Chocolate Cake : ಫಟಾಫಟ್ ಅಂತ ಕೇಕ್ ಮಾಡಬೇಕೇ? ಇಲ್ಲಿದೆ ಆರು ನಿಮಿಷದಲ್ಲಿ ಸಿದ್ಧ ವಾಗುವ ರುಚಿಕರವಾದ ಕೇಕ್ ರೆಸಿಪಿ!!!

ಚಾಕೊಲೇಟ್ ಸೇರಿದಂತೆ ಕೆಲವೊಂದು ಸಿಹಿತಿನಿಸು ಅಂದರೆ ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚು. ಅಲ್ಲದೇ ದೊಡ್ಡವರು ಸಹ ಚಿಕ್ಕ ಮಕ್ಕಳಂತೆ ಚಾಕೊಲೇಟ್ ತಿನ್ನುತ್ತಾರೆ. ಇಂತಹ ಸಿಹಿಬಾಕರಿಗಾಗಿಯೇ ಇಲ್ಲೊಂದು ಥಟ್ ಎಂದು ತಯಾರಾಗುವ ಚಾಕೊಲೇಟ್ ಕೇಕ್ ರೆಸಿಪಿ ಇದೆ. ಇದನ್ನು ಹೇಗೆ ತಯಾರಿಸವುದು ಎಂದು ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು:
ಕೋಕೋ ಪೌಡರ್ -⅓ ಕಪ್, ಬಿಸಿನೀರು -⅓ ಕಪ್ ,ಕಾಫಿಪುಡಿ- 1 ಚಮಚ, ಸಕ್ಕರೆ – 1/2 ಕಪ್, ವೆಜಿಟೇಬಲ್ ಆಯಿಲ್- ⅓ ಕಪ್, ಮೊಸರು – 1ಕಪ್, ಮೈದಾ ಹಿಟ್ಟು -1 ಕಪ್, ,ಬೇಕಿಂಗ್ ಪೌಡರ್ – 1ಟೀಸ್ಪೂನ್, ಅಡಿಗೆ ಸೋಡಾ -1 ಟೀಸ್ಪೂನ್.
ಮಾಡುವ ವಿಧಾನ:
ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿಕೊಂಡು 5 ನಿಮಿಷಗಳ ಕಾಲ ಮೈಕ್ರೋವೇವ್ ನಲ್ಲಿ ಬೇಕ್ ಮಾಡಿ. ಸುಲಭವಾದ ಕೇಕ್ ಸವಿಯಲು ಸಿದ್ಧ. ಇನ್ನಷ್ಟು ಆಕರ್ಷಕವಾಗಿ ಕಾಣಲು ಈ ಕೇಕ್ ಅನ್ನು ಅಲಂಕರಿಸಿಕೊಳ್ಳಿ. ಅಲಂಕಾರಕ್ಕಾಗಿ 1 ಚಮಚ ಎಣ್ಣೆ ಅಥವಾ ಬೆಣ್ಣೆಯೊಂದಿಗೆ ಒಂದು ಕಪ್ ಚಾಕೊಲೇಟ್ ಕರಗಿಸಿ. ಈ ಕರಗಿದ ಚಾಕೊಲೇಟ್ ಅನ್ನು ಈಗಾಗಲೇ ತಯಾರಾದ ಕೇಕ್ ಮೇಲೆ ಚೆನ್ನಾಗಿ ಸುರಿಯಿರಿ.
ಸಿಹಿಯನ್ನು ಇಷ್ಟಪಡುವವರಿಗಾಗಿ ವಿಶೇಷವಾಗಿ ಈ ರೆಸಿಪಿಯನ್ನು ತಯಾರಿಸಲಾಗಿದೆ. ಕೇವಲ ಆರು ನಿಮಿಷಗಳಲ್ಲಿ, ಮೊಟ್ಟೆ ಬಳಸದೇ, ಮನೆಯಲ್ಲಿಯೇ ಆರೋಗ್ಯಕರ ಹಾಗೂ ರುಚಿಕರವಾದ ಚಾಕೊಲೇಟ್ ಕೇಕ್ ಅನ್ನು ಈ ರೀತಿ ತಯಾರಿಸಿ.