Bank Strike : ನಾಳೆ ಬ್ಯಾಂಕ್ ಮುಷ್ಕರ | ಎಟಿಎಂ ವ್ಯವಹಾರ ಕೂಡಾ ವ್ಯತ್ಯಯ

ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಆದರೆ ಪ್ರಸ್ತುತ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ನವೆಂಬರ್ 19ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಆದ್ದರಿಂದ ಬ್ಯಾಂಕಿಂಗ್, ಎಟಿಎಂ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ಜೊತೆಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಕರೆ ನೀಡಿರುವ ಮುಷ್ಕರಕ್ಕೆ ವಿವಿಧ ಬ್ಯಾಂಕ್‌ಗಳು ಬೆಂಬಲ ನೀಡುವ ನಿರೀಕ್ಷೆ ಇದೆ. ಬ್ಯಾಂಕ್ ಆಫ್ ಬರೋಡ ಈಗಾಗಲೇ ಬೆಂಬಲ ಘೋಷಣೆ ಮಾಡಿದೆ ಎಂದು ಮಾಹಿತಿ ಇದೆ.

ನವೆಂಬರ್‌ 19ರ ಶನಿವಾರ ದೇಶಾದ್ಯಂತ ಮುಷ್ಕರಕ್ಕೆ ಎಐಬಿಐಎ ಕರೆ ನೀಡಿದೆ. ಇದರಿಂದಾಗಿ ಬ್ಯಾಂಕ್ ತೆರೆದಿರುವ 3ನೇ ಶನಿವಾರ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ಎರಡು ಮತ್ತು 4ನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 1 ಮತ್ತು 3ನೇ ಶನಿವಾರ ಮಾತ್ರ ಬ್ಯಾಂಕ್‌ಗಳು ಕಾರ್ಯ ನಿರ್ವಹಣೆ ಮಾಡುತ್ತವೆ. ಈಗ ಮೂರನೇ ಶನಿವಾರವೂ ಸಹ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಸೋಮವಾರದ ಪ್ರಕಟಣೆಯಲ್ಲಿ ಬ್ಯಾಂಕ್ ಆಫ್ ಬರೋಡ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ನವೆಂಬರ್ 19ರಂದು ಮುಷ್ಕರದ ನೋಟಿಸ್ ಕೊಡಲಾಗಿದೆ . ನಮ್ಮ ಸದಸ್ಯರು ಬೇಡಿಕೆ ಈಡೇರಿಕೆಗಾಗಿ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಲಾಗಿದೆ

ಡಿಜಿಟಲ್ ವ್ಯವಹಾರ ನಡೆಸುವ ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಎಟಿಎಂಗೆ ಹಣ ತುಂಬುವ ವಾಹನಗಳ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ನೀಡಿದರೆ ಶನಿವಾರ ಎಟಿಎಂ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ಮುಷ್ಕರದ ದಿನ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲು ಬ್ಯಾಂಕ್ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಮುಷ್ಕರವು ನಡೆದರೆ ಕಚೇರಿ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ನವೆಂಬರ್‌ 7 ರಿಂದ 14ರ ತನಕ ಬ್ಯಾಂಕ್‌ಗಳಿಗೆ ವಿವಿಧ ಕಾರಣಕ್ಕೆ ಹಲವು ರಜೆಗಳಿವೆ. ಆದರೆ ಮುಂದಿನ ವಾರವಾದ ನವೆಂಬರ್ 19ರಂದು ಸಹ ಮುಷ್ಕರದ ಕಾರಣಕ್ಕೆ ಶನಿವಾರ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ನವೆಂಬರ್ 8ರಂದು ಗುರುನಾನಕ್ ಜಯಂತಿ ಅಂಗವಾಗಿ ಬ್ಯಾಂಕ್ ರಜೆ ಇತ್ತು. ನವೆಂಬರ್‌ 11ರಂದು ಕರ್ನಾಟಕದಲ್ಲಿ ಕನಕದಾಸ ಜಯಂತಿ ಅಂಗವಾಗಿ ಸರ್ಕಾರಿ ರಜೆ ಇದೆ ಹಾಗೂ ನವೆಂಬರ್ 12ರಂದು ಎರಡನೇ ಶನಿವಾರ, ನವೆಂಬರ್ 13ರಂದು ಭಾನುವಾರದ ಕಾರಣ ಬ್ಯಾಂಕ್ ರಜೆ ಇರಲಿದೆ.

ಸೋನಾಲಿ ಬ್ಯಾಂಕ್, ಎಂಯುಎಫ್‌ಜಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಸ್ಟಾಡೆಂರ್ಡ್‌ ಚಾರ್ಟರ್ ಬ್ಯಾಂಕ್ 3,300 ಉದ್ಯೋಗಿಗಳನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನೋಟಿಸ್‌ಗಳನ್ನು ಸಹ ನೀಡಿದೆ ಎಂದು ಮಾಹಿತಿ ಇದೆ.

ಮುಖ್ಯವಾಗಿ ಭಾರತದಲ್ಲಿರುವ ಕೆಲವು ವಿದೇಶಿ ಬ್ಯಾಂಕ್‌ಗಳ ಮಾನವ ಸಂಪನ್ಮೂಲ ವಿಭಾಗಗಳು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದರು. ಕೋಲ್ಕತ್ತಾದ ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್ ಸಿಬ್ಬಂದಿಗಳನ್ನು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಸದಸ್ಯರು ಎಂದು ಗುರುತಿಸಲು ವಿಳಂಬ ಮಾಡುತ್ತಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರಿಂದ ದೂರಲಾಗಿದೆ.

ಆದ್ದರಿಂದ ಬ್ಯಾಂಕ್ ಈ ಮೇಲಿನ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಸಿಬ್ಬಂದಿಗಳು ನವೆಂಬರ್ 19ರ ಶನಿವಾರ ಮುಷ್ಕರ ನಡೆಸಲಿದ್ದಾರೆ. ಆದ್ದರಿಂದ ಮೂರನೇ ಶನಿವಾರ ಎಂದು ಬ್ಯಾಂಕ್ ಕೆಲಸಗಳಿಗೆ ಜನರು ಹೋಗುವ ಮೊದಲು ಮುಷ್ಕರದ ಬಗ್ಗೆ ತಿಳಿದುಕೊಂಡಿರುವುದು ಉತ್ತಮ ಎಂದು ಮಾಹಿತಿ ತಿಳಿಸಲಾಗಿದೆ.

Leave A Reply

Your email address will not be published.