ಗ್ರಾಹಕ ಆರ್ಡರ್ ಮಾಡಿದ ಫುಡ್ ಅನ್ನೇ ತಿಂದ ಡೆಲಿವರಿ ಬಾಯ್ | ಕಾದು ಸುಸ್ತಾಗಿದ್ದ ಗ್ರಾಹಕನಿಗೆ ಕೊನೆಗೆ ಈತ ಕಳಿಸಿದ SMS ಏನು ಗೊತ್ತಾ?

ಇಂದು ಏನಿದ್ದರೂ ಟೆಕ್ನಾಲಜಿ ಕಾಲ. ಎಲ್ಲವೂ ಕುಳಿತಲ್ಲಿಂದಲೇ ಸರಾಗವಾಗಿ ನಡೆಯುತ್ತದೆ. ಅದರಲ್ಲೂ ಈ ಆನ್ಲೈನ್ ವಹಿವಾಟು ಬಂದ ಮೇಲೆ ಅಂತೂ ಕೇಳೋದೇ ಬೇಡ, ಬಟ್ಟೆ-ಬರೆಯಿಂದ ಹಿಡಿದು ಆಹಾರದವರೆಗೂ ಎಲ್ಲವೂ ಕಾಲಿನ ಬುಡಕ್ಕೆ ಬಂದು ಬಿಡುತ್ತದೆ.

ಅದರಂತೆ ಇಲ್ಲೊಬ್ಬ ವ್ಯಕ್ತಿ ತನಗಿಷ್ಟವಾದ ಆಹಾರವನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದ. ಮಾಡಿದ್ಮೇಲೆ ಅವರ ಕೆಲಸನೇ ಆಸೆಯಿಂದ ಕಾದು ಕೂರೋದು ಅಲ್ವಾ. ಅದ್ರಂತೆ ಹಸಿದ ಹೊಟ್ಟೆಯಿಂದ ಈ ವ್ಯಕ್ತಿನೂ, ಈಗ ಬರುತ್ತದೆ, ಇನ್ನೇನೂ ಬರುತ್ತದೆ ಎಂದು ಕಾದೇ ಕೂತ. ಆದ್ರೆ, ಆತನಿಗೆ ಕೊನೆಗೂ ಆಹಾರ ಮಾತ್ರ ಬಂದೇ ಇಲ್ಲ. ಹಾಗಿದ್ರೆ ಆರ್ಡರ್ ಮಾಡಿದ ಫುಡ್ ಎಲ್ಲೋಯ್ತು ಅನ್ನುತ್ತಿರುವಾಗಲೇ ಆತನಿಗೆ ಬಂದಿದ್ದು ಒಂದು ‘ಸಂದೇಶ’…

ಹಸಿದ ಹೊಟ್ಟೇಲಿ ಕಾದು ಕೂತು ಕೋಪ ನೆತ್ತಿಗೆ ಏರಿದ್ದ ಆತ SMS ನ ಸದ್ದು ಕೇಳಿದೊಡನೆ ರಪ್ಪನೇ ಓಪನ್ ಮಾಡಿ ನೋಡುತ್ತಾನೆ. ಆಗಲೇ ಕಾದಿತ್ತು ನೋಡಿ ಆತನಿಗೆ ದೊಡ್ಡ ಶಾಕ್. ಅಷ್ಟಕ್ಕೂ ಅದಲ್ಲಿ ಬಂದ ಸಂದೇಶ ಏನೂ ಎಂಬುದನ್ನು ತಿಳಿಯಲು ಮುಂದೆ ಓದಿ..’ನೀವು ಆರ್ಡರ್​ ಮಾಡಿದ್ದ ಫುಡ್​ ತುಂಬಾ ಟೇಸ್ಟಿಯಾಗಿತ್ತು’ ಎಂಬುದಾಗಿ ಸ್ವತಃ ಡೆಲವರಿ ಬಾಯ್​ ಯೇ ಸಂದೇಶ ಕಳುಹಿಸಿದ್ದ. ಈ ಬಗ್ಗೆ ಕಂಪೆನಿಯಿಂದ ಪರಿಹಾರಕ್ಕಾಗಿ ಕೋರಿ ಮೋಸ ಹೋದ ಗ್ರಾಹಕನಾಗಿರುವ ಲಿಯಾಮ್ ಬಾಗ್ನಾಲ್ ದೂರು ಸಲ್ಲಿಸಿದ್ದಾರೆ. ಅದರಲ್ಲಿ ಈ ಸಂದೇಶದ ಸ್ಕ್ರೀನ್​ಷಾಟ್​ಗಳನ್ನು ಇಟ್ಟಿದ್ದಾರೆ.

ಗ್ರಾಹಕ ತಮ್ಮ ಟ್ವಿಟರ್‌ನಲ್ಲಿ ಈ ಸಂವಾದವನ್ನು ಶೇರ್​ ಮಾಡಿಕೊಂಡಿದ್ದು, ಮೊದಲಿಗೆ ಸಾರಿ ಎಂದು ಡೆಲಿವರಿ ಬಾಯ್ ಹೇಳಿದ್ದಾನೆ. ಬಳಿಕ ಲಿಯಾಮ್​ ಏಕೆ ಎಂದು ಪ್ರಶ್ನಿಸಿದಾಗ ನೀವು ಆರ್ಡರ್​ ಮಾಡಿದ್ದ ಆಹಾರವನ್ನು ನಾನೇ ತಿಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಇದಕ್ಕೆ ವಿಪರೀತ ಸಿಟ್ಟು ಮಾಡಿಕೊಂಡ ಲಿಯಾಮ್​ ನೀನೊಬ್ಬ ವಿಚಿತ್ರ ಮನುಷ್ಯ ಎಂದಿರುವುದು ಸಂಭಾಷಣೆಯಲ್ಲಿ ನೋಡಬಹುದು. ಇದೀಗ ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ.

Leave A Reply

Your email address will not be published.