ಕೆಸುವಿನ ಎಲೆಯಲ್ಲಿ ಅಡಗಿದೆ ಪೋಷಕಾಂಶಗಳ ಗಣಿ | ಹಲವು ಆರೋಗ್ಯ ಪ್ರಯೋಜನ ನೀಡುವ ಇದರ ಮಾಹಿತಿ ತಿಳಿಯಲೇ ಬೇಕಾಗಿದೆ..

ಹಸಿರು ಸೊಪ್ಪು ಅಥವಾ ಹಸಿರು ಎಲೆ ತರಕಾರಿಗಳು ನಮ್ಮ ಆಹಾರ ಪದ್ಧತಿಯಲ್ಲಿ ಅತ್ಯಂತ ಗಮನಾರ್ಹವಾದ ಬದಲಾವಣೆಗಳನ್ನು ತಂದು ಕೊಡುವುದರ ಮೂಲಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವುಗಳಲ್ಲಿ ಕೆಸುವಿನ ಎಲೆ ಕೂಡ ಒಂದು.


Ad Widget

Ad Widget

Ad Widget

Ad Widget
Ad Widget

Ad Widget

ಹೌದು.ಕೆಸುವಿನ ಎಲೆಯಲ್ಲಿ ತುಂಬಾ ಪೋಷಕಾಂಶಗಳಿರುವುದರಿಂದ ಇದರಿಂದ ತಯಾರಿಸುವ ಆಹಾರವನ್ನು ಔಷಧೀಯ ಗುಣಗಳಿರುವ ಆಹಾರ ಎಂದು ಹೇಳಲಾಗುತ್ತದೆ. ಕೆಸುವಿನ ಎಲೆಯಲ್ಲಿ ವಿಟಮಿನ್‌ ಎ, ವಿಟಮಿನ್ ಸಿ, ಬಿ, ಥೈಯಾಮಿನ್‌, ರಿಬೋಫ್ಲೇವಿನ್‌, ಫೋಲೆಟ್, ಮ್ಯಾಂಗನೀಸ್, ತಾಮ್ರ, ಪೊಟಾಷ್ಯಿಯಂ, ಕಬ್ಬಿಣದಂಶ ಇರುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಕೂಡ ಇದೆ.


Ad Widget

ಕೆಸವಿನ ಎಲೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಈ ಎಲೆಗಳನ್ನು ಹಸಿಯಾಗಿ ಸೇವಿಸಲಾಗದು, ತುರಿಕೆ ಸ್ವಭಾವ ಅದರದ್ದು ಹಾಗಾಗಿ ಅದನ್ನು ಚೆನ್ನಾಗಿ ಬೇಯಿಸಿಯೇ ತಿನ್ನಬೇಕು. ಕೆಸವಿನ ಎಲೆಯ ಪದಾರ್ಥಗಳು ತಿನ್ನಲು ಬಲು ರುಚಿ, ಮಲೆನಾಡಿನ ಭಾಗಗಳಲ್ಲಂತೂ ವಾರದಲ್ಲಿ ಒಂದು ದಿನ ಕೆಸವಿನ ಸೊಪ್ಪಿನ ಕರಕಲಿ, ಕೆಸವಿನ ದಂಟಿನ ಸಾಸಿವೆ, ಸಾಂಬಾರು, ಪತ್ರೊಡೆ ಹೀಗೆ ಬಗೆಬಗೆಯ ಪದಾರ್ಥಗಳನ್ನು ಮಾಡುತ್ತಲೇ ಇರುತ್ತಾರೆ. ಹಲವು ಪೋಷಕಾಂಶ ಇರುವುದರಿಂದ ಇದು ವಿವಿಧ ರೀತಿಯ ರೋಗಗಳಿಗೆ ಪ್ರಯೋಜನಕಾರಿಯಾಗಿದೆ. ಹಾಗಿದ್ರೆ, ಬನ್ನಿ ಕೆಸವಿನ ಎಲೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಕಣ್ಣುಗಳಿಗೆ ಪ್ರಯೋಜನಕಾರಿ:
ಕೆಸವಿನ ಎಲೆಗಳು ಕಣ್ಣುಗಳು ಅಥವಾ ದೃಷ್ಟಿಗೆ ತುಂಬಾ ಪ್ರಯೋಜನಕಾರಿ ಇದರ ಸೇವನೆಯಿಂದ ದೃಷ್ಟಿ ಹೆಚ್ಚುತ್ತದೆ. ಇದು ಬೀಟಾ-ಕ್ಯಾರೋಟಿನ್ ಅನ್ನು ಹೊಂದಿರುತ್ತದೆ, ಇದು ವಿಟಮಿನ್ ಎ ಆಗಿ ಬದಲಾಗುತ್ತದೆ. ವಿಟಮಿನ್ ಎ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಇದಕ್ಕಾಗಿ ಕೆಸವಿನ ಎಲೆಗಳನ್ನು ಖಂಡಿತವಾಗಿಯೂ ಆಹಾರದಲ್ಲಿ ಸೇರಿಸಿ.

ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ:
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೊಬ್ಬಿನಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ತಪ್ಪು ಆಹಾರ ಪದ್ಧತಿ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಕಾರಣವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಏರುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಕೆಸವಿನ ಎಲೆಗಳು ಸಹಾಯಕವಾಗಿವೆ. ಇದಕ್ಕಾಗಿ ಕೆಸವಿನ ಎಲೆಗಳನ್ನು ಸೇವಿಸಬಹುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ:
ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಕೆಸವಿನ ಎಲೆಗಳು ತುಂಬಾ ಸಹಕಾರಿ, ಸರಳವಾಗಿ ಹೇಳುವುದಾದರೆ, ಒತ್ತಡವನ್ನು ತೆಗೆದುಕೊಳ್ಳಬೇಡಿ. ಅದೇ ಸಮಯದಲ್ಲಿ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಕೆಸವಿನ ಎಲೆಗಳನ್ನು ಸಹ ಸೇವಿಸಬಹುದು. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ:
ಕೆಸವಿನ ಎಲೆಗಳಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಅದೇ ಸಮಯದಲ್ಲಿ, ಕ್ಯಾಲೋರಿಗಳು ಅತ್ಯಲ್ಪವಾಗಿರುತ್ತವೆ. ಇದಕ್ಕಾಗಿ, ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಈ ಕೆಸವಿನ ಎಲೆಗಳು ಸಹಾಯಕವಾಗಿವೆ. ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ.

ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಕೂಡ ಇದರಲ್ಲಿ ಹೆಚ್ಚಿದ್ದು, ಅನೇಕ ಬಗೆಯ ಆರೋಗ್ಯ ಪ್ರಯೋಜನಗಳನ್ನು ಸಹ ಇದು ಒಳಗೊಂಡಿದೆ. ಕೆಸವೆ ದಂಟಿನ ಎಲೆಗಳು ಮತ್ತು ಕಾಂಡ ಪೌಷ್ಟಿಕಾಂಶಗಳ ತವರಾಗಿದ್ದು, ಆರೋಗ್ಯದಲ್ಲಿ ಪ್ರಯೋಜನಗಳನ್ನು ಉಂಟುಮಾಡುವ ಗುಣಲಕ್ಷಣವನ್ನು ಹೊಂದಿದೆ.

error: Content is protected !!
Scroll to Top
%d bloggers like this: