ಬಾಯಲ್ಲಿ ಗುಳ್ಳೆ ಆಗಿದ್ಯಾ? ಇಷ್ಟು ಟಿಪ್ಸ್​ ಫಾಲೋ ಮಾಡಿ ಸಾಕು

ಉಷ್ಣ ಹೆಚ್ಚಾದಾಗ ಬಾಯಲ್ಲಿ ಹುಣ್ಣು ಆಗುವುದು ಸಾಮಾನ್ಯ. ಇದರ ಜೊತೆಗೆ ಎದೆಯಲ್ಲಿ ಉರಿ ಕೂಡ ಆರಂಭವಾಗುತ್ತದೆ. ಇದಕ್ಕಾಗಿ ಆದಷ್ಟು ನೀವು ಮನೆಮದ್ದುಗಳನ್ನೇ ಫಾಲೋ ಮಾಡಬೇಕು. ಇಂಗ್ಲೀಷ್​ ಮೆಡಿಸಿನ್​ಗಳನ್ನು ನೀವು ಸೇವಿಸಬಾರದು.

ಸೀಬೆಹಣ್ಣಿನ ಚಿಗುರು ಎಲೆಗಳನ್ನು ಸೇವಿಸಿ. ಅಂದರೆ ಅದರಲ್ಲಿ ಆಗತಾನೆ ಚಿಗುರುತ್ತಿರುವ ಪುಟ್ಟ ಪುಟ್ಟ ಎಲೆಗಳನ್ನು ತಿನ್ನುವುದರಿಂದ ಈ ಹುಣ್ಣುಗಳನ್ನು ನಿವಾರಣೆ ಈಸಿಯಾಗಿ ಮಾಡಬಹುದು.

ತುಟಿಯ ಒಳಗೆ, ಕೆನ್ನೆಯ ಒಳಭಾಗದಲ್ಲಿ ಅಥವಾ ಕೆಲವೊಮ್ಮೆ ನಾಲಿಗೆಯ ಮೇಲೆ ಕೆಂಪು ಬಣ್ಣದ ಗುಳ್ಳೆಗಳಾಗುತ್ತವೆ. ವಿಪರೀತ ಉರಿ, ನೋವುಂಟು ಮಾಡುವ ಈ ಬಾಯಿಯ ಹುಣ್ಣಿನ ನಿವಾರಣೆಗೆ ಸಿಂಪಲ್‌ ಮನೆಮದ್ದು ಇಲ್ಲಿದೆ.
ನಮ್ಮ ದೇಹದ ಪ್ರತೀ ಬದಲಾವಣೆಗೂ ಕೂಡ ನಾವು ಸೇವಿಸುವ ಆಹಾರ, ಜೀವನಶೈಲಿಯೇ ಕಾರಣವಾಗಿರುತ್ತದೆ. ಹೀಗಾಗಿ ಕೊಂಚ ಬದಲಾವಣೆಯಾದರೂ ಕೂಡ ದೇಹದ ಅದರ ಸೂಚನೆಗಳನ್ನು ನೀಡುತ್ತದೆ. ಅಂತಹ ಒಂದು ಬಾಹ್ಯ ಲಕ್ಷಣ ಬಾಯಿಯ ಹುಣ್ಣು.

ದೇಹದಲ್ಲಿ ಪಿತ್ತದ ಅಸಮತೋಲನವಾದರೆ, ಕರುಳಿನ ಆರೋಗ್ಯ ಹದಗೆಟ್ಟರೆ, ನಿದ್ದೆಯ ಕೊರತೆ, ಅತಿಯಾದ ಒತ್ತಡ, ಆಸಿಡಿಟಿ, ಮಲಬದ್ಧತೆ, ರೋಗ ನಿರೋಧಕ ಶಕ್ತಿಯ ಕೊರತೆ ಹೀಗೆ ಅನೇಕ ಕಾರಣಗಳಿಂದ ಬಾಯಿಯಲ್ಲಿ ಗುಳ್ಳೆಯಾಗುತ್ತದೆ.
ಎಳನೀರನ್ನು ಕುಡಿಯಿರಿ. ದಿನಕ್ಕೆ ಒಂದು ಬಾರಿಯಾದರೂ ಎಳನೀರನ್ನು ಕುಡಿಯಬೇಕು. ಇದರಿಂದ ಬಾಯಲ್ಲಿ ಆದ ಹುಣ್ಣನ್ನು ಅತಿ ವೇಗವಾಗಿ ಓಡಿಸಬಹುದು. ಇದಕ್ಕೆ ಸ್ವಲ್ಪ ಗ್ಲೂಕೋಸ್​ ಹಾಕಿ ಕುಡಿದರೂ ಕೂಡ ದೇಹಕ್ಕೆ ಒಳಿತು.
ಗುಳ್ಳೆಯ ಮೇಲೆ ಅರಿಶಿನವನ್ನು ಹಚ್ಚುತ್ತಾ ಇರಿ. ಸೋಂಕು ನಿವಾರಕ ಗುಣವನ್ನು ಹೊಂದಿರುವ ಅರಿಶಿನ ಗುಳ್ಳೆ ಬೇಗನೆ ಮಾಗುವಂತೆ ಮಾಡುತ್ತದೆ. ಅರಿಶಿಣವನ್ನು ಹಚ್ಚಿದಾಗ ವಿಪರೀತ ಉರಿಯುತ್ತದೆ, ಉರಿದಾಗಲೇ ನಿವಾರಣೆ ಆಗುವುದು.

ಸೋಂಪು ಕಾಳನ್ನು ಈ ಸಮಯದಲ್ಲಿ ಸೇವಿಸಬೇಡಿ. ಅಂದರೆ ಇದು ಇನ್ನಷ್ಟು ಗುಳ್ಳೆ ವೃದ್ಧಿಸಲು ಕಾರಣವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಾಯಲ್ಲಿ ಗುಳ್ಳೆ ಆದಾಗ ಸೋಂಪು ಕಾಳುಗಳನ್ನು ಸೇವಿಸಬಾರದು.

ಇವಿಷ್ಟು ಟಿಪ್ಸ್​ಗಳನ್ನು ಫಾಲೋ ಮಾಡುವುದರ ಮೂಲಕ ಬಾಯಲ್ಲಿರುವ ಗುಳ್ಳೆಗಳು ಕಡಿಮೆ ಆಗುತ್ತದೆ. ಬೇಕಾದಲ್ಲಿ ಒಮ್ಮೆ ಟ್ರೈಮಾಡಿ ನೋಡಿ.

Leave A Reply

Your email address will not be published.