Sania Mirza Shoaib Malik : ಈ ಕ್ರೀಡಾಪಟುಗಳ ದಾಂಪತ್ಯದಲ್ಲಿ ಬಿರುಕು? ಅವನಿಲ್ಲಿ ಇವಳಿಲ್ಲಿ…ಏನಿದು ನಿಜಾಂಶ?

ಭಾರತದ ಪ್ರಸಿದ್ಧ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ತಮ್ಮ ಮದುವೆಯ ಬಗ್ಗೆ 2010 ರಲ್ಲಿ ಜಗತ್ತಿನ ಮುಂದೆ ಅಧಿಕೃತವಾಗಿ ಘೋಷಣೆ ಮಾಡಿದರು. ಆ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನದಲ್ಲಿ ಇವರ ಬಗ್ಗೆ ಸಾಕಷ್ಟು ಟೀಕೆಗಳು ಕಂಡುಬಂದವು. ಅಂದಿನಿಂದ ಇಂದಿನವರೆಗೂ ಅವರಿಬ್ಬರ ದಾಂಪತ್ಯದ ಬಗ್ಗೆ ಒಂದಲ್ಲಾ ಒಂದು ರೀತಿಯಲ್ಲಿ ಹಲವು ವದಂತಿಗಳು ಹರಡುತ್ತಲೇ ಇದೆ. ಈಗ ಮತ್ತೆ ಅವರಿಬ್ಬರೂ ದೂರವಾಗುತ್ತಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದೆ.

ಪಾಕಿಸ್ತಾನ ಮಾಧ್ಯಮದ ಒಂದು ಟೆಲಿವಿಷನ್ ಶೋನಲ್ಲಿ ಶೋಯೆಬ್ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಅಲ್ಲದೆ ಸಾನಿಯಾ ಜೊತೆಗಿನ ಸಂಬಂಧ ಮುರಿದು ಬೀಳುವ ಹಂತದಲ್ಲಿದೆ ಅಂತಲೂ ವರದಿ ನೀಡಿದ್ದಾರೆ. ಆದರೆ ಭಾರತೀಯ ಟೆನಿಸ್ ಸುಂದರಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿವೆ.

ಸಾನಿಯಾ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೂಲಕ ಕಳೆದ ಕೆಲವು ದಿನಗಳಿಂದ ಹಲವಾರು ವಿಚಾರ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಶೋಯೆಬ್ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಯಾವುದೇ ವಿಚಾರ ತಿಳಿಸಿಲ್ಲ.

ಸಾನಿಯಾ ಇತ್ತೀಚೆಗೆ ತನ್ನ ಮಗ ಇಜಾನ್ ಮಲಿಕ್ ಮಿರ್ಜಾ ಕುರಿತು ಪೋಸ್ಟ್‌ ಹಂಚಿಕೊಂಡಿದ್ದು ಅದರಲ್ಲಿ- ಜೀವನದ ಈ ಕಷ್ಟದ ಸಂದರ್ಭದಲ್ಲಿ, ಇಂತಹ ಕ್ಷಣಗಳು ನನಗೆ ತುಂಬಾ ವಿಶೇಷವಾಗಿವೆ. ಇಬ್ಬರೂ ದೂರವಾದರೂ ಮಗನ ಜವಾಬ್ದಾರಿಯನ್ನು ಹೊರುತ್ತಾರೆಂದು ಗೊತ್ತಾಗಿದೆ ಅಂತ ಬರೆದಿದ್ದಾರೆ.

ಕ್ರೀಡಾಪಟು ದಂಪತಿಗಳಾದ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಇಬ್ಬರೂ ತಮ್ಮ ತಮ್ಮ ವೃತ್ತಿಗಳಲ್ಲಿ ಬಹಳ ಪ್ರಸಿದ್ಧರು. ಗಂಡ ಮತ್ತು ಹೆಂಡತಿ ಇಬ್ಬರೂ ಆಗಾಗ್ಗೆ ತಮ್ಮ ಪ್ರೀತಿಯನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ. ಆದರೆ ಅವರ ಬಿಡುವಿಲ್ಲದ ಜೀವನದಿಂದಾಗಿ ಇಬ್ಬರೂ ದೂರವಾಗುತ್ತಾರೆ ಎನ್ನುವ ವದಂತಿಯು ಈಗ ಮತ್ತೆ ಹಬ್ಬುತ್ತಲೇ ಇದೆ.

Leave A Reply

Your email address will not be published.