Banana Peel Benefits : ಬಾಳೆಹಣ್ಣು ಸಿಪ್ಪೆ ಬಿಸಾಡಬೇಡಿ | ಇದರ ಪ್ರಯೋಜನ ಅನೇಕ!
ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದು ನಮಗೆ ತಿಳಿದ ವಿಚಾರವೇ. ಆದರೆ ನಾವು ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಈ ಸಿಪ್ಪೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಒಮ್ಮೆ ಗೊತ್ತಾದರೆ ಖಂಡಿತ ಸಿಪ್ಪೆಯನ್ನು ನೀವು ಬಿಸಾಡುವುದಿಲ್ಲ.
ಈ ಸಿಪ್ಪೆಗಳಲ್ಲಿ ಆ್ಯಂಟಿ ಫಂಗಲ್ ಕಾಂಪೌಂಡ್, ಆ್ಯಂಟಿಬಯೋಟಿಕ್, ನಾರಿನಂಶ, ಪೋಷಕಾಂಶಗಳು ಮತ್ತು ಆರೋಗ್ಯವನ್ನು ಉತ್ತೇಜಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿದ್ದೂ, ಒಳಗಿನ ಚರ್ಮದ ಬಿಳಿ ಭಾಗವನ್ನು ನಾವು ತಿನ್ನಬಹುದು.
ಬಾಳೆಹಣ್ಣಿನಲ್ಲಿ ನಾರಿನಂಶ ಹೇರಳವಾಗಿದ್ದು ತೂಕ ಇಳಿಸಲು ಬಯಸುವವರಿಗೆ ಇದು ಸಹಾಯಕಾರಿ. ಇದರಲ್ಲಿರುವ ವಿಟಮಿನ್ ಡಿ ಮತ್ತು ಆಂಟಿಆಕ್ಸಿಡೆಂಟ್ಗಳು ನರಮಂಡಲ ಮತ್ತು ಚಯಾಪಚಯವನ್ನು ನಿಯಂತ್ರಿಸುತ್ತದೆ.
ನಿದ್ರೆಯ ಸಮಸ್ಯೆಯಿಂದ ಬಳಲುವವರು ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ಸಮಸ್ಯೆ ದೂರವಾಗುತ್ತದೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ರಾಸಾಯನಿಕವು ತುಂಬಿದ್ದು ನಿದ್ರಾಹೀನತೆ ಇರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ನರಹುಲಿಗಳ ಸಮಸ್ಯೆಗೆ ಬಾಳೆಹಣ್ಣಿನ ಚರ್ಮವನ್ನು ರಾತ್ರಿಯಲ್ಲಿ ನರಹುಲಿಗಳ ಮೇಲೆ ಉಜ್ಜಿಕೊಳ್ಳಿ. ಹೀಗೆ ಒಂದು ವಾರ ನಿರಂತರವಾಗಿ ಮಾಡಿದರೆ ನರಹುಲಿಗಳು ಮಾಯವಾಗುತ್ತವೆ ಮತ್ತು ಹೊಸ ನರಹುಲಿಗಳು ರೂಪುಗೊಳ್ಳುವುದಿಲ್ಲ.
ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ಕರುಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಚರ್ಮವನ್ನು ಪ್ರತಿದಿನ ಹಲ್ಲಿನ ಮೇಲೆ ಉಜ್ಜಿದರೆ ಹಳದಿ ನಿವಾರಣೆಯಾಗುತ್ತದೆ ಮತ್ತು ಹಲ್ಲಿನ ಆರೋಗ್ಯ ಸುಧಾರಿಸುತ್ತದೆ.
ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬಾಳೆಹಣ್ಣಿನ ಸಿಪ್ಪೆಯನ್ನು ಮೊಡವೆ ಇರುವ ಜಾಗಕ್ಕೆ ಉಜ್ಜಿ 30 ನಿಮಿಷ ಬಿಟ್ಟು, ನಂತರ ತಣ್ಣೀರಿನಿಂದ ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡಿ. ಇದರಲ್ಲಿರುವ ಅಂಶಗಳು ಮೊಡವೆ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೇ, ಈ ಬಾಳೆಹಣ್ಣಿನ ಸಿಪ್ಪೆ ನಿಮ್ಮ ಚರ್ಮದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ನಿಮ್ಮ ದೇಹದಲ್ಲಿರುವ ಕೆಂಪು ರಕ್ತ ಕಣಗಳನ್ನು ರಕ್ಷಿಸಲು ಬಾಲೆಹಣ್ಣಿನ ಸಿಪ್ಪೆಯು ಸಹಾಯ ಮಾಡುತ್ತದೆ. ಅದರಲ್ಲೂ ಹಸಿರು ಬಾಳೆಹಣ್ಣಿನ ಸಿಪ್ಪೆಗಳು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತವೆ.
ಎಲ್ಲಾ ರೀತಿಯ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಚರ್ಮದ ಡರ್ಮಟೈಟಿಸ್, ತುರಿಕೆ, ಕೀಟ ಕಡಿತ, ದದ್ದುಗಳು, ಸುಕ್ಕುಗಳು ಇತ್ಯಾದಿ ಚರ್ಮದ ಸಮಸ್ಯೆಯಿಂದ ಮುಕ್ತಿ ನೀಡುತ್ತವೆ.
ಮುಖ್ಯವಾದ ಅಂಶವೆಂದರೆ ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನುವುದು ಎಂದರೆ ಹಳದಿ ಭಾಗವನ್ನು ಸಹ ಸೇರಿಸಿ ತಿನ್ನುವುದು ಅಲ್ಲ. ಕೇವಲ ಸಿಪ್ಪೆಯ ಒಳಗಿರುವ ಬಿಳಿಭಾಗವನ್ನು ಮಾತ್ರ ತಿಂದು ಈ ಪ್ರಯೋಜನಗಳನ್ನು ಪಡೆಯಬಹುದು.