ಕಿಚ್ಚನ ಚಪ್ಪಾಳೆ ಈ ಸಲ ನಂಗೆ ಬರಬೇಕು : ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಸೀಸನ್ 9 ಸಖತ್ ಆಗಿ ನಡೀತಾ ಇದೆ. ಆಚಾನಕವಾಗಿ ಸಾನಿಯಾ ಅಯ್ಯರ್ ಮನೆಯಿಂದ ಹೊರಗೆ ಹೋಗಿದ್ದು ಎಲ್ರಿಗೂ ಆಶ್ಚರ್ಯವನ್ನು ತಂದು ಬಿಟ್ಟಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಯನ್ನು ಅಂತೂ ಕೇಳೋದೇ ಬೇಡ. ಕೂತಾಗ ನಿಂತಾಗ ಸಾನಿಯಾ ,ಸಾನಿಯಾ ಅಂತ ಅಳ್ತಾ ಇದ್ದಾನೆ. ತಲೆಗೆ ಮಿಸ್ ಯೂ ಸಾನಿಯಾ ಅಂತ ಪಟ್ಟಿಯಲ್ಲಿ ಬರೆದು ಕಟ್ಟಿ ಕೊಂಡು ಓಡಾಡ್ತಾ ಇದ್ದಾನೆ.

ಈ ವಿಷಯಗಳ ನಡುವೆ ಬಿಗ್ ಬಾಸ್ ಒಬ್ಬರ ತಪ್ಪಿಗೆ ಮನೆಯವರಿಗೆ ಎಲ್ಲರಿಗೂ ಶಿಕ್ಷೆ ನೀಡಿದ್ದಾರೆ. ಜೈಲು ಶಿಕ್ಷೆಯಲ್ಲಿ ಅನುಪಮಾ ಇದ್ದಾಗ ಅವರೇ ತರಕಾರಿ ಹೆಚ್ಚಬೇಕು. ಆದರೆ ಗುರೂಜಿ ಹೆಚ್ಚಿದ್ದಾರೆ. ಈ ವಿಷಯಕ್ಕೆ ಮನೆಯಲ್ಲಿ ದೊಡ್ಡ ಜಗಳವೇ ಆಯ್ತ್ತು. ಯಾಕೆಂದರೆ ಗುರೂಜಿ ಈರುಳ್ಳಿ ಹೆಚ್ಚಿದ್ದಕ್ಕೆ ಮನೆಯಲ್ಲಿ ಇದ್ದ ಎಲ್ಲಾ ತರಕಾರಿಯನ್ನು ಬಿಗ್ ಬಾಸ್ ಗೆ ಮರಳಿ ಕೊಡುವಂತೆ ಆಜ್ಞೆ ಬಂತು.

ಇದಾದ ಬಳಿಕ ಮನೆಯವರಿಗೆ ಲಕ್ಸೂರಿ ಬಜೆಟ್ ಟಾಸ್ಕ್ ಕೊಟ್ಟಿದ್ರು. ಇದರಲ್ಲಿ ಹಲವಾರು ಪದಾರ್ಥಗಳನ್ನು ಮನೆಯವರು ಪಡೆದುಕೊಂಡರು. ಅದರಲ್ಲಿ ಚಿಕನ್ ಕೂಡ ಒಂದು. ಹೀಗೆ ಮನೆಯಲ್ಲಿ ಯಾವ ತರಕಾರಿನೂ ಇಲ್ದೆ ಚಿಕನ್ ಫ್ರೈ ಮಾಡಿದ್ದಾರೆ ಗುರುಜಿ. ಹೀಗಾಗಿ ” ನೋಡಿ ಬಿಗ್ ಬಾಸ್, ಈರುಳ್ಳಿ, ಟೊಮೆಟೊ ಇಲ್ದೆ ಚಿಕನ್ ಮಾಡಿದೀನಿ. ಈ ಸಲ ಕಿಚ್ಚನ ಚಪ್ಪಾಳೆ ನಂಗೆ ಬರಬೇಕು, ಚಿಕನ್ ಮಾಡಿದ್ದಕ್ಕೆ” ಅಂತ ಗುರೂಜಿ ಹೇಳಿದ್ದಾರೆ.

ಒಟ್ನಲ್ಲಿ ದೊಡ್ಡ ಮನೆಯಲ್ಲಿ ಇರೋ ಮಂದಿ ಚಿಕನ್ ನ ಯಾವ ತರಕಾರಿ ಇಲ್ದೆ ತಿಂದ್ರು.

Leave A Reply

Your email address will not be published.