Viral Video : ವರ ವಧುವಿನ ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ಮದುಮಗಳು | ಮಂಟಪದಲ್ಲೇ ಫೈಟ್ ಶುರು!!

Share the Article

ಮದುವೆಯಲ್ಲಿ ಮದುಮಗಳು ಶೃಂಗಾರ ಮಾಡಿಕೊಂಡು ವೈಯಾರದಿಂದ ತಲೆ ಬಗ್ಗಿಸಿಕೊಂಡು ಇರುವ ಕಾಲ ಯಾವಾಗಲೇ ಹೊರಟು ಹೋಯಿತು ಆದರೆ ಕನಿಷ್ಠ ಪಕ್ಷ ಮದುವೆ ಎಂದ ತಕ್ಷಣ ವಧು ಆಗಲಿ ವರ ಆಗಲಿ ಸ್ವಲ್ಪ ನಯ ನಾಜೂಕಿನಿಂದ ಇರುತ್ತಾರೆ. ಇದು ಸಹಜ ಕೂಡಾ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ತರ್ಕಕ್ಕೆ ನಿಲುಕದ ಸಂಗತಿ ನಡೆದು ಹೋಗುವುದು ಸಹಜ.

ಕೆಲವರಿಗೆ ತಮ್ಮ ಮದುವೆಯ ಪ್ರತೀ ಕ್ಷಣವನ್ನು ಕೂಡಾ ಸುಂದರವನ್ನಾಗಿಸಬೇಕೆಂಬ ಆಸೆ . ಇದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಕೆಲವೊಮ್ಮೆ ವಿಶಿಷ್ಟ ರೀತಿಯ ಆಗಮನದಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ ಮಂದಿ ವಧು ವರರಿಗೆ ನೀಡುವ ಸರ್ಪೈಸ್ ನೀಡಿ ಬೆರಗಾಗಿಸುತ್ತಾರೆ. ಇನ್ನು ಕೆಲವು ಮದುವೆಯಲ್ಲಿ ನಡೆಯುವ ವಿಚಿತ್ರ ಘಟನೆಗಳು ಹುಬ್ಬೇರಿಸಿ ಬಿಡುತ್ತವೆ. ಇಲ್ಲೊಂದು ಮದುವೆ ವಿಡಿಯೋ ನೋಡಿದಾಗ ಇಲ್ಲಿ ಮದುವೆ ನಡೆಯುತ್ತಿದೆಯೋ ಅಥವಾ ಕುಸ್ತಿ ನಡೆಯುತ್ತಿದೆಯೋ ಎನ್ನುವ ಸಂದೇಹ ಮೂಡುತ್ತದೆ. ಮದುವೆ ಶಾಸ್ತ್ರಗಳು ನಡೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಮೊದಲಿಗೆ ಎಲ್ಲವೂ ಸರಿಯಾಗಿಯೇ ಇದ್ದಂತೆ ಕಾಣಿಸುತ್ತದೆ. ಇನ್ನೇನು ಸಪ್ತಪದಿ ನಡೆಯಬೇಕು ಅಷ್ಟೇ. ವರ ತನ್ನ ವಧುವಿನ ಕೆನ್ನೆಯನ್ನು ಸವರಿ ಬಿಡುತ್ತಾನೆ. ವರ ತನ್ನ ಕೆನ್ನೆಯನ್ನು ಸವರಿದ್ದೇ ತಡ, ಅದೇನಾಯಿತೋ ವಧುವಿಗೆ ಮದುವೆ ಮಂಟಪದಲ್ಲಿಯೇ ಶುರುವಾಗುತ್ತದೆ ಕುಸ್ತಿ. ವಧು ವರನ ಈ ವರ್ತನೆ ನೋಡಿ ಮನೆ ಮಂದಿಯೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ. ಇಬ್ಬರನ್ನು ತಡೆಯುವ ಪ್ರಯತ್ನವೂ ನಡೆದಿದೆ. ಆದರೆ ಸೇರಿಗೆ ಸವ್ವಾ ಸೇರು ಎನ್ನುವ ಹಾಗೆ ಇಬ್ಬರೂ ಕಾದಾಟ ಮುಂದುವರೆಸಿದ್ದಾರೆ.

ಈ ವೀಡಿಯೊವನ್ನು viralclips ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ನೇಪಾಳಿ ಜೋಡಿಯ ಮದುವೆಯದ್ದಾಗಿದೆ.

ವೀಕ್ಷಕರು ಈ ವಿಡಿಯೋವನ್ನು ನೋಡಿ ಶಾಕ್ ಆಗಿದ್ದಲ್ಲದೆ, ಕೆಲವರು ನಕ್ಕು ನಕ್ಕು ಸುಸ್ತಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

https://www.instagram.com/reel/Cfpp8eQqlzy/?utm_source=ig_web_copy_link
Leave A Reply