂದೊಂದಾಗಿ ಬಯಲಾಗುತ್ತಿದೆ. ಮುರುಘಾ ಶ್ರೀ ಕಪಿಮುಷ್ಠಿಯಲ್ಲಿ ಅನೇಕ ಮಂದಿ ಬಾಲಕಿಯರು ಒದ್ದಾಡಿದ್ದು, ಹಾಸ್ಟೆಲ್‍ನಲ್ಲಿ ಹಿಂಸೆ ಅನುಭವಿಸಿದ ಹಳೆ ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಗಳ ಬಗ್ಗೆ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

2012ರಲ್ಲಿ ನಾನು ಮಠದಲ್ಲಿ 8ನೇ ತರಗತಿ ಓದುತ್ತಿದ್ದುದಾಗಿ, ಆಗ ಹಾಸ್ಟೆಲ್ ವಾರ್ಡನ್ ಆಗಿ ರಶ್ಮಿ ನೇಮಕಗೊಂಡಿದ್ದಾರೆ. ರಶ್ಮಿ ಅವರು ಬಂದ ಮೇಲೆ ಹಾಸ್ಟೆಲ್ ಚಿತ್ರಣ ಬದಲಾಗಿದೆ. ತನ್ನನ್ನು ಬಲವಂತವಾಗಿ ಸ್ವಾಮೀಜಿ ಹತ್ತಿರ ಕಳುಹಿಸುತ್ತಿದ್ದರು. ಸ್ವಾಮೀಜಿ ಹಣ್ಣು ಕೊಡುತ್ತಾರೆ ಹೋಗು ಎಂದು ಹೇಳಿ ಕಳುಹಿಸುತ್ತಿದ್ದರು. ಹಾಗಾಗಿ,ತಾನು ಮತ್ತು ಸ್ನೇಹಿತೆ ಹೋಗುತ್ತಿದ್ದೆವು ಎಂದು ಹಿಂಸೆ ಅನುಭವಿಸಿದ ವಿದ್ಯಾರ್ಥಿನಿ ಹೇಳಿದ್ದಾಳೆ.

ಎಲ್ಲರೂ ಮಲಗಿದ ಬಳಿಕ ಹಿಂಬಾಗಿಲಿನಿಂದ ಹೋಗುತ್ತಿದ್ದೆವು. ಶ್ರೀಗಳು ತನಗೆ ಡ್ರೈಫ್ರೂಟ್ಸ್, ಚಾಕ್ಲೇಟ್ ಕೊಡುತ್ತಿದ್ದರು ಜೊತೆಗೆ ನನ್ನ ವಸ್ತ್ರ ಕಳಚಲು ಹೇಳುತ್ತಿದ್ದರು. ನಾನು ಶ್ರೀಗಳು ಹೇಳಿದಂತೆ ನಡೆದುಕೊಳ್ಳುತ್ತಿದ್ದುದ್ದಾಗಿ ಅಲ್ಲದೆ, ನನ್ನನ್ನು ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು ಎಂದಿದ್ದಾಳೆ. ಇದಷ್ಟೇ ಅಲ್ಲದೇ, ನನ್ನೊಂದಿಗೆ ಗಂಡ-ಹೆಂಡತಿಯಂತೆ ಸೇರುತ್ತಿದ್ದರು ಎಂದು ನೊಂದ ಬಾಲಕಿ ಸ್ಪೋಟಕ ಮಾಹಿತಿ ನೀಡಿದ್ದಾಳೆ.

ಆ ಬಳಿಕ ಬೆಳಗ್ಗಿನ ಜಾವ 4.30ಕ್ಕೆ ಅಲಾರಂ ಇಟ್ಟುಕೊಂಡು ನನ್ನನ್ನು ಎಚ್ಚರಿಸುತ್ತಿದ್ದರು. ಹಾಗಾಗಿ, ನಾನು ಬೆಳಗ್ಗಿನ ಜಾವ ಹಾಸ್ಟೆಲ್‍ಗೆ ಸೇರಿಕೊಳ್ಳುತ್ತಿದ್ದೆ ಎಂದಿದ್ದಾಳೆ. ಈ ವಿಷಯ ಹಾಸ್ಟೆಲ್‍ನಲ್ಲಿದ್ದ ಕೆಲವರಿಗೆ ತಿಳಿದ ಬಳಿಕ ನನ್ನನ್ನು ಮಲ್ಲಾಡಿಹಳ್ಳಿ ಹಾಸ್ಟೆಲ್‍ಗೆ ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಹಾಗಾಗಿ, ಮುರುಘಾ ಶರಣರ ಮುಖವಾಡ ಕಳಚಿ ಅವರ ಕಾಮ ರಹಸ್ಯಗಳು ಒಂದೊಂದೇ ಬಯಲಾಗುತ್ತಿದ್ದು, ಈ ನಡುವೆ ಶ್ರೀಗಳ ನಡೆಗೆ ಎಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Leave A Reply

Your email address will not be published.