ಹಿಂದೂ ಧರ್ಮ ಅನ್ನೋದು ಇಲ್ಲ, ಅದೊಂದು ಬಳುವಳಿ – ಬಿಜೆಪಿ ಶಾಸಕ ರಮೇಶ್ ಕತ್ತಿ ಹೇಳಿಕೆ

0 11

‘ಹಿಂದೂ’ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯ ಕುರಿತು ಇದೀಗ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ ಅವರ ಹೇಳಿಕೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ರಮೇಶ್ ಕತ್ತಿ ಅವರು, ‘ಹಿಂದೂ ಧರ್ಮ ಅನ್ನೋದು ಇಲ್ಲ. ಅದೊಂದು ಬಳುವಳಿ. ಅದು ಜೀವನ ಶೈಲಿ’ ಎಂದಿದ್ದಾರೆ.

ಹಿಮಾಲಯ ಪರ್ವತ ಒಂದು ಕಡೆ ಹಾಗೂ ಹಿಂದೂ ಮಹಾ ಸಾಗರ ಒಂದು ಕಡೆ, ಅದೇ ರೀತಿ ಸಿಂಗ್ ಪ್ರಾಂತದಲ್ಲಿ ನೆಲೆಸುವ ಜನಾಂಗಕ್ಕೆ ಯುರೋಪಿಯನ್ಸ್ , ಆಸ್ಟ್ರೇಲಿಯನ್ಸ್, ಅಮೆರಿಕನ್ಸ್ ಎಂದು ಕರೆಯುವ ಹಾಗೆ ಹಿಂದೂ ಅಂತ ಕರೆಯಲಾಗಿದೆ. ಅದು ಧರ್ಮ ಅಲ್ಲ, ಅದೊಂದು ಬಳುವಳಿ, ಅದು ಜೀವನ ಶೈಲಿ ಎಂದು ಹೇಳಿದ್ದಾರೆ. ಇನ್ನೂ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಪ್ಲೋಡ್ ಮಾಡಿದ್ದಾರೆ. ಸತೀಶ್ ಜಾರಕಿಹೊಳಿಯ ಹೇಳಿಕೆಯ ನಂತರ ಈ ವಿಡಿಯೋ ರಾಜಕೀಯ ಚರ್ಚೆಗೆ ಕಾರಣವಾಗಿದೆ.

Leave A Reply