Indian Railway : ಭಾರತೀಯ ರೈಲ್ವೆಯ 1 ರೂ.ವಿಮೆಗೆ ನಿಮಗೆ ದೊರೆಯಲಿದೆ 10 ಲಕ್ಷ ಕವರೇಜ್ !!
ಭಾರತೀಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ವಿಮೆ ಪದ್ಧತಿ ಜಾರಿಗೆ ತರಲಾಗಿದೆ. ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ ಅದರ ಖರ್ಚನ್ನು ಭರಿಸಲು ಪ್ರಯಾಣಿರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಹೊಸ ವಿಮೆ ಯೋಜನೆಯನ್ನು ಪರಿಚಯಿಸಿದೆ.
ಹೌದು ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ ಅದರ ಖರ್ಚನ್ನು ಭರಿಸಲು ಪ್ರಯಾಣಿರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 1 ರೂ. ವಿಮೆ ಪರಿಚಯಿಸಿದ್ದು, 10 ಲಕ್ಷ ರೂ. ಪರಿಹಾರ ಘೋಷಿಸಿದೆ.
ಒಂದು ವೇಳೆ, ಅಪಘಾತಗಳಲ್ಲಿ ಪ್ರಯಾಣಿಕರು ಮರಣ ಹೊಂದಿದರೆ ಅವರನ್ನು ಅವಲಂಬಿಸಿರುವವರು ಅಥವಾ ಕುಟುಂಬದವರು ಮತ್ತಷ್ಟು ಸಂಕಷ್ಟಕ್ಕೀಡಾಗುವುದನ್ನು ತಡೆಯುವ ಮತ್ತು ಅವರನ್ನು ಆರ್ಥಿಕವಾಗಿ ತುಸು ಸಬಲರನ್ನಾಗಿಸುವ ಉದ್ದೇಶದೊಂದಿಗೆ ಇಲಾಖೆಯು 1 ರೂ. ವಿಮೆ ಪರಿಚಯಿಸಿದ್ದು, 10 ಲಕ್ಷ ರೂ. ಪರಿಹಾರ ಘೋಷಿಸಿದೆ. ರೈಲ್ವೆಯ ಕಾರ್ಯಾಚರಣೆ ವಿಮೆ ಯೋಜನೆಯಡಿ ಈ ವಿಮೆಯನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ ವಿಮೆ ಸೇವೆ ಒದಗಿಸುವ ಕಂಪನಿಗಳ ಪಟ್ಟಿಯನ್ನೂ ಇಲಾಖೆ ಅಂತಿಮಗೊಳಿಸಿದೆ.
ವಿಮೆ ಲಭ್ಯ ಇರುವ ಪ್ರಮುಖ ಕಂಪನಿಗಳು:
1 ರೂ. ವಿಮೆ ಸೇವೆ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕೆಲವು ತಿಂಗಳುಗಳ ಹಿಂದೆ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿತ್ತು. ಸುಮಾರು 19 ವಿಮಾ ಕಂಪನಿಗಳು ಬಿಡ್ಡಿಂಗ್ನಲ್ಲಿ ಪಾಲ್ಗೊಂಡಿದ್ದವು.
• ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್, • ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್,
• ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್.
ಈ ಮೇಲಿನ ಕಂಪನಿಗಳನ್ನು ವಿಮೆ ಯೋಜನೆ ಸೇವೆ ಒದಗಿಸುವುದಕ್ಕಾಗಿ ರೈಲ್ವೆ ಇಲಾಖೆ ಅಂತಿಮಗೊಳಿಸಿತ್ತು. ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ ಉಳಿದ ಕಂಪನಿಗಳು ಬಿಡ್ಡಿಂಗ್ ಪ್ರಕ್ರಿಯೆಯಿಂದ ಹೊರಬಿದ್ದವು.
ಪ್ರಯಾಣದ ವಿಮೆಗಾಗಿ 20 ರೂ. ನಿಗದಿಪಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ ಎಂದು ಹಿಂದೆ ವರದಿಯಾಗಿತ್ತು. ಆದರೆ, ಅಂತಿಮವಾಗಿ 1 ರೂ. ನಿಗದಿಪಡಿಸಿದೆ. ಈ ವಿಮೆಯನ್ನು ಇಲಾಖೆ ಕಡ್ಡಾಯಗೊಳಿಸಿಲ್ಲ. ಪ್ರಯಾಣಿಕರು ಬೇಕಿದ್ದಲ್ಲಿ ವಿಮೆ ಆಯ್ಕೆ ಮಾಡಿಕೊಳ್ಳಬಹುದು, ಇಲ್ಲವಾದಲ್ಲಿ ಬಿಟ್ಟುಬಿಡಬಹುದು.
ಅಲ್ಲದೆ ರೈಲ್ವೆ ಇಲಾಖೆಯ ಈ ವಿಮೆ ಯೋಜನೆಯಿಂದ ಹಲವು ರೀತಿಯ ಪ್ರಯೋಜನಗಳಿವೆ. ಪ್ರಯಾಣದ ಸಂದರ್ಭದಲ್ಲಿ ಮರಣ ಹೊಂದಿದರೆ ಕುಟುಂಬದವರಿಗೆ 10 ಲಕ್ಷ ರೂ. ದೊರೆಯಲಿದೆ. ಒಂದು ವೇಳೆ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೂ 10 ಲಕ್ಷ ರೂ.ವರೆಗೆ ಪರಿಹಾರ ದೊರೆಯಲಿದೆ. ಭಾಗಶಃ ಅಂಗವೈಕಲ್ಯ ಅಥವಾ ಗಾಯಕ್ಕೊಳಗಾದರೆ 7.5 ಲಕ್ಷ ರೂ., ಆಸ್ಪತ್ರೆಗೆ ದಾಖಲಾದರೆ 5 ಲಕ್ಷ ರೂ. ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.