ಮದುವೆಗೆ ಬರುವವರು ಕಡ್ಡಾಯವಾಗಿ ಇಷ್ಟು ದುಡ್ಡು ತರಬೇಕು | ಆಶೀರ್ವಾದವೇ ಉಡುಗೊರೆ ಬದಲು ಹಣವೇ ಉಡುಗೊರೆ ಎಂದ ವಧು|
ಪ್ರತಿ ಧರ್ಮ ಆಚರಣೆಗಳ ಅನ್ವಯ ಮದುವೆ ಶಾಸ್ತ್ರದಲ್ಲಿ ಬದಲಾವಣೆಗಳು ಇರುವುದು ಸಹಜ. ಅದರಂತೆ ಭಾರತದಲ್ಲಿ ಮದುವೆ ಆಚರಿಸುವಂತೆ ವಿದೇಶದಲ್ಲಿ ಇಲ್ಲವೇ ಬೇರೆ ದೇಶಗಳಲ್ಲಿ ಇದೆ ರೀತಿ ಮದುವೆ ಸಂಪ್ರದಾಯಗಳು ಇರುತ್ತವೆ ಎನ್ನಲಾಗದು.
ಕೆಲವು ದೇಶಗಳ ಮದುವೆ ಸಂಪ್ರದಾಯಗಳನ್ನು ಕೇಳಿದರೆ ಹುಬ್ಬೇರಿಸುವುದು ಖಚಿತ. ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿದ್ದು, ಕೆಲವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ ಎಂದರೆ ಅಚ್ಚರಿಯಾಗುತ್ತದೆ.
ಇಲ್ಲೊಂದು ವಿಶೇಷ ಘಟನೆಯೊಂದು ನಡೆದಿದ್ದು, ಈ ವಧು-ವರರು ವಿಭಿನ್ನ ರೀತಿಯಲ್ಲಿ ಸುದ್ದಿಯಾಗಿದ್ದಾರೆ. ರೆಡ್ಡಿಟ್‌ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿರುವ ವಧುವಿನ ಸ್ನೇಹಿತೆ, ಆಶೀರ್ವಾದವೆ ಉಡುಗೊರೆ ಎನ್ನುವ ಬದಲು , ಹಣವೇ ಉಡುಗೊರೆ ಎಂದು ಹೇಳಿದ್ದು, ಮದುವೆಗೆ ಬರುವವರು ದುಡ್ಡು ಕೊಡುವಂತೆ ವಧು ಕೇಳಿಕೊಂಡಿರುವ ಪ್ರಹಸನ ನಡೆದಿದೆ. ಪ್ರತಿಯೊಬ್ಬ ಅತಿಥಿಯು ಮದುವೆಗೆ ಉಡುಗೊರೆಯಾಗಿ £ 250 (ರೂ. 24,200) ತರುವಂತೆ ವಧು ಕೇಳಿಕೊಂಡಿದ್ದಾಳೆ !
“ತಾನು ವಧು-ವರರೊಂದಿಗೆ ಒಂದು ದಶಕಕ್ಕೂ ಹೆಚ್ಚಿನ ಸ್ನೇಹ ಹೊಂದಿದ್ದು, ಮುಂದಿನ ವರ್ಷ ಮಾರ್ಚ್‌ನಲ್ಲಿ ಮದುವೆ ನಡೆಯಲಿದೆ. ಉಡುಗೊರೆ ರೂಪದಲ್ಲಿ ಹಣ ತರುವಂತೆ ಸ್ನೇಹಿತೆ ಹೇಳಿದ್ದಾಳೆ. ಮೊತ್ತವು ಬಹಳ ದುಬಾರಿಯಾಗಿರುವುದರಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಈ ಬಗ್ಗೆ ಸ್ನೇಹಿತೆಯನ್ನು ಕೇಳಿದಾಗ ಇದು ತಮಾಷೆಯಲ್ಲ, ಕಡ್ಡಾಯ ಎಂದಿದ್ದು, ಹಣ ತರದಿದ್ದರೆ ಮದುವೆಗೆ ಎಂಟ್ರಿ ಇಲ್ಲ” ಎಂದು ವಧು ಹೇಳಿರುವ ಕುರಿತು ವಧುವಿನ ಸ್ನೇಹಿತೆ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ.
ಇದೇನಪ್ಪಾ ಹೀಗೆ ಹಣ ನೀಡಲು ಆರ್ಡರ್ ಮಾಡುತ್ತಿದ್ದಾರೆ ಎಂದು ನಿಮಗೆ ಅಚ್ಚರಿಯಾಗಬಹುದು ಆದರೆ, ಅದಕ್ಕೆ ಕಾರಣವೂ ಇದೆ.
ವಧು ಬೆಲ್ಜಿಯಂನವಳಾಗಿದ್ದು, ಅಲ್ಲಿ ಹೀಗೆ ಹಣ ನೀಡುವುದು ಸಾಮಾನ್ಯ ವಿಚಾರ. ಹಾಗಾಗಿಯೇ ವಧು ಹೀಗೆ ಡಿಮಾಂಡ್ ಇಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ . ಒಟ್ಟಾರೆಯಾಗಿ ಈ ಪೋಸ್ಟ್ ಭಾರಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಈ ಪೋಸ್ಟ್ ನೋಡಿದವರು ಇದೇನಪ್ಪಾ ಅವಸ್ಥೆ ಎಂದು ಬೆರಗಾಗಿದ್ದರೆ, ಮತ್ತೆ ಕೆಲವರು ಹೀಗೂ ಉಂಟೇ?? ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ