ಭಾರತದ ಕೆಮ್ಮಿನ ಔಷಧ ತಗೊಂಡು 70 ಮಕ್ಕಳ ಸಾವಿನ ಪ್ರಕರಣ – ಗ್ಯಾಂಬಿಯಾ ಸರಕಾರದಿಂದ ಶಾಕಿಂಗ್ ಹೇಳಿಕೆ ಬಹಿರಂಗ!!!

ಇತ್ತೀಚೆಗಷ್ಟೇ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಔಷಧದಿಂದ ಗ್ಯಾಂಬಿಯಾದಲ್ಲಿ ಮಕ್ಕಳ ಸಾವು ಸಂಭವಿಸಿತ್ತು ಎಂಬ ವರದಿ ಬಂದಿತ್ತು. ಹಾಗೂ ಈ ಬಗ್ಗೆ ತನಿಖೆಗೆ ಕೂಡಾ ಆದೇಶ ನೀಡಲಾಗಿತ್ತು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿತ್ತು. ಈಗ ಗಾಂಬಿಯಾ ಸರಕಾರ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದೆ.

ಈ ಸಾವಿಗೆ ವಿಷಕಾರಿ ಕೆಮ್ಮಿನ ಸಿರಪ್ ಕಾರಣ ಎಂಬುದರ ಬಗ್ಗೆ ಗ್ಯಾಂಬಿಯಾ ಸರ್ಕಾರ ಇನ್ನೂ ದೃಢಪಡಿಸಿಲ್ಲ ಎಂದು ದೇಶದ ಔಷಧಿ ನಿಯಂತ್ರಣ ಏಜೆನ್ಸಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಸಾವನ್ನಪ್ಪಿದ ಮಕ್ಕಳ ಶವಪರೀಕ್ಷೆ ವರದಿಯಲ್ಲಿ, ಮಕ್ಕಳು ಎಸ್ಚೆರಿಚಿಯಾ ಕೋಲಿ (ಇ ಕೋಲಿ) ಮತ್ತು ಅತಿಸಾರದಿಂದ ಬಳಲುತ್ತಿದ್ದರು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಹಾಗಿದ್ದಾಗ ಆ ಮಕ್ಕಳಿಗೆ ಕೆಮ್ಮಿನ ಸಿರಪ್ ಏಕೆ ನೀಡಲಾಯಿತು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗ್ಯಾಂಬಿಯಾದಲ್ಲಿ ತೀವ್ರವಾದ ಮೂತ್ರಪಿಂಡದ ಗಾಯ ಮತ್ತು 70 ಮಕ್ಕಳ ಸಾವಿಗೆ ಸಂಬಂಧಿಸಿರುವುದಾಗಿ ಗುರುತಿಸಲಾಗಿತ್ತು. ಹಾಗೂ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರವಾದ ಮೂತ್ರಪಿಂಡದ ಗಾಯದ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿತ್ತು. ಈ ಬಗ್ಗೆ ನಾಲ್ಕು ಕಲುಷಿತ ಔಷಧಿಗಳಿಗೆ ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯನ್ನು ನೀಡಲಾಗಿತ್ತು. ಇನ್ನೂ ಈ ಪ್ರಕರಣಗಳು ಹೆಚ್ಚಾಗುವುದಕ್ಕೆ ಕೆಮ್ಮಿನ ಔಷಧಿಗಳೇ ಕಾರಣವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಕೆಮ್ಮು ಮತ್ತು ಶೀತದ ಸಿರಪ್‌ಗಳು ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ. ಹಾಗಾಗಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತನಿಖೆಯನ್ನು ಪ್ರಾರಂಭಿಸಿತು. ಗ್ಯಾಂಬಿಯಾದ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಹರ್ಯಾಣ ರಾಜ್ಯದ ಔಷಧ ಅಧಿಕಾರಿಗಳು ಮೇಡನ್‌ ಫಾರ್ಮಾದ ಉತ್ಪಾದನಾ ಸೌಲಭ್ಯದ ತಪಾಸಣೆಯ ಸಮಯದಲ್ಲಿ ಸ್ಪಷ್ಟವಾದ ಲೋಪಗಳನ್ನು ಕಂಡುಕೊಂಡರು.

ಮಕ್ಕಳ ಸಾವಿಗೆ ನಿಜವಾದ ಕಾರಣ ಏನು ಎಂದು ಇನ್ನೂ ಗುರುತಿಸಲಾಗಿಲ್ಲ. ಮಕ್ಕಳ ಸಾವಿಗೆ ಕೆಮ್ಮಿನ ಔಷಧಿಯೇ ಕಾರಣವಾಗಿತ್ತು ಎಂಬುದನ್ನು ನಾವು ಇನ್ನೂ ತೀರ್ಮಾನಿಸಿಲ್ಲ. ಯಾವುದೇ ಔಷಧಿಯನ್ನು ತೆಗೆದುಕೊಳ್ಳದೆ ಇರುವ ಮಕ್ಕಳು ಸಹ ಸಾವನ್ನಪ್ಪಿದ್ದಾರೆ. ಈ ಮಕ್ಕಳು ತೆಗೆದುಕೊಂಡಿರುವ ಔಷಧಿಗಳನ್ನು ನಾವು ಪರೀಕ್ಷಿಸಿದ್ದೇವೆ, ಅವು ಉತ್ತಮವಾಗಿದೆ ಎಂದು ಗ್ಯಾಂಬಿಯಾದ ಔಷಧಿಗಳ ನಿಯಂತ್ರಣ ಏಜೆನ್ಸಿಯ ಅಧಿಕಾರಿ, ದೇಶದ ಡ್ರಗ್ಸ್‌ ನಿಯಂತ್ರಕ ಟಿಜಾನ್ ಜಾಲೋ ಅವರು ಹೇಳಿದರು.

Leave A Reply

Your email address will not be published.