Lunar Eclipse 2022 : ನ.8 ರ ಚಂದ್ರಗ್ರಹಣ – ಹೇಗೇ ವೀಕ್ಷಿಸಬೇಕು? ಇಲ್ಲಿದೆ ಮಾಹಿತಿ

ಅಕ್ಟೋಬರ್‌ 25ರಂದು ಸಂಭವಿಸಿದ್ದ ಸೂರ್ಯಗ್ರಹಣದ ಬಳಿಕ, ಚಂದ್ರಗ್ರಹಣ ನಡೆಯಲಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದೆ.

2022ನೇ ನವೆಂಬರ್‌ 8ರಂದು ಸಂಭವಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಈ ಚಂದ್ರ ಗ್ರಹಣವು ಭಾರತ, ಏಷ್ಯಾದ ಇತರ ದೇಶಗಳು, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ಪೂರ್ವ ಯುರೋಪ್ನ ಭಾಗಗಳು ಮತ್ತು ದಕ್ಷಿಣ ಅಮೆರಿಕಾದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ.

ಭಾರತದಲ್ಲಿ 2022 ನವೆಂಬರ್‌ ಚಂದ್ರಗ್ರಹಣದ ಸಮಯ ಗಮನಿಸುವುದಾದರೆ, ನವೆಂಬರ್ 8, ಮಂಗಳವಾರ ಚಂದ್ರಗ್ರಹಣ ಸಂಭವಿಸಲಿದ್ದು. ನವೆಂಬರ್ 8ರ ಭಾರತೀಯ ಕಾಲಮಾನದ ಅನ್ವಯ ಸಂಜೆ 5:32ಕ್ಕೆ ಪ್ರಾರಂಭವಾಗಿ ಸಂಜೆ 6:18ಕ್ಕೆ ಕೊನೆಗೊಳ್ಳುತ್ತದೆ.

ಭಾಗಶಃ ಚಂದ್ರಗ್ರಹಣ ಆರಂಭ ಮಧ್ಯಾಹ್ನ 2.39ಆಗುತ್ತದೆ .

ಹಾಗೆಯೇ, ಪೂರ್ಣ ಚಂದ್ರಗ್ರಹಣ ಆರಂಭ – ಮಧ್ಯಾಹ್ನ 3.46 ಆಗಿದ್ದು, ಚಂದ್ರ ಮುಳುಗುವ ಸಮಯ – 6.19 ಬೆಳಗ್ಗೆ ಆಗಿರುತ್ತದೆ.

ಚಂದ್ರನ ದಕ್ಷಿಣ ಅಂಗವು ಭೂಮಿಯ ನೆರಳಿನ ಮಧ್ಯಭಾಗದ ಮೂಲಕ ಹಾದುಹೋಗುತ್ತದೆ. ಇದು 1.36 ಮ್ಯಾಗ್ನಿಟ್ಯೂಡ್‌ ಸಂಪೂರ್ಣ ಗ್ರಹಣವಾಗಿರುವುದರಿಂದ, ಗರಿಷ್ಠ ಗ್ರಹಣದಲ್ಲಿ ಚಂದ್ರನು ಭೂಮಿಯ ಅಂಬ್ರಲ್ ನೆರಳಿನಿಂದ ಸಂಪೂರ್ಣವಾಗಿ ಆವರಿಸಲ್ಪಡುತ್ತಾನೆ.

ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ ಎನ್ನುವ ವಿಚಾರ ನೋಡುವುದಾದರೆ, ಭಾರತದಲ್ಲಿ, ಸಂಪೂರ್ಣ ಚಂದ್ರಗ್ರಹಣವು ಪೂರ್ವ ಭಾಗಗಳಿಂದ ಮಾತ್ರ ಗೋಚರಿಸುತ್ತದೆ. ಕಠ್ಮಂಡು, ಟೋಕಿಯೊ, ಮನಿಲಾ, ಬೀಜಿಂಗ್, ಸಿಡ್ನಿ, ಜಕಾರ್ತಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಸಿಟಿ, ಲಾಸ್ ಏಂಜಲೀಸ್, ಚಿಕಾಗೋ ಮತ್ತು ಮೆಕ್ಸಿಕೋ ಸಿಟಿಯಲ್ಲಿ 2022 ರ ಪೂರ್ಣ ಚಂದ್ರಗ್ರಹಣವು ಕಾಣಿಸಲಿದೆ.

ಆದರೆ ಭಾಗಶಃ ಗ್ರಹಣವು ದೇಶದ ಇತರ ಭಾಗಗಳಲ್ಲಿ ಗೋಚರಿಸುತ್ತದೆ. ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ ಮತ್ತು ಗುವಾಹಟಿಯಲ್ಲಿ ವಾಸಿಸುವ ಜನರಿಗೆ ನವೆಂಬರ್ 8 ರಂದು ಭಾಗಶಃ ಚಂದ್ರ ಗ್ರಹಣವು ಕಾಣಿಸಲಿದೆ.

ಚಂದ್ರಗ್ರಹಣ ಬರಿಗಣ್ಣಿಗೆ ಗೋಚರಿಸುವುದರಿಂದ ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳನ್ನು ಬಳಸುವ ಅಗತ್ಯವಿಲ್ಲ. ಉತ್ತಮ ವೀಕ್ಷಣೆಗಾಗಿ ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಬಹುದಾಗಿದೆ.

Leave A Reply

Your email address will not be published.