SBI Business Scheme : ಎಸ್ ಬಿಐ ನಲ್ಲಿ 5 ಲಕ್ಷ ಹೂಡಿಕೆ ಮಾಡಿ ಗಳಿಸಿ ತಿಂಗಳಿಗೆ 70 ಸಾವಿರ ರೂಪಾಯಿ!!!

ಮನುಷ್ಯನಿಗೆ ಎಷ್ಟು ಹಣ ಇದ್ದರೂ ಸಾಕಾಗುವುದೇ ಇಲ್ಲ. ಒಂದಲ್ಲ ಒಂದು ಅವಶ್ಯಕತೆಗಳಿಗೆ ಹಣ ಬೇಕಾಗುತ್ತದೆ. ಅದಲ್ಲದೆ ಬೆಲೆ ಏರಿಕೆ, ಹಣದುಬ್ಬರ ಮಿತಿ ಮೀರಿರುವ ಈ ಕಾಲಘಟ್ಟದಲ್ಲಿ ಎಷ್ಟು ಹಣ ಗಳಿಸಿದರೂ ಉಳಿತಾಯ ಮಾಡುವುದು ಕಷ್ಟವೆಂಬ ಪರಿಸ್ಥಿತಿ ಇದೆ. ಅದೇ ರೀತಿ ಸಣ್ಣ-ಪುಟ್ಟ ಉದ್ದಿಮೆಗಳನ್ನು ಸ್ಥಾಪಿಸಿ ಉತ್ತಮ ಆದಾಯ ಗಳಿಸುವುದೂ ಸುಲಭವಲ್ಲ. ಆದರೆ, ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಎಟಿಎಂ ಫ್ರಾಂಚೈಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬರೋಬ್ಬರಿ ಆದಾಯ ಗಳಿಸಬಹುದಾಗಿದೆ. ಸುಮಾರು 5 ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 70,000 ರೂ.ವರೆಗೆ ಗಳಿಸಲೂ ಅವಕಾಶವಿದೆ.

ಹಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಕ್ರಮಗಳು :
ಎಟಿಎಂ ಅನ್ನು ಬ್ಯಾಂಕ್​ಗಳೇ ಅಳವಡಿಸುತ್ತವೆ ಹಾಗೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದಿಲ್ಲ . ಬ್ಯಾಂಕ್​ಗಳು ಎಟಿಎಂ ಇನ್​​ಸ್ಟಾಲ್ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುತ್ತವೆ. ಎಸ್​ಬಿಐ ಬ್ಯಾಂಕ್​ ಎಟಿಎಂ ಸ್ಥಾಪನೆಗಾಗಿ ಟಾಟಾ ಇಂಡಿಕ್ಯಾಷ್, ಮುತೂಟ್ ಎಟಿಎಂ ಹಾಗೂ ಇಂಡಿಯಾ ವನ್ ಎಟಿಎಂ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಹೀಗಾಗಿ ನೀವು ಎಟಿಎಂ ಕೇಂದ್ರ ಸ್ಥಾಪಿಸುವ, ಆ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಒಲವು ಹೊಂದಿದ್ದರೆ ಈ ಕಂಪನಿಗಳ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಎಟಿಎಂ ಫ್ರಾಂಚೈಸ್ ಹೆಸರಿನಲ್ಲಿ ಅನೇಕ ಅಕ್ರಮಗಳೂ ನಡೆಯುವ ಸಾಧ್ಯತೆ ಇರುವುದರಿಂದ ಕಂಪನಿಗಳ ಅಧಿಕೃತ ವೆಬ್​​ಸೈಟ್ ಮತ್ತು ವ್ಯಕ್ತಿಗಳ ಮೂಲಕವೇ ವ್ಯವಹರಿಸುವುದು ಒಳ್ಳೆಯದು.

ಎಸ್​ಬಿಐ ಎಟಿಎಂ ಫ್ರಾಂಚೈಸ್ ಪಡೆದುಕೊಳ್ಳಲು ಇರುವ ಕ್ರಮಗಳು :
• ಎಟಿಎಂ ಕ್ಯಾಬಿನ್ ಸಿದ್ಧಪಡಿಸುವುದಕ್ಕಾಗಿ ಕನಿಷ್ಠ 50-80 ಚದರ ಅಡಿ ಜಾಗ ಇರಬೇಕು.
• ಇತರ ಎಟಿಎಂಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಹಾಗೂ ಸುಲಭವಾಗಿ ಜನರಿಗೆ ಕಾಣಿಸುವಂತಿರಬೇಕು.
• ಕನಿಷ್ಠ 1kWನ ವಿದ್ಯುತ್ ಸಂಪರ್ಕ ಇರಬೇಕು. ಹಾಗೂ 24 ಗಂಟೆಗಳ ವಿದ್ಯುತ್ ಪೂರೈಕೆ ಇರಬೇಕು.
• ಇಟ್ಟಿಗೆ ಅಥವಾ ಕಲ್ಲಿನ ಗೋಡೆಗಳು ಮತ್ತು ಕಾಂಕ್ರೀಟ್ ಛಾವಣಿಯೊಂದಿಗೆ ಎಟಿಎಂ ಕ್ಯಾಬಿನ್ ಬಲಿಷ್ಠ ಕಟ್ಟಡವಾಗಿರಬೇಕು.
• ಎಟಿಎಂ ಕ್ಯಾಬಿನ್ ಅಳವಡಿಸುವುದಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದಿರಬೇಕು.

ಬೇಕಾಗುವ ಪ್ರಮುಖ ದಾಖಲೆಗಳು:
• ಗುರುತಿನ ಚೀಟಿಗಳಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಹೊಂದಿರಬೇಕು.
• ವಿಳಾಸದ ಗುರುತಿಗಾಗಿ ಪಡಿತರ ಚೀಟಿ, ವಿದ್ಯುತ್ ಬಿಲ್ ಹೊಂದಿರಬೇಕು.
• ಬ್ಯಾಂಕ್ ಖಾತೆ ವಿವರ ಹಾಗೂ ಪಾಸ್​ಬುಕ್
ಫೋಟೊಗ್ರಾಫ್, ಇ-ಮೇಲ್, ದೂರವಾಣಿ ಸಂಖ್ಯೆ
• ಬೇಕಾಗುವ ಇತರ ದಾಖಲೆಗಳು: ಜಿಎಸ್​ಟಿ ಸಂಖ್ಯೆ, ಕಂಪನಿಗಳು ಕೇಳುವ ಹಣಕಾಸು ದಾಖಲೆಗಳು
ಹೂಡಿಕೆ ಮತ್ತು ಆದಾಯದ ವಿವರ ಬೇಕಾಗುತ್ತದೆ.

ಎಟಿಎಂ ಫ್ರಾಂಚೈಸ್​ಗಾಗಿ ಅರ್ಜಿ ಸಲ್ಲಿಸುವ ಕ್ರಮಗಳು :
• ಎಟಿಎಂ ಫ್ರಾಂಚೈಸ್​ಗಾಗಿ ಅರ್ಜಿ ಸಲ್ಲಿಸುವಾಗ ಭದ್ರತಾ ಠೇವಣಿಯಾಗಿ 2 ಲಕ್ಷ ರೂ. ನೀಡಬೇಕಾಗುತ್ತದೆ.
• ಬಳಿಕ 3 ಲಕ್ಷ ರೂ. ಕೆಲಸದ ಬಂಡವಾಳ (working capital) ನೀಡಬೇಕಾಗುತ್ತದೆ.
• ಹೀಗೆ ಒಟ್ಟು 5 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ.
• ಎಟಿಎಂ ಇನ್​ಸ್ಟಾಲ್ ಆಗಿ ಜನರು ಹಣ ವಿತ್​ಡ್ರಾ ಮಾಡಲು ಆರಂಭವಾದ ಬಳಿಕ ಪ್ರತಿ ನಗದು ವಿತ್​ಡ್ರಾ ವಹಿವಾಟಿಗೆ 8 ರೂ.ನಂತೆ ನೀವು ಆದಾಯ ಗಳಿಸಬಹುದು. ನಗದಿಗೆ ಸಂಬಂಧಿಸಿರದ, ಅಂದರೆ ಬ್ಯಾಲೆನ್ಸ್ ಪರಿಶೀಲನೆ, ಫಂಡ್​ ಟ್ರಾನ್ಸ್​ಫರ್​ ಇತ್ಯಾದಿ ವಹಿವಾಟಿಗೆ ಪ್ರತಿ ಬಾರಿ 2. ರೂ.ನಂತೆ ಆದಾಯ ಗಳಿಸಬಹುದಾಗಿದೆ.

ಈ ರೀತಿಯಾಗಿ ಎಟಿಎಂ ಫ್ರಾಂಚೈಸ್ ನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.