‘ ರೋಗ ನಿರೋಧಕ’ ಶಕ್ತಿ ಹೆಚ್ಚಿಸಲು ಇಲ್ಲಿದೆ ಅದ್ಭುತ ಟಿಪ್ಸ್!!!

Share the Article

ರೋಗ ನಿರೋಧಕ ಶಕ್ತಿ ಮನುಷ್ಯನ ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕಾಗಿರುವುದಾಗಿದೆ. ಇಲ್ಲವಾದಲ್ಲಿ ಮನುಷ್ಯ ಬೇಗನೆ ಕಾಯಿಲೆಗೆ ತುತ್ತಾಗುತ್ತಾನೆ. ನಾವು ಜಂಕ್ ಫುಡ್, ಸಾಫ್ಟ್ ಡ್ರಿಂಕ್ಸ್ ಗಳನ್ನು ಸೇವಿಸುವುದರ ಬದಲು ವಿಟಮಿನ್, ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ಸೇವಿಸಿದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇನ್ನೂ ನಾವು ಸುಲಭವಾಗಿ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳೋಣ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ.

• ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲಿಗೆ 4 ಟೀ ಸ್ಪೂನ್ ಕಾಳುಮೆಣಸಿನ ಪುಡಿ, 4 ಟೀ ಸ್ಪೂನ್ ಜೀರಿಗೆ ಪುಡಿ, 4 ಟೀ ಸ್ಪೂನ್ ಅರಿಶಿನಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ಊಟವಾಗಿ ಅರ್ಧ ಗಂಟೆ ಆದ ನಂತರ ಇದನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾರದಲ್ಲಿ ಮೂರು ದಿನ ಇದನ್ನು ಕುಡಿದರೆ ಒಳ್ಳೆಯದು.

• ತುಳಸಿ ಎಲೆ-15, ಕಾಳು ಮೆಣಸು-6 , 4 ಇಂಚು ಶುಂಠಿ ತೆಗೆದುಕೊಳ್ಳಿ, ಮೊದಲಿಗೆ ತುಳಸಿ ಎಲೆಯನ್ನು ಚೆನ್ನಾಗಿ ತೊಳೆಯಿರಿ ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ತೊಳೆದಿಟ್ಟುಕೊಂಡ ತುಳಸಿಎಲೆ, ಕಾಳುಮೆಣಸು, ಜಜ್ಜಿಕೊಂಡ ಶುಂಠಿ ಹಾಕಿ 10 ನಿಮಿಷ ಕುದಿಸಿಕೊಳ್ಳಿ, ನಂತರ ಇದನ್ನು ಸೋಸಿಕೊಂಡು ಕುಡಿಯರಿ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಆರೋಗ್ಯವಾಗಿರಿ.

Leave A Reply

Your email address will not be published.