PM Kisan Yojana : ಪಿಎಂ ಕಿಸಾನ್ ಯೋಜನೆ ನಿಯಮಗಳಲ್ಲಿ ಮುಖ್ಯ ಬದಲಾವಣೆ ; ಹಣ ನಿಮ್ಮ ಖಾತೆ ಸೇರಲು ಇನ್ನು ಮುಂದೆ ಈ ದಾಖಲೆ ಕಡ್ಡಾಯ!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2022ರ ಕೊನೆಯ ವಾರ ಅಥವಾ 2023 ಜನವರಿಯ ಮೊದಲ ವಾರದಲ್ಲಿ ಠೇವಣಿ ಮಾಡುತ್ತಾರೆ. ಇ-ಕೆವೈಸಿ ಮಾಡದ ರೈತರು ಕೂಡಲೇ KYC ಮಾಡಿಸಬೇಕು. ಇಲ್ಲವಾದಲ್ಲಿ 13ನೇ ಕಂತಿನ ಮೊತ್ತ ಬ್ಯಾಂಕ್ ಖಾತೆಗೆ ಬರುವುದಿಲ್ಲ.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಇನ್ನೂ ಕೂಡಾ ನೋಂದಣಿ ಮಾಡದ ರೈತರು ನೋಂದಾಯಿಸಲು ಸರ್ಕಾರ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿದೆ. ಪಡಿತರ ಚೀಟಿ ಇಲ್ಲದೇ ಇರುವ ರೈತರು ಈ ಕೂಡಲೇ ಪಡಿತರ ಚೀಟಿ ಪಡೆಯಬೇಕು. ಈ ಯೋಜನೆಗೆ ಅರ್ಹತೆ ಇಲ್ಲದವರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಹಾಗಾಗಿ ರೈತರಲ್ಲದ, ಅನೇಕ ಅರ್ಹತೆ ಇಲ್ಲದವರ ಖಾತೆಗೆ ಹಣ ಸೇರುತ್ತಿದೆ. ಈ ರೀತಿಯ ವಂಚನೆಯಿಂದಾಗಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ರೂ.2,000 ಕಂತುಗಳನ್ನು ಪೋರ್ಟಲ್‌ನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿದ ನಂತರವೇ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಹಾಗೇ ಇದರ ಫಲಾನುಭವಿಗಳು ನೋಂದಾಯಿಸುವಾಗ ಕಡ್ಡಾಯವಾಗಿ ಪಡಿತರ ಚೀಟಿಯ ಸಾಫ್ಟ್ ಕಾಪಿಯನ್ನು ಇತರ ದಾಖಲೆಗಳ ಜೊತೆಗೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಆಗ ಮಾತ್ರ ಖಾತೆಗೆ 12 ಕಂತುಗಳ ಹಣ ಬರುತ್ತದೆ. ಇನ್ನೂ ಕೂಡ KYC ಮಾಡದೇ ಇದ್ದರೆ 13ನೇ ಕಂತಿನ ಹಣ ಕೂಡ ಖಾತೆಗೆ ಬರುವುದಿಲ್ಲ. ಇ-ಕೆವೈಸಿ ಇಲ್ಲದೆ 13ನೇ ಕಂತಿನಲ್ಲಿ ನಿಮ್ಮ ಹೆಸರಿನಲ್ಲಿ ಸ್ವೀಕರಿಸಿದ ಮೊತ್ತವನ್ನ ಫ್ರೀಜ್ ಮಾಡಲಾಗುತ್ತದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಸರ್ಕಾರ ರೈತರಿಗೆಂದು ವಾರ್ಷಿಕ ರೂ.6,000 ಆರ್ಥಿಕ ನೆರವು ನೀಡುತ್ತಿದೆ. ವರ್ಷಕ್ಕೆ ಮೂರು ಬಾರಿ ಈ ಯೋಜನೆಯಡಿಯಲ್ಲಿ ರೈತರ ಖಾತೆಗೆ 2000 ರೂಪಾಯಿ ಕಳುಹಿಸಲಾಗುತ್ತಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತದೆ. ಅಕ್ಟೋಬರ್ 2022ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ 12ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದರು. ಇನ್ನೂ ಈ ಯೋಜನೆ ರೈತರಿಗೆ ಬಹಳಷ್ಟು ಸಹಾಯಕವಾಗಿದೆ. ರೈತರಿಗೆ ಆರ್ಥಿಕವಾಗಿ ನೆರವು ನೀಡಿದೆ