ಗೆಳೆಯರ ಬಳಗದಲ್ಲಿ ತರಲೆ, ಮೋಜು ಮಸ್ತಿಗಳು ಕಾಮನ್. ಅದ್ರಲ್ಲೂ ಹುಡುಗರನ್ನು ಕೇಳೋದೇ ಬೇಡ. ಅನ್ಲಿಮಿಟೆಡ್ ಜಾಲಿ ಮಾಡುವವರು ಇರ್ತಾರೆ. ಇದೀಗ ಅಂತದ್ದೇ ವೈರಲ್ ವೀಡಿಯೊ ವೈರಲ್ ಆಗ್ತಾ ಇದೆ.
ಓರ್ವ ಹುಡುಗಿ ಚೆನ್ನಾಗಿ ನಿದ್ರೆ ಮಾಡ್ತಾ ಇರ್ತಾಳೆ. ಆಗ ಆಕೆಯ ಇಬ್ಬರು ಗೆಳೆಯರು ರೂಂ ಗೆ ಬರ್ತಾರೆ. ಏನಾದ್ರೂ ತರ್ಲೆ ಮಾಡಬೇಕು ಅಂತ ಅಲ್ಲೇ ಇದ್ದ ಬೆಲ್ಟ್ ಲೀ ರಪ್ ಅಂತ ಆ ಹುಡುಗಿಗೆ ಹೊಡಿತಾನೆ. ಹೊಡೆದು ಓಡಲು ನೋಡಿದಾಗ ಇನ್ನೊಬ್ಬ ಗೆಳೆಯ ಹೊರಗಿನಿಂದ ಬಾಗಿಲು ಹಾಕಿ ಬಿಡ್ತಾನೆ. ಆ ಸಮಯದಲ್ಲಿ ಹುಡುಗಿಗೆ ಹೊಡೆದ ಹುಡುಗ ಕಕ್ಕಾ ಬಿಕ್ಕಿ ಆಗ್ತಾನೆ. ಹುಡುಗಿ ಕೋಪದಲ್ಲಿ ಎದ್ದು ಬರ್ತಾಳೆ.
ನಂತರ ಏನು ಮಾಡ್ತಾಳೆ ಅಂತ ಯೂಹಿಸಲು ಸಾಧ್ಯವಿಲ್ಲ. ವಿಡಿಯೊ ಕೂಡ ಮುಗ್ಯುತ್ತೆ. ಒಟ್ನಲ್ಲಿ ಸುಮ್ನೆ ಮಲಗಿದ ಹುಡುಗಿಯನ್ನು ಕೆಣಕಿದ ಹುಡುಗನಿಗೆ ಸರಿಯಾಗಿ ಕ್ಲಾಸ್ ಅಂತೂ ಆಗಿರುತ್ತೆ.
ಜೀವನದಲ್ಲಿ ಈ ಗೆಳೆಯನನ್ನು ಇನ್ನು ನಂಬಲ್ಲ ಅನ್ನೋ ತರ ಆಗಿರಬಹುದು. ಆದ್ರೂ ನಿಂಗ್ ಇದು ಬೇಕಿತ್ತಾ ಮಗ್ನೆ ಅನ್ನೋ ತರಾನೇ ಇದೆ ಅಲ್ವಾ. ವೀಡಿಯೊ ನೋಡ್ತಾ ನಮ್ಗೆ ಶಾಕ್ ಜೊತೆಗೆ ನಗು ಬರುತ್ತೆ. ಇನ್ನು ಅವ್ನಿಗೆ ಹೇಗೆ ಆಗಿರಬಹುದು ಅಲ್ವಾ?