ಸೂಪರ್ ಫಾಸ್ಟ್ | ಮದುವೆಯಾದ 7 ತಿಂಗಳಿಗೇ ಅಮ್ಮಳಾದ ಆಲಿಯಾ ಭಟ್ | ಸಖತ್ ಟ್ರೋಲ್ ಗೊಳಗಾಗುತ್ತಿರುವ ನಟಿ!!!

ಬಾಲಿವುಡ್ ಸೂಪರ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಕಳೆದ ಏಪ್ರಿಲ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಗೆ ತೀರಾ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಿದ್ದರು. ಈ ಬಳಿಕ ಜೂನ್ ತಿಂಗಳಿನಲ್ಲಿ ತಾವು ಪೋಷಕರಾಗುತ್ತಿರುವ ಬಗ್ಗೆ ಮಾಹಿತಿಯನ್ನು ಕೂಡ ನೀಡಿದ್ದರು. ಮದುವೆ ಬಳಿಕ ಇಬ್ಬರು ಒಟ್ಟಿಗೆ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರವು ತೆರೆ ಕಂಡಿದೆ. ಇದರ ಜೊತೆಗೆ ಆಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸಿದ್ದು, ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಸದ್ಯ ನಿಂತಿದ್ದು, ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ರಣಬೀರ್ ಕಪೂರ್ ಜೊತೆ ಮದುವೆಯಾಗಿ 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಸಖತ್ ಟ್ರೋಲ್ ಆಗುತ್ತಿದ್ದು, ಇತ್ತೀಚಿಗಷ್ಟೆ ಅಲಿಯಾ ಭಟ್ ಮೊದಲ ಮಗುವಿಗೆ ಜನ್ಮ ನೀಡಿದ್ದು, ಬಾಲಿವುಡ್ ಸ್ಟಾರ್ ನಟಿ ಸದ್ಯ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಆಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ನವೆಂಬರ್ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಲಿಯಾ ದಂಪತಿಗೆ ಗಣ್ಯರಿಂದ ಶುಭ ಹಾರೈಕೆಗಳು ಹರಿದು ಬರುತ್ತಿದ್ದು, ಇದರ ಜೊತೆಗೆ ಅಭಿಮಾನಿಗಳು ಕೂಡ ಶುಭ ಕೋರುತ್ತಿದ್ದಾರೆ.


Ad Widget

ನವೆಂಬರ್ 6ರ ಬೆಳಿಗ್ಗೆ, ಆಲಿಯಾ ಮತ್ತು ರಣಬೀರ್ ಇಬ್ಬರೂ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಸ್ವಲ್ಪ ಸಮಯದಲ್ಲೇ ನೀತು ಕಪೂರ್ ಮತ್ತು ಮತ್ತು ಅಲಿಯಾ ಭಟ್ ತಾಯಿ ಸೋನಿ ರಜ್ದಾನ್ ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ. ಆಗಲೇ ಆಲಿಯಾ ಭಟ್‌ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

ಈ ಬಳಿಕ ಅಲಿಯಾ ದಂಪತಿ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಆಲಿಯಾ ಮತ್ತು ರಣಬೀರ್ ದಂಪತಿ ಮದುವೆಯಾಗಿ 7 ತಿಂಗಳಿಗೆ ಮಗು ಪಡೆದ ವಿಚಾರಕ್ಕೆ ನೆಟ್ಟಿಗರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ನೆಟ್ಟಿಗರು ಆಲಿಯಾ ಮತ್ತು ರಣಬೀರ್ ವೆಡ್ಡಿಂಗ್ ದಿನಾಂಕ ಮತ್ತು ಡೆಲಿವರಿ ದಿನಾಂಕವನ್ನು ಬರೆದು ಆಲಿಯಾ ಅವರನ್ನು ಟ್ರೋಲ್ ಮಾಡುತ್ತಿದ್ದು, ‘ಮದುವೆಯಾಗಿದ್ದು ಏಪ್ರಿಲ್ 18ರಂದು ಮಗುವಿಗೆ ಜನ್ಮ ನೀಡಿದ್ದು ನವೆಂಬರ್ 6. ಇದು ಕೇವಲ 6 ತಿಂಗಳು ಮತ್ತು 23 ದಿನಗಳಾಗಿದೆಯಷ್ಟೇ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.

ಮತ್ತೊಬ್ಬರು ಕಮೆಂಟ್ ಮಾಡಿ, ‘ ಆಲಿಯಾ ವಾಹ್, ನಿಮ್ಮಿಬ್ಬರಿಗೂ ಅಭಿನಂದನೆಗಳು. ಬಾಲಿವುಡ್ ಯಾವಾಗಲೂ ಅದ್ಭುತ ಕೆಲಸಗಳನ್ನು ಮಾಡುತ್ತದೆ. ಇದೀಗ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿರುವುದು ನಿಜವಾಗಿಯೂ 9 ತಿಂಗಳಿಗೆ ಬೆಂಕಿ ಹಚ್ಚಿದೆ!.. ನಿಮಗೆ ಮತ್ತು ಮಗುವಿಗೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ’ ಎಂದು ಕಮೆಂಟ್ ಮೂಲಕ ಈ ಜೋಡಿಯನ್ನು ಕಾಲೆಳೆಯುವ ಪ್ರಯತ್ನನಡೆಸಿದ್ದಾರೆ.

ಆಲಿಯಾ ಸದ್ಯ ಆಸ್ಪತ್ರೆಯಲ್ಲಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹೇಳಿದ್ದಾರೆ. ನೀತು ಕಪೂರ್ ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆಲಿಯಾಗೆ ಹೆಣ್ಣು ಮಗುವಾಗಿರುವುದು ಇಡೀ ಕಪೂರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಸದ್ಯದಲ್ಲೇ ಆಲಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

error: Content is protected !!
Scroll to Top
%d bloggers like this: