BSNL ನ ಹೊಸ ಪ್ಲ್ಯಾನ್ | Jio – Airtel ಗೆ ನಡುಕ ಹುಟ್ಟಿಸಿದೆ ಈ ಅಗ್ಗದ ಪ್ಲ್ಯಾನ್!
ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ (Reliance Jio) ಹಾಗೂ ಏರ್ಟೆಲ್ (Airtel) ಇತ್ತೀಚೆಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿರುವುದಲ್ಲದೆ, ಜೊತೆಗೆ 5ಜಿ ಸೇವೆಯನ್ನು ಕೂಡ ಪರಿಚಯಿಸುತ್ತಿರುವುದರಿಂದ ಹೀಗಿರುವಾಗ ಬಿಎಸ್ಎನ್ಎಲ್ ಸದ್ದಿಲ್ಲದೆ ಎರಡು ಹೊಸ ಧಮಾಕ ಯೋಜನೆಗಳನ್ನು ಅನಾವರಣ ಮಾಡಿತ್ತು. ಇದೀಗ ಮತ್ತೊಮ್ಮೆ ಹೊಸ ಪ್ಲಾನ್ ಮೂಲಕ ಜನರ ಮನ ಗೆಲ್ಲುವ ಪ್ರಯತ್ನ ನಡೆಸುತ್ತಿದೆ.
ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರುಕಟ್ಟೆ ಯಲ್ಲಿ ತನ್ನದೇ ಛಾಪು ಮೂಡಿಸಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ ಬಿಎಸ್ಎನ್ಎಲ್ (BSNL) ಇದೀಗ ಪಾತಾಳಕ್ಕೆ ಕುಸಿದ ಬಳಿಕ ಮೇಲೇಳಲು ಹರಸಾಹಸ ಪಡುತ್ತಿದೆ. ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್ಎನ್ಎಲ್ ದೊಡ್ದ ಮಟ್ಟದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಯಾಕೇಜ್ ನೀಡಲು ಮುಂದಾಗಿದೆ.
ಬಿಎಸ್ಎನ್ಎಲ್ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೆ, ಮತ್ತೆರಡು ಪ್ಲಾನ್ ಜಾರಿಗೆ ತರಲಾಗಿದೆ .
BSNLನ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ಗ್ರಾಹಕರಿಗೆ ಇಷ್ಟವಾಗುವಂತಿದ್ದು, ಕಡಿಮೆ ವೆಚ್ಚದ ಜೊತೆಗೆ ಹೆಚ್ಚಿನ ಪ್ರಯೋಜನವನ್ನು ಗ್ರಾಹಕರಿಗೆ ನೀಡಲಿದೆ. ಈ ಹೊಸದೊಂದು ಯೋಜನೆಯಿಂದ ಜಿಯೋ, ಏರ್ಟೆಲ್‌ನಂತಹ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೂ ಕೂಡ ಅಚ್ಚರಿ ಮೂಡಿಸಿ ನಡುಕ ಹುಟ್ಟಿಸಿದೆ.
BSNLನ ಈ ಪ್ಲಾನ್ ಬೆಲೆ 775 ರೂಪಾಯಿಈ ಯೋಜನೆಯಲ್ಲಿ ಬಿಎಸ್ಎನ್ಎಲ್ ಗ್ರಾಹಕರಿಗೆ BSNL ಭಾರತ್ ಫೈಬರ್ 75 ದಿನಗಳವರೆಗೆ ಇಂಟರ್ನೆಟ್ ಸೇವೆಯನ್ನು ನೀಡಲಿದ್ದು, ಈ ಕೊಡುಗೆಯನ್ನು ಸೀಮಿತ ಅವಧಿಯಲ್ಲಿ ಮಾತ್ರ ಖರೀದಿಸಬಹುದಾಗಿದೆ. ಈ ಯೋಜನೆಯನ್ನು ಸಕ್ರಿಯಗೊಳಿಸಲು ಬಯಸುವವರಿಗೆ ನವೆಂಬರ್ 15ರವರೆಗೆ ಮಾತ್ರ ಅವಕಾಶವಿದೆ.
ಈ ಪ್ಲಾನ್ ನಲ್ಲಿ ಹಲವು ವಿಶೇಷತೆಗಳಿದ್ದು, ಪ್ರತಿ ತಿಂಗಳು 2 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ . ಜೊತೆಗೆ ಹೈ ಸ್ಪೀಡ್ ಇಂಟರ್ನೆಟ್ ಅನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. 2 ಟಿಬಿ ಡೇಟಾ ಖಾಲಿಯಾದ ಮೇಲೆ ಮುಂದೇನು ಎಂಬ ಪ್ರಶ್ನೆ ಮೂಡುವುದು ಸಹಜ. ಡೇಟಾ ಮುಗಿದ ನಂತರವೂ ಗ್ರಾಹಕರು ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗಲಿದೆ.
ಏಕೆಂದರೆ ಇದು ಅನಿಯಮಿತವಾಗಿದ್ದು, ಆದರೆ ಇಂಟರ್ನೆಟ್ ವೇಗ 10 Mbps ಗೆ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲದೆ, ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಿಕೊಂಡಲ್ಲಿ SonyLIV, G5 ಮತ್ತು Voot ನಂತಹ ಅನೇಕ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಉಚಿತವಾಗಿ OTT ಚಂದಾದಾರಿಕೆಗಳನ್ನು ಪಡೆಯಬಹುದಾಗಿದೆ.
ಇದಕ್ಕೆ ಪ್ರತ್ಯೇಕ ವಾಗಿ ಹಣ ಪಾವತಿಸಬೇಕಾದ ಅವಶ್ಯಕತೆ ಇಲ್ಲ. ಹಾಗಾಗಿ, ಬಿಎಸ್ಎನ್ಎಲ್ ಗ್ರಾಹಕರಿಗೆ ಈ ಆಫರ್ ಪ್ರಯೋಜನಕಾರಿಯಾಗಬಹುದು.