Passport : ಪಾಸ್ ಪೋರ್ಟ್ ಗೆ ಅಂಚೆಕಚೇರಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ನಾವು ಹೊರದೇಶಕ್ಕೆ ಹೋಗಬೇಕಾದರೆ ಪಾಸ್‌ಪೋರ್ಟ್ ಹೊಂದಿರುವುದು ಅತೀ ಮುಖ್ಯವಾಗಿದೆ. ದೇಶದಾದ್ಯಂತ ಪಾಸ್‌ಪೋರ್ಟ್ ಸೇವೆಯನ್ನು ಒದಗಿಸುತ್ತಿದ್ದಾರೆ. ಅಲ್ಲದೇ ಸೇವಾ ಕೇಂದ್ರಗಳಲ್ಲಿ ನಾವು ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.

 

ಇದೀಗ ಅಂಚೆಕಚೇರಿಯಲ್ಲೂ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸ್ವೀಕಾರ ಮಾಡುತ್ತಿದ್ದಾರೆ. ಇದು ಜನರಿಗೆ ಸುಲಭವಾಗಿ ಪಾಸ್‌ಪೋರ್ಟ್ ಸೇವೆಯನ್ನು ಪಡೆಯುವ ನಿಟ್ಟಿನಲ್ಲಿ ಅಂಚೆಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಂಭ ಮಾಡಲಾಗಿದೆ.

ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಪಾಸ್‌ಪೋರ್ಟ್ ಸೇವೆಯನ್ನು ಸಲ್ಲಿಸುವ ಪಾಸ್‌ಪೋರ್ಟ್ ಕಚೇರಿಗಳು ಆಗಿದ್ದೂ, ದೇಶದಲ್ಲಿ ಸುಮಾರು 428 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್‌ಕೆ) ಇದೆ. ಈ ಪೈಕಿ 65 ಕೇಂದ್ರಗಳು ದೇಶದ ಪ್ರಮುಖ ನಗರಗಳಲ್ಲಿ ಇದೆ.ಈ ಕಚೇರಿಯು ಪಾಸ್‌ಪೋರ್ಟ್ ಜಾರಿ ಮಾಡುವುದು, ಅರ್ಜಿಯನ್ನು ಪರಿಶೀಲಿಸುವುದು ಇತರೆ ಕಾರ್ಯಗಳನ್ನು ಮಾಡುತ್ತದೆ. ನೀವು ಆನ್‌ಲೈನ್ ಮೂಲಕವೇ ಸರಳ ಹಾಗೂ ಸುಲಭವಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಅಂಚೆಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ಮೊದಲು ಪಾಸ್‌ಪೋರ್ಟ್ ಸೇವೆಯ ಅಧಿಕೃತ ವೆಬ್‌ಸೈಟ್ passportindia.gov.in ಗೆ ಭೇಟಿ ನೀಡಿ. ಅಲ್ಲಿ ಪಾಸ್‌ಪೋರ್ಟ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಸಲ್ಲಿಕೆ ಮಾಡಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಸ್ಥಳೀಯ ಅಂಚೆ ಕಚೇರಿಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಹೋಗುವಾಗ ಪ್ರಮುಖ ದಾಖಲೆಗಳು ನಿಮ್ಮ ಬಳಿ ಇರಲಿ. ಎಲ್ಲಾ ದಾಖಲೆಯ ಪರಿಶೀಲನೆಯ ಬಳಿಕ ನಿಮ್ಮ ಪಾಸ್‌ಪೋರ್ಟ್ 7ರಿಂದ 14 ದಿನದ ಒಳಗೆ ನಿಮಗೆ ಲಭ್ಯವಾಗಲಿದೆ.

ಪ್ರಮುಖ ದಾಖಲೆಗಳು: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತಿನ ಚೀಟಿ ಬೇಕಾಗುತ್ತದೆ. ಜನನ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರದಂತಹ ವಯಸ್ಸಿನ ಗುರುತು. ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ನೀರಿನ ಬಿಲ್, ಗ್ಯಾಸ್ ಬಿಲ್, ವಿದ್ಯುತ್ ಬಿಲ್‌ನಂತಹ ವಿಳಾಸ ಪುರಾವೆಗಳು. ಫೋಟೋ ಇರುವ ಪಾಸ್‌ಬುಕ್, ಬಾಡಿಗೆ ಮನೆಯಲ್ಲಿ ಇದ್ದರೆ ಬಾಡಿಗೆ ಅಗ್ರಿಮೆಂಟ್ ಪ್ರತಿ
ಯನ್ನು ಪೋಸ್ಟ್ ಆಫೀಸ್ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ.

ಸೂಚನೆ: ನೀವು ಪ್ರಮುಖ ದಾಖಲೆಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿಯ ಪ್ರತಿಯನ್ನು ನೀವು ಹೊಂದಿರಬೇಕು.

Leave A Reply

Your email address will not be published.