ಮಂಗಳೂರು : ವೈದ್ಯೆಯ ಎದುರು ಪ್ಯಾಂಟ್ ಜಿಪ್ ಜಾರಿಸಿ ಗುಪ್ತಾಂಗ ತೋರಿಸಿ, ಅಸಭ್ಯ ವರ್ತನೆ ಮಾಡಿದ ಕ್ಲೀನರ್ | ದೂರು ದಾಖಲು, ಆರೋಪಿ ಅರೆಸ್ಟ್!

ಮಂಗಳೂರು : ಖಾಸಗಿ ಬಸ್​ನ ಕ್ಲೀನರ್ ನೋರ್ವ ಲೇಡಿ ಡಾಕ್ಟರ್​ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ನಡೆದಿದೆ. ಕ್ಲೀನರ್​ ಮಹಮ್ಮದ್​​ ಇಮ್ರಾನ್ ​(26) ಎಂಬಾತನೇ ಈ ಅಸಭ್ಯ ವರ್ತನೆ (harassment) ಮಾಡಿದ್ದು, ಆತನನ್ನು ಬಂಧಿಸಲಾಗಿದೆ.

ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿಯಾದ ಈತ, ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ವೈದ್ಯೆ ಜತೆ ದುರ್ವತನೆ ತೋರಿದ್ದಾನೆ ಎಂಬ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್​​ 151/2022 U/s 354ರಡಿ ಕೇಸ್​​​ ದಾಖಲುಗೊಂಡಿದೆ. ಖಾಸಗಿ ಬಸ್​​ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು. ಮಹಿಳಾ ವೈದ್ಯೆ ಜೊತೆ ಅಸಭ್ಯ ವರ್ತನೆ ಮಾಡಿದ್ದಲ್ಲದೆ, ಆರೋಪಿ ಇಮ್ರಾನ್​​​ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ.

ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ. ದೂರುದಾರ ಮಹಿಳಾ ಸಂತ್ರಸ್ತೆ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಪೊಲೀಸ್ ದೂರು ನೀಡುವ ವಿಚಾರ ಗೊತ್ತಾಗಿ ಆರೋಪಿ ಇಮ್ರಾನ್ ಮಹಿಳೆಗೆ ಬೆದರಿಕೆಯನ್ನು ಹಾಕಿದ್ದ ಎಂದು ತಿಳಿದುಬಂದಿದೆ.

Leave A Reply