ಓದುಗರೇ ನಿಮಗೊಂದು ಚಾಲೆಂಜ್ | ಕುರಿಗಳ ಹಿಂಡಿನ ನಡುವೆ ಅವಿತು ಕೂತಿರೋ ತೋಳವನ್ನು ಪತ್ತೆ ಹಚ್ಚ ಬಲ್ಲಿರಾ?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

 

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಕುರಿಗಳ ಹಿಂಡಿನ ನಡುವೆ ಇರುವ ತೋಳವನ್ನು ಹುಡುಕೋ ಕೆಲಸ.

ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ಕುರಿಗಳ ಹಿಂಡಿನ ನಡುವೆ ತೋಳವೊಂದು ಸೇರಿಕೊಂಡು ಬಿಟ್ಟಿದೆ. ಅದು ಎಲ್ಲಿದೆ ಅಂತಾ ಗುರುತಿಸುವ ಕೆಲಸ ನಿಮ್ಮದು. ನೂರಾರು ಕುರಿಗಳು ಮಧ್ಯೆ ಒಂದೇ ಒಂದು ತೋಳ ಸೇರಿಕೊಂಡಿದ್ದು, ಅದನ್ನು 10 ಸೆಕೆಂಡ್​ ಸಮಯದಲ್ಲಿ ಪತ್ತೆ ಹಚ್ಚಬೇಕು. ನಿಮ್ಮ ಮೈಂಡ್ ಹಾಗೂ ಕಣ್ಣಿನ ಕೆಲಸ ಈಗ ಶುರು ಹಚ್ಚಿಕೊಳ್ಳಿ..

10 ಸೆಕೆಂಡ್​ ಸಮಯದಲ್ಲಿ ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರೀ ಅಂತ ಒಪ್ಪಿಕೊಂಡೋರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇನ್ನೂ ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಪಡೆದುಕೊಳ್ಳಿ..

Leave A Reply

Your email address will not be published.