ರಸ್ತೆ ಬದಿಯಲ್ಲಿ ಅಂಗಡಿ ಮಾಡಿಕೊಂಡವರಿಗೆ ಶಾಕಿಂಗ್ ನ್ಯೂಸ್ ನೀಡಿದ ಬಿಬಿಎಂಪಿ!

ವ್ಯಾಪಾರಿಗಳು ತಮ್ಮ ಜೀವನದೂಗಿಸಲು ಬೆಂಗಳೂರು ನಗರದ ರಸ್ತೆಗಳ ಬದಿಯಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ಹಾಕಿಕೊಂಡಿದ್ದರು. ಆದರೆ ಇದೀಗ ಅವರಿಗೆ ಬಿಬಿಎಂಪಿ ಬಹುದೊಡ್ಡ ಶಾಕ್ ನೀಡಿದೆ. ನಗರದ 1,400 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿ ಇರುವ ವ್ಯಾಪಾರಿಗಳ ಅಂಗಡಿಗಳ ತೆರವಿಗೆ ಬಿಬಿಎಂಪಿ ಸಜ್ಜಾಗಿದೆ. ಕಾರಣ, ಪಾದಚಾರಿಗಳಿಗೆ ಇದರಿಂದ ಸಮಸ್ಯೆ ಆಗುತ್ತಿದೆ ಎಂದು ಬೀದಿಬದಿ ವ್ಯಾಪಾರಿಗಳ ತೆರವು ಮಾಡಲಾಗುತ್ತಿದೆ.

ರಾಜಕಾಲುವೆಯ ಒತ್ತುವರಿ ತೆರವು ಆಯ್ತು, ಇದೀಗ ಬೀದಿಬದಿ ಒತ್ತುವರಿ ತೆರವಿಗೆ ಪಾಲಿಕೆ ನಿರ್ಧಾರ ಕೈಗೊಂಡಿದೆ. ಬೆಂಗಳೂರಿನ ಬೀದಿಯುದ್ದಕ್ಕೂ ತಳ್ಳುಗಾಡಿ ಮತ್ತು ಸಣ್ಣಪುಟ್ಟ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಜನಸಾಮಾನ್ಯರಿಗೆ ಈ ಮೂಲಕ ಬಿಬಿಎಂಪಿ ಬಹುದೊಡ್ಡ ಶಾಕ್ ನೀಡಿದೆ. ಈ ಸ್ಥಳವನ್ನು ತೆರವು ಮಾಡಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ.

ಹಾಗಾಗಿ, ಹೊಸ ಸರ್ವೇ ನಡೆಸುವಂತೆ ಬಿಬಿಎಂಪಿ ಆಯುಕ್ತರಿಂದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಕಾರಿಗಳಿಗೆ ಸೂಚನೆ ನೀಡಿದ್ದಾರೆ. 2017ರಲ್ಲಿ ಬಿಬಿಎಂಪಿ , ಬೀದಿಬದಿ ವ್ಯಾಪಾರಿಗಳ ಸರ್ವೇ ನಡೆಸಿದ್ದು, ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಇದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ 25 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಅಧಿಕೃತ ಗುರುತಿನ ಚೀಟಿ ನೀಡಲಾಗಿದೆ.

ಆದರೆ ಬೀದಿಬದಿ ವ್ಯಾಪಾರಿಗಳಿಗೆ ಸಬ್ ಆರ್ಟಿರಿಯಲ್ ರಸ್ತೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಜೊತೆಗೆ ನಗರದ ಎಂಟೂ ವಲಯಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆಂದು ಮಾರ್ಕೆಟ್ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆಯಾಗುತ್ತಿದೆ. ಹಾಗಾಗಿ ಎಲ್ಲಾ ವಲಯಗಳಲ್ಲಿನ RI ವಿಭಾಗದ ಇಂಜಿನಿಯರ್ ಗಳಿಗೆ ಮಾಹಿತಿ ಕಲೆಹಾಕುವಂತೆ ಸೂಚಿಸಲಾಗಿದೆ.

ಬಿಬಿಎಂಪಿಯ ನಿರ್ಧಾರಕ್ಕೆ ಬೀದಿಬದಿಯ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಬೀದಿಬದಿಯಲ್ಲಿ ವ್ಯಾಪಾರ ಮಾಡುವವರ ಹೊಟ್ಟೆ ಮೇಲೆ ಪಾಲಿಕೆ ಹೊಡೆಯುತ್ತಿದೆ. ಚೆನ್ನಾಗಿ ನಡೆಯುತ್ತಿದ್ದ ಜೀವನಕ್ಕೆ ಕಲ್ಲು ಹಾಕಿದರು. ಈಗ ಬೇರೆ ಜಾಗ ಮಾಡಿಕೊಟ್ಟರೆ ನಮ್ಮನ್ನು ಹುಡುಕಿಕೊಂಡು ಗ್ರಾಹಕರು ಬರಲ್ಲ. 2014ರಲ್ಲಿ ಬಿಬಿಎಂಪಿಯೇ ಮಾಡಿರುವ ಬೀದಿಬದಿ ವ್ಯಾಪಾರದ ಕಾನೂನು ಅದನ್ನು ಪಾಲಿಕೆ ಪಾಲಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪಾಲಿಕೆ ಬೀದಿಬದಿ ವ್ಯಾಪಾರಿಗಳ ಸರ್ವೇಗೆ ಮುಂದಾಗಿದೆ. ಹಾಗೇ ಶೀಘ್ರವೇ ಅಧಿಕೃತ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.

ಅದಲ್ಲದೆ, ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದವರ ವಿರುದ್ಧ ಎಫ್ಐಆರ್ ಹಾಕುವಂತೆ ನಗರ ಪೊಲೀಸ್ ಆಯುಕ್ತರಿಗೆ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರು ಪತ್ರವನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ರಸ್ತೆ ಅಗೆದರೆ ಇನ್ನು ಮುಂದೆ FIR ದಾಖಲಾಗುತ್ತದೆ. BESCOM, BWSSB ಅಥವಾ ಸಾರ್ವಜನಿಕರು ಯಾರೇ ರಸ್ತೆ ಅಗೆದರೂ ಕಡ್ಡಾಯವಾಗಿ ಅನುಮತಿಯನ್ನು ತೆಗೆದುಕೊಳ್ಳಬೇಕು ಹಾಗೂ ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕು ಎಂದು ಬಿಬಿಎಂಪಿ ತಿಳಿಸಿದೆ.

Leave A Reply

Your email address will not be published.