ಹೆಂಡತಿನ ಮೆಚ್ಚಿಸೋಕೆ 70 ರ ವೃದ್ಧ ಮಾಡಿದ್ರು ಸಖತ್ ಡ್ಯಾನ್ಸ್ | ನಕ್ಕು ನಕ್ಕು ಸುಸ್ತಾಗಿ ಹೋದ ಮುದಿ ಜೀವ! ವೀಡಿಯೊ ವೈರಲ್

ವಯಸ್ಸಾಗುತ್ತ ಹೋದಂತೆ ಚಿಂತೆಯ ಸುಳಿಗೆ ಸಿಲುಕಿ ಹಾಸಿಗೆ ಹಿಡಿಯುವವರೆ ಹೆಚ್ಚು. ಅದರಲ್ಲೂ ಕೂಡ ಬಾಲ್ಯದಲ್ಲಿ ಇದ್ದ ಉತ್ಸಾಹದ ಚಿಲುಮೆ ಕುಗ್ಗಿ ವಯಸ್ಸಾಗುತ್ತಾ ಹೋದಂತೆ ಕಾಲಿನ ಸೆಳೆತ, ಸುಸ್ತು ಕಾಡಿದರೆ, ಇನ್ನೊಂದೆಡೆ ಸಕ್ಕರೆ ನಾನಿದ್ದೇನೆ ಎಂದು ತೋರ್ಪಡಿಸಿ ವ್ಯಕ್ತಿಯ ಶಕ್ತಿಯನ್ನು ತಗ್ಗಿಸುತ್ತದೆ. ಆದರೆ ಈ ನಡುವೆ ವಯಸ್ಸಾದರೂ ಚಿರಯೌವ್ವನದ ಯುವಕನಂತೆ ಉತ್ಸಾಹದಿಂದ ಕುಣಿಯುವ ವೀಡಿಯೊ ವೈರಲ್ ಆಗಿ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ.

 

ಉತ್ಸಾಹ ಎನ್ನುವುದು ಪರಸ್ಪರ ಹೊಮ್ಮುವಂತಹದಾಗಿದ್ದು, ವಯಸ್ಸಾದಂತೆ ನನಗೆ ನೀನು.. ನಿನಗೆ ನಾನು.. ಎಂಬಂತೆ ಅವಲಂಬಿತ ಜೀವನ ಗಂಡಹೆಂಡತಿಯಲ್ಲಿ ಅನಿವಾರ್ಯವಾಗುತ್ತಿದ್ದಂತೆ ಆಗಾಗ ಸಣ್ಣಪುಟ್ಟ ವಿಚಾರಗಳಲ್ಲೂ ಕೂಡ ಸಂತೋಷ ಕಾಣುವ ಪ್ರಯತ್ನ ನಡೆಸುವುದು ಸಹಜ.

ನೃತ್ಯ ಕೇವಲ ಕಲೆಯಲ್ಲ , ಇದು ಸಂತೋಷವನ್ನು ವ್ಯಕ್ತಪಡಿಸಲು ಕೂಡ ಬಳಸಿಕೊಳ್ಳಬಹುದು. ವಿನಂತಿಯ ಮೇರೆಗೆ ಈ ವಿಡಿಯೋ ಅಪ್​ಲೋಡ್ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿರುವ ಮಗಳು, ‘ನಿಮ್ಮೊಳಗಿನ ಮಗುವನ್ನು ಸದಾ ಜೀವಂತವಾಗಿರಿಸಿಕೊಂಡರೆ ನಿಮ್ಮ ಸುತ್ತಮುತ್ತಲಿನ ವಾತಾವರಣ ತಾನಾಗಿಯೇ ಖುಷಿಯಿಂದ ಕೂಡಿರುತ್ತದೆ

70ರ ನನ್ನ ಅಪ್ಪ 10ರ ಹರೆಯದವರ ಹಾಗೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಇದೋ ನೋಡಿ ನನ್ನ ಅಪ್ಪ ಅಮ್ಮ.’ ಎಂಬ ಒಕ್ಕಣೆಯನ್ನು ಮಗಳು ಶ್ರುತಿ ವಾಸುದೇವನ್​ ಈ ವಿಡಿಯೋಗೆ ಬರೆದು ಅಪ್​ಲೋಡ್ ಮಾಡಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ 70ರ ಅಜ್ಜ, ತನ್ನ ಹೆಂಡತಿಗಾಗಿ ಬೀಸ್ಟ್​ ಸಿನೆಮಾದ ಅರೇಬಿಕ್​ ಕುತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋವನ್ನು ಮಿಲಿಯನ್​ ಗಿಂತಲೂ ಹೆಚ್ಚು ಜನರ ಮನ ಸೆಳೆದಿರುವ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.instagram.com/reel/CkaMeXrAHiX/?utm_source=ig_web_copy_link

ಈವರೆಗೆ 11 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದರೆ, ಅನೇಕರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ‘ಎಂಥ ಚೆಂದದ ವಿಡಿಯೋ ಇದು, ನನ್ನ ಈ ದಿನವನ್ನು ಸಮರ್ಪಕವಾಗಿಸಿತು’ ಎಂದೊಬ್ಬರು ಕಮೆಂಟ್ ಮಾಡಿದ್ದಾರೆ.

‘ಕಪಲ್​ ಗೋಲ್​ ಎಂದರೆ ಹೀಗಿರಬೇಕು‘ ಎಂದು ಮತ್ತೊಬ್ಬರು ಹೇಳಿದ್ದಾರೆ.
ಅಂತೂ ಇಂತೂ ಉತ್ಸಾಹ ತುಂಬುವ ಈ ವೀಡಿಯೊ ಮತ್ತೊಂದು ಜೀವಕ್ಕೆ ಸ್ಪೂರ್ತಿಯಾಗುವ ಜೊತೆಗೆ ನಗುವಿನ ಅಲೆಯನ್ನೂ ಹಬ್ಬುವುದರಲ್ಲಿ ಸಂಶಯವಿಲ್ಲ.

Leave A Reply

Your email address will not be published.