Smartphones : ಬಜೆಟ್ ಫ್ರೆಂಡ್ಲಿ ಸಾರ್ಟ್ ಫೋನ್ ಗಳ ಮೇಲೆ 40% ಡಿಸ್ಕೌಂಟ್ | ಈ ಅವಕಾಶ ನಿಮ್ಮದಾಗಿಸಿಕೊಳ್ಳಿ!!!

ಮೊಬೈಲ್ ಎಂಬ ಮಾಂತ್ರಿಕನನ್ನು ಬಯಸದೇ ಇರುವವರೇ ವಿರಳ. ಅದರಲ್ಲೂ ಕೂಡ ಇಂದಿನ ಡಿಜಿಟಲ್ ಯುಗದಲ್ಲಿ ದಿನಕ್ಕೊಂದು ನವೀನ ಮಾದರಿಯ ವೈಶಿಷ್ಟ್ಯದಲ್ಲಿ ಸ್ಮಾರ್ಟ್ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬಜೆಟ್ ಬೆಲೆಯಲ್ಲಿ ಉತ್ತಮ ಮೊಬೈಲ್ ಕಂಡುಕೊಳ್ಳುವ ಯೊಜನೆಯಲ್ಲಿ ಇರುವವರಿಗೆ ವಿಶೇಷ ಮಾಹಿತಿ ಇಲ್ಲಿದೆ.

 

ನಿಮ್ಮ ಪೋನ್‌ ಹಳೆಯದಾಗಿದ್ದು, ಹೊಸ ಪೋನ್‌ ಖರೀದಿ (Mobile Purchase) ಮಾಡಬೇಕು ಅಂದ್ಕೊಂಡಿದ್ದೀರಾ? ನಿಮ್ಮ ಬಜೆಟ್‌ (Budget Phones) 50000 ರೂ. ಆಗಿದ್ದರೆ, ನಿಮ್ಗೆ ನಾವಿಲ್ಲಿ ಕೆಲವು ಬೆಸ್ಟ್‌ ಸ್ಮಾರ್ಟ್‌ಪೋನ್‌ಗಳ (Best Smartphones) ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

ಬಜೆಟ್‌ಗೆ ತಕ್ಕಂತೆ ಉತ್ತಮ ವಿನ್ಯಾಸ (Design), ಉತ್ತಮ ಕ್ಯಾಮೆರಾ (Good Camera), ಇನ್ನಷ್ಟು ಫೀಚರ್‌ ಹೊಂದಿರುವ ಪೋನ್‌ಗಳ ಬಗ್ಗೆ, ಈಗ ಅವುಗಳು ಹೊಂದಿರುವ ಆಫರ್‌ ಅಥವಾ ಡಿಸ್ಕೌಂಟ್‌ ಬಗ್ಗೆಯೂ ಮಾಹಿತಿ ಇಲ್ಲಿದೆ.

ಬೆಸ್ಟ್‌ ಡಿಸ್ಕೌಂಟ್‌ನಲ್ಲಿ ಉತ್ತಮ ಸ್ಮಾರ್ಟ್‌ಪೋನ್‌ಗಳು

ಆ್ಯಪಲ್ ಐಪೋನ್‌ 11

ಟೆಕ್‌ ದೈತ್ಯ ಕಂಪನಿಯಾಗಿರುವ ಆ್ಯಪಲ್ ಆಗಾಗ ಹೊಸ ವೈಶಿಷ್ಟ್ಯದ ಮೂಲಕ ಹೊಸ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುವುದು ತಿಳಿದಿರುವ ವಿಚಾರ. ಇತ್ತಿಚೆಗಷ್ಟೇ ಆ್ಯಪಲ್ ಬಿಡುಗಡೆ ಮಾಡಿದ್ದ ಐಪೋನ್‌ 11 ಪೋನ್‌ ಸ್ಟೋರೇಜ್‌ 128 GB ವೆರಿಯಂಟ್‌ ಮಾದರಿಯು 48,900 ರೂ. ಮೂಲ ಬೆಲೆಯನ್ನು ಹೊಂದಿತ್ತು. ಇದೀಗ ಭರ್ಜರಿ ರಿಯಾಯಿತಿ ದರದಲ್ಲಿ ಅಂದರೆ, ಶೇ. 5 ರಷ್ಟು ಕಡಿಮೆ ರಿಯಾಯಿತಿಗೆ ಈ ಪೋನ್‌ ಖರೀದಿಸಬಹುದಾಗಿದ್ದು, ಸದ್ಯಕ್ಕೆ ಫ್ಲಿಫ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಆ್ಯಪಲ್ ಐಪೋನ್‌ 12 ಮಿನಿ

ಆ್ಯಪಲ್ ಕಂಪನಿ ಮತ್ತೊಂದು ಮೊಬೈಲ್ ಆ್ಯಪಲ್ ಐಪೋನ್‌ 12 ಮಿನಿ ಈಗ ಫ್ಲಿಫ್‌ಕಾರ್ಟ್‌ನಲ್ಲಿ 24 % ರಷ್ಟು ರಿಯಾಯಿತಿ ದರದಲ್ಲಿ 48,999 ರೂ. ಗೆ ಗ್ರಾಹಕರ ಕೈ ಸೇರಲಿದೆ. 128GB ಸ್ಟೋರೇಜ್‌ ವೇರಿಯಂಟ್‌ ಮಾದರಿಯಾಗಿದ್ದು , ಮುಖ ಬೆಲೆ 64,900 ರೂ. ಇದ್ದರು ಕೂಡ ಬರೋಬ್ಬರಿ 17,500 ರೂ. ಎಕ್ಸ್‌ಚೆಂಜ್‌ ಆಫರ್‌ ಕೂಡ ನೀಡಲಾಗಿದ್ದು, ಈ ಪೋನ್‌ ಖರೀದಿಗೆ ಬ್ಯಾಂಕ್‌ ಆಫರ್‌ ಕೂಡ ದೊರೆಯಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಹ್ಯಾಂಡ್‌ಸೆಟ್ ದರದಲ್ಲಿ 40 % ರಷ್ಟು ಕಡಿಮೆಯಾಗಿದ್ದು, ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಫೋನ್‌ ಆರಂಭದಲ್ಲಿ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಮಾದರಿಯು 74,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಂಡುಬಂದಿತ್ತು. ಇದೀಗ , ಭರ್ಜರಿ ಡಿಸ್ಕೌಂಟ್ ಪಡೆದಿದ್ದು, 44,999 ರೂ. ಗಳ ಆಫರ್‌ ಬೆಲೆಗೆ ಲಭ್ಯವಾಗಿದೆ. ಇದಕ್ಕೆ ಬರೋಬ್ಬರಿ 17,500 ರೂ. ಎಕ್ಸ್‌ಚೆಂಜ್‌ ಆಫರ್‌ (Exchange Offer) ಕೂಡ ಇದ್ದು, ಜೊತೆಗೆ ಈ ಪೋನ್‌ ಖರೀದಿಗೆ ಬ್ಯಾಂಕ್‌ ಆಫರ್‌ (Bank Offers) ಕೂಡ ಲಭ್ಯವಿದೆ.

ಒಪೋ ರೆನೊ 8 ಪ್ರೊ 5G

ಸದ್ಯ ದೊಡ್ಡ ಇ-ಕಾಮರ್ಸ್‌ ಕಂಪನಿಯಾದ ಫ್ಲಿಫ್‌ಕಾರ್ಟ್‌ನಲ್ಲಿ ಬರೋಬ್ಬರಿ 13% ರಷ್ಟು ರಿಯಾಯತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಈ ಸ್ಮಾರ್ಟ್‌ಪೋನ್‌ ಅನ್ನು 45,999 ರೂ. ಗೆ ಖರೀದಿ ಮಾಡಬಹುದಾಗಿದೆ. ಒಪೋ ರೆನೊ 8 ಪ್ರೊ 5G ಸ್ಮಾರ್ಟ್‌ಪೋನ್‌ 12GB RAM ಮತ್ತು 256 ಸ್ಟೋರೆಜ್‌ ವೆರಿಯಂಟ್‌ ಮಾದರಿಯ ರಿಟೈಲ್‌ ಪ್ರೈಸ್‌ 52,999 ರೂ. ಆಗಿದ್ದು, ಡಿಸ್ಕೌಂಟ್ ದರದಲ್ಲಿ ಗ್ರಾಹಕ ಪಡೆಯಬಹುದಾಗಿದೆ. ಇದಕ್ಕೆ ಬರೋಬ್ಬರಿ 17,500 ರೂ. ಎಕ್ಸ್‌ಚೆಂಜ್‌ ಆಫರ್‌ ಕೂಡ ಇದ್ದು, ಜೊತೆಗೆ ಪೋನ್‌ ಖರೀದಿಗೆ ಬ್ಯಾಂಕ್‌ ಆಫರ್‌ ಕೂಡ ಇದೆ.

ಗೂಗಲ್‌ ಫಿಕ್ಸೆಲ್‌ 6a

ಗೂಗಲ್‌ ಫಿಕ್ಸೆಲ್‌ 6a ಪೋನ್‌ 6GB RAM ಮತ್ತು 128 GB ಸ್ಟೋರೇಜ್‌ ಅನ್ನು ಹೊಂದಿದ್ದು, ಫ್ಲಿಫ್‌ಕಾರ್ಟ್‌ನಲ್ಲಿ ಇದರ ದರಕ್ಕೆ 20% ನಷ್ಟು ಡಿಸ್ಕೌಂಟ್‌ ಇದ್ದು, ಈ ಪೋನ್‌ 43,999 ರೂ. ಮೂಲಬೆಲೆಯನ್ನು ಹೊಂದಿದ್ದು, ಈಗ 34,999 ರೂ. ಕ್ಕೆ ಫ್ಲಿಫ್‌ಕಾರ್ಟ್‌ನಲ್ಲಿ ಲಭ್ಯವಿದೆ. ಜೊತೆಗೆ ಈ ಪೋನ್‌ಗೆ 20,500 ರೂ. ಎಕ್ಸ್‌ಚೆಂಜ್‌ ಆಫರ್‌ ಅನ್ನು ಹೊಂದಿದ್ದು, ಪೋನ್‌ ಖರೀದಿಗೆ ಫ್ಲಿಫ್‌ಕಾರ್ಟ್‌ ಬ್ಯಾಂಕ್‌ ಆಫರ್‌ ಸಹ ನೀಡಲಿದೆ.

ಹೊಸ ಮೊಬೈಲ್ ಕೊಳ್ಳುವ ಯೋಜನೆಯಲ್ಲಿ ಇರುವವರು ಭರ್ಜರಿ ಡಿಸ್ಕೌಂಟ್ ದರದಲ್ಲಿ ಗ್ರಾಹಕರು ಆಫರ್ ಗ ಳೊಂದಿಗೆ ಮೊಬೈಲ್ ಅನ್ನು ತಮ್ಮದಾಗಿಸಿಕೊಳ್ಳಬಹುದು.

Leave A Reply

Your email address will not be published.