LIC : ಕಡಿಮೆ ಬಡ್ಡಿದರದಲ್ಲಿ ಬ್ಯಾಂಕಿಗಿಂತ ಎಲ್ ಐಸಿಯಲ್ಲಿ ಸಿಗುತ್ತೆ ವೈಯಕ್ತಿಕ ಸಾಲ | ಪಡೆಯುವ ಬಗ್ಗೆ ಈ ರೀತಿ ಇದೆ!!!

ಇಂದಿನ ದಿನಗಳಲ್ಲಿ ಹೂಡಿಕೆ(Investment) ಮಾಡದೆ ಇರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಇನ್ನೂ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುವವರೇ ಹೆಚ್ಚು. ಇಂದು ದುಡಿಯುವುದು ನಾಳೆಗಾಗಿ ಎಂಬ ಮಾತು ಕೇಳಿದ್ದೇವೆ. ಇವತ್ತು ನೆಮ್ಮದಿಯಾಗಿದ್ದರೆ ಸಾಲದು, ನಾಳೆ, ಮುಂದೆ ಭವಿಷ್ಯದಲ್ಲಿ ಕೂಡ ಅದೇ ನೆಮ್ಮದಿ ಇರಬೇಕು ಎಂಬ ಕಾರಣಕ್ಕೆ ಹೂಡಿಕೆ ಮಾಡುತ್ತೇವೆ.

ಹೂಡಿಕೆ ಮಾಡುವ ಸಂದರ್ಭದಲ್ಲಿ ಎಲ್ಲರೂ ಉತ್ತಮ ರಿಟರ್ನ್ಸ್ ನೀಡುವ ಸಾಧನಗಳನ್ನೇ ಆಯ್ದುಕೊಳ್ಳುತ್ತೇವೆ. ಕೆಲವೊಮ್ಮೆ ಯಾವುದೋ ತುರ್ತು ಕಾರ್ಯದಿಂದಾಗಿ ಹಣದ ಅವಶ್ಯಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಹೂಡಿಕೆ ಮಾಡಿದ ಸಂಸ್ಥೆಯಿಂದಲೇ ಸಾಲ ಸಿಕ್ಕರೆ ಬೇರೆ ಕಡೆ ಸಾಲಕ್ಕಾಗಿ ಅಲೆದಾಡುವ ಅನಿವಾರ್ಯತೆ ಬರೋದಿಲ್ಲ. ಇಂಥ ಅತ್ಯುತ್ತಮವಾದ ಅವಕಾಶ ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದವರಿಗಿದೆ. ವೈಯಕ್ತಿಕ ಸಾಲ ಬ್ಯಾಂಕಿಗಿಂತ ಕಡಿಮೆ ಬಡ್ಡಿದರದಲ್ಲಿ ಎಲ್ಐಸಿಯಲ್ಲಿ ಸಿಗುತ್ತದೆ. ಹಾಗಾದರೆ ಕಡಿಮೆ ಬಡ್ಡಿದರದ ಸಾಲದ ಬಗ್ಗೆ ತಿಳಿದುಕೊಳ್ಳೋಣ.

ಬ್ಯಾಂಕ್ ಒಳಗೊಂಡಂತೆ ಸಾಲ ನೀಡುವ ಇತರ ಸಂಸ್ಥೆಗಳಿಗೆ ಹೋಲಿಸಿದ್ರೆ ಭಾರತೀಯ ಜೀವ ವಿಮಾ ನಿಗಮದಿಂದ (LIC) ಕಡಿಮೆ ಬಡ್ಡಿದರಕ್ಕೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ. ಇನ್ನೂ ಈ ಬಡ್ಡಿದರ ಶೇ.9ರಿಂದ ಪ್ರಾರಂಭವಾಗುತ್ತದೆ. ಮತ್ತು ಸಾಲದ ಅವಧಿ 5 ವರ್ಷಗಳ ತನಕ ಇರುತ್ತದೆ. ಅವಧಿಗೂ ಮೊದಲೇ ಸಾಲ ಮರುಪಾವತಿ ಮಾಡಿದರೆ ಹೆಚ್ಚುವರಿ ಶುಲ್ಕಗಳಿಂದ ವಿನಾಯಿತಿ ಸಿಗುತ್ತದೆ.

ಎಲ್ಐಸಿಯಿಂದ ಪಡೆಯುವ ವೈಯಕ್ತಿಕ ಸಾಲಕ್ಕೆ ಅವಧಿಯ ಆಧಾರದಲ್ಲಿ ಇಎಂಐ ನಿರ್ಧರಿತವಾಗುತ್ತದೆ.
• ಒಂದು ವೇಳೆ ಒಂದು ವರ್ಷದ ಅವಧಿಗೆ ಶೇ.9 ಬಡ್ಡಿದರದಲ್ಲಿ 1ಲಕ್ಷ ರೂ. ಸಾಲ ಪಡೆದರೆ, ಆಗ 8,745ರೂ. ಇಎಂಐ ಪಾವತಿಸಬೇಕಾಗುತ್ತದೆ.
• ಇನ್ನೂ ಇದನ್ನು ಎರಡು ವರ್ಷಗಳ ಅವಧಿಗೆ ತೆಗೆದುಕೊಂಡರೆ ಆಗ ಇಎಂಐ 4,568ರೂ. ಆಗಿರುತ್ತದೆ.
• 5 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡರೆ ತಿಂಗಳಿಗೆ 2076ರೂ. ಪಾವತಿಸಬೇಕು.
• ಇನ್ನು 1ವರ್ಷಕ್ಕೆ 5ಲಕ್ಷ ರೂ. ಸಾಲ ತೆಗೆದುಕೊಂಡಿದ್ದರೆ, ಇಎಂಐ ಮೊತ್ತ 44,191ರೂ. ಎರಡು ವರ್ಷಗಳ ಅವಧಿಗೆ ಇಎಂಐ 23,304ರೂ.
• ಮೂರು ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ದರೆ ತಿಂಗಳಿಗೆ 18,472ರೂ. ಇಎಂಐ ಪಾವತಿಸಬೇಕು.
• 4 ವರ್ಷಗಳ ಅವಧಿಗೆ 15,000ರೂ. ಇಎಂಐ ಪಾವತಿಸಬೇಕು.
• 5 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ದರೆ, 12,917 ರೂ. ಇಎಂಐ ಪಾವತಿಸಬೇಕು.

LIC ಇಂದ ವೈಯಕ್ತಿಕ ಸಾಲ ಪಡೆಯುವುದು ಹೇಗೆ?

• LIC ಅಧಿಕೃತ ವೆಬ್ ಸೈಟ್ www.licindia.in ಭೇಟಿ ನೀಡಿ.
• ಪಾಲಿಸಿ ಸಾಲದ ಆಯ್ಕೆಯನ್ನು ಆಯ್ಕೆ ಮಾಡಿ.
• ಸಾಲದ ಅರ್ಜಿಯನ್ನು ಡೌನ್ ಲೋಡ್ ಮಾಡಿ.
• ಅರ್ಜಿ ಭರ್ತಿ ಮಾಡಿ.
• ಅರ್ಜಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
• ಇದಾದ ಬಳಿಕ ಎಲ್ಐಸಿ ನಿಮ್ಮ ಸಾಲದ ಮನವಿ ಅರ್ಜಿಯನ್ನು ಪರಿಶೀಲಿಸುತ್ತದೆ.
• ಸಾಲಕ್ಕೆ ಅನುಮೋದನೆ ಸಿಕ್ಕರೆ, ಸಾಲದ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.

Leave A Reply

Your email address will not be published.