94 ರ ಅಜ್ಜಿಯ ಆಸೆ ಈಡೇರಿಸಿದ ಮ್ಯೂಸಿಕ್ ಬ್ಯಾಂಡ್ ಟೀಮ್ | ಆಕೆಯ ಸಂತೋಷದ ಕಣ್ಣೀರಿಗೆ ಸೋತು ಹೋದ ನೆಟ್ಟಿಗರು

ಬದುಕಿರುವಷ್ಟು ದಿನ ಎಲ್ಲವನ್ನು ಅನುಭವಿಸುವುದು ಒತ್ತಮ. ಯಾಕಂದ್ರೆ, ಒಂದಲ್ಲ ಒಂದು ದಿನ ಪ್ರತಿಯೊಬ್ಬರು ಕೂಡ ದೇವರ ಪಾದ ಸೇರುತ್ತಾರೆ. ಆದ್ರೆ, ವಯಸ್ಸಾಗುತ್ತಿದ್ದಂತೆ ಎಲ್ಲಿಯೂ ಹೋಗಲು ಅಸಾಧ್ಯ ಅನ್ನುವ ಪರಿಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ನೂರಾರು ಕನಸಿಗಳನ್ನು ಹೊತ್ತು ಕೊಂಡು ಹಾಸಿಗೆಯನ್ನೇ ಸುಂದರ ಬದುಕು ಮಾಡಿಕೊಳ್ಳಬೇಕಷ್ಟೆ.

ಅದ್ರಂತೆ ಇಲ್ಲೊಂದು ಕಡೆ, 94 ವರ್ಷದ ಅಜ್ಜಿಯೊಬ್ಬರಿಗೆ ಮ್ಯೂಸಿಕ್ ಬ್ಯಾಂಡ್ ಕೇಳೋ ಆಸೆ. ಆದ್ರೆ, ಅವರ ಪರಿಸ್ಥಿತಿ ಎದ್ದು ಹೊರಗೆ ಹೋಗದ ರೀತಿ. ಇಂತಹ ಸಂದರ್ಭದಲ್ಲಿ ತನ್ನ ಆಸೆನಾ ಹೇಗಾದ್ರು ಮಾಡಿ ಈಡೇರಿಸುವವರು ಇದ್ರೆ ಎಷ್ಟು ಚಂದ ಅಲ್ವಾ?.. ಯಾಕಂದ್ರೆ, ಈ ವೈರಲ್ ಆದ ವಿಡಿಯೋ ನೋಡಿದ ಮೇಲೆ ಹೌದು ಅನಿಸಬಹುದೇನೋ..

ಯಾವುದೇ ಒಂದು ತಂಡ ಕಾರ್ಯಕ್ರಮ ಇದ್ದಾಗ ಅಲ್ಲಿಗೆ ತೆರಳೋದು ಕಾಮನ್. ಆದ್ರೆ, ಇಲ್ಲಿ 94 ರ ಅಜ್ಜಿಯ ಆಸೆ ಪೂರೈಸಲು ಸ್ವತಃ ತಂಡವೇ ಮನೆಗೆ ಆಗಮಿಸಿದೆ. ಯಾಕಂದ್ರೆ, ಈ ಅಜ್ಜಿಗೆ ತಮ್ಮ ಮೆಚ್ಚಿನ ಬ್ಯಾಂಡ್​ನ ಸಂಗೀತ ಕಛೇರಿಗೆ ಹೋಗುವ ಆಸೆ ಸಾಧ್ಯವಾಗದೆ ಬೇಸರದಲ್ಲಿದ್ದರು. ಹೀಗಾಗಿ ಅವರ ಸಂತೋಷ ನೋಡಲು ತಂಡ ಈ ರೀತಿ ಕಾರ್ಯಕ್ರಮ ಆಯೋಜನೆ ಮಾಡಿದೆ.

ಬ್ಯಾಂಡ್​ ತಂಡ, ನೇರ ಅಜ್ಜಿಯ ಮನೆಗೆ ಬಂದು ಪುಟ್ಟ ಸಂಗೀತ ಕಛೇರಿ ಮಾಡಿ ಅಚ್ಚರಿ ಮತ್ತು ಅಪಾರ ಸಂತೋಷವನ್ನುಂಟುಮಾಡಿದೆ. ಕಲಾವಿದರ ಸಂಗೀತ ಕೇಳಿ ಅಜ್ಜಿಯ ಹೃದಯತುಂಬಿ ಬಂದಿದೆ. ಸಂತೋಷದ ಕಣ್ಣೀರು ಹರಿಸಿದ್ದಾರೆ.

@cosimoandthehotcoals ಪುಟದಲ್ಲಿ ಮೂಲ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ 1.4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ.  ಇಂದು ಆನ್​ಲೈನ್​ನಲ್ಲಿ ನೋಡುತ್ತಿರುವ ಅತ್ಯುತ್ತಮವಾದ ಸಂಗತಿ ಇದು ಎಂದು ಒಬ್ಬರು ಹೇಳಿದ್ದಾರೆ. ಬಹಳ ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ಸಂಗೀತ ಈ ಅಜ್ಜಿಗೆ ಶಾಂತಿ ಮತ್ತು ಸಂತೋಷವನ್ನು ತರುತ್ತದೆ ಎಂದಿದ್ದಾರೆ. ನೋಡಿ ಅವಳ ಕಾಲ್ಬೆರಳು ತಾಳ ಹಾಕುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಮಾನವೀಯತೆಯ ಮೇಲೆ ಭರವಸೆ ಹೆಚ್ಚಿಸುವ ಇಂಥ ಸಂಗತಿಗಳು ಹೆಚ್ಚಲಿ ಎಂದಿದ್ದಾರೆ ಮಗದೊಬ್ಬರು. ಹೀಗೆ ನೂರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

https://www.instagram.com/reel/CkfIxwyJa0B/?igshid=YmMyMTA2M2Y=

Leave A Reply

Your email address will not be published.