Xiaomi 12i Hypercharge: 210W ಫಾಸ್ಟ್ ಚಾರ್ಜರ್: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ ಈ ಪವರ್ಫುಲ್ ಸ್ಮಾರ್ಟ್ಫೋನ್
ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ಬಿಡುಗಡೆಯಾಗಿವೆ. ಇದರ ಬೆನ್ನಲ್ಲೇ, Redmi Note 12 ಸರಣಿಯಲ್ಲಿ Redmi Note 12, Redmi Note 12 Pro ಮತ್ತು Redmi Note 12 Pro+ ಮೂರು ಸ್ಮಾರ್ಟ್‌ಫೋನ್‌ಗಳ ಜೊತಗೆ Redmi Note 12 Explorer ಎಂಬ ಆವೃತ್ತಿಯ ಸ್ಮಾರ್ಟ್‌ಫೋನ್‌ನ್ನು ಪರಿಚಯಿಸಲಾಗುತ್ತಿದೆ.
Redmi Note 12 Pro+ ಭಾರತದಲ್ಲಿ ರೆಡ್ಮಿ ನೋಟ್ 12 ಪ್ರೊ+ ಸ್ಮಾರ್ಟ್ಫೋನ್ ಶವೋಮಿ 12i ಹೈಪರ್ಚಾರ್ಜ್ ಎಂಬ ಹೆಸರಿನೊಂದಿಗೆ ರಿಲೀಸ್ ಆಗಲಿದ್ದು, ಇದು ಶವೋಮಿ 11i ಹೈಪರ್ಚಾರ್ಜ್ ಫೋನಿನ ಮುಂದಿನ ಆವೃತ್ತಿ ಎಂದು ಹೇಳಲಾಗುತ್ತಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮಿಂಚುವ ಮೊಬೈಲ್ ಎಂಬ ಸಾಧನ ದಿನಕ್ಕೊಂದು ನವೀನ ಮಾದರಿಯ ವೈಶಿಷ್ಟ್ಯತೆಯ ಮೂಲಕ ಜನರ ಮನ ಸೆಳೆಯುವತ್ತ ದಾಪುಗಾಲು ಇಡುತ್ತಿದೆ. ಈ ನಡುವೆ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ನವೀನ ಪ್ರಯೋಗಗಳ ಮೂಲಕ ಹೊಸ ವೈವಿಧ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಸಂಸ್ಥೆ ತನ್ನದೇ ಟ್ರೆಂಡ್ ರೂಪಿಸಿಕೊಂಡು ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ ನಡಿಯಲ್ಲಿ ಕಳೆದ ವಾರ ರೆಡ್ಮಿ ನೋಟ್ 12 ಸರಣಿ (Redmi Note 12 series) ಸ್ಮಾರ್ಟ್ಫೋನನ್ನು ರಿಲೀಸ್ ಮಾಡಿದೆ.
ಚೀನಾದಲ್ಲಿ ಧೂಳೆಬ್ಬಿಸುತ್ತಿರುವ ಈ ಸ್ಮಾರ್ಟ್ಫೋನ್ನಲ್ಲಿ ರೆಡ್ಮಿ ನೋಟ್ 12 ಪ್ರೊ+ ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ. ಭಾರತದಲ್ಲಿ ರೆಡ್ಮಿ ನೋಟ್ 12 ಪ್ರೊ+ ಸ್ಮಾರ್ಟ್ಫೋನ್ ಶವೋಮಿ 12i ಹೈಪರ್ಚಾರ್ಜ್ ಎಂಬ ಹೆಸರಿನೊಂದಿಗೆ ರಿಲೀಸ್ ಆಗಲಿದ್ದು, ಇದು ಶವೋಮಿ 11i ಹೈಪರ್ಚಾರ್ಜ್ ಫೋನಿನ ಮುಂದಿನ ಆವೃತ್ತಿಯಾಗಿದೆ.
ಈ ಫೋನ್ ಬಿಐಎಸ್ ಸರ್ಟಿಫಿಕೇಶನ್ನಲ್ಲಿ ಕಾಣಿಸಿಕೊಂಡ ಕಾರಣ ಕೆಲವೇ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಶವೋಮಿ 12i ಹೈಪರ್ಚಾರ್ಜ್ 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಶವೋಮಿ 12i ಹೈಪರ್ಚಾರ್ಜ್ 5,000mAh ಸಾಮರ್ಥ್ಯದ ಬ್ಯಾಟರಿ ವಿಶೇಷತೆ ಹೊಂದಿದೆ. ಇದರ ಜೊತೆಗೆ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈಫೈ 6, GNSS, NFC, ಮತ್ತು USB ಟೈಪ್-ಸಿ ನೀಡಲಾಗಿದೆ.
ಭಾರತದಲ್ಲಿ ಈ ಫೋನ್ ಯಾವ ಬಣ್ಣಗಳಲ್ಲಿ ಹಾಗೂ ಎಷ್ಟು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ಇದರ ಬೆಲೆ 25,000 ರೂ. ಯಿಂದ 30,000 ರೂ. ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ಶವೋಮಿ 12i ಹೈಪರ್ಚಾರ್ಜ್ ಫೋನಿನಲ್ಲಿರುವ ಫೀಚರ್ ರೆಡ್ಮಿ ನೋಟ್ 12 ಪ್ರೊ+ ನಲ್ಲಿರುವ ವಿಶೇಷತೆಗಳನ್ನು ಒಳಗೊಂಡಿದ್ದು, ರೆಡ್ಮಿ ನೋಟ್ 12 ಪ್ರೊ+ 210W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದ್ದರೆ ಶವೋಮಿ 12i ಹೈಪರ್ಚಾರ್ಜ್ 120W ವೇಗದ ಚಾರ್ಜಿಂಗ್ನೊಂದಿಗೆ ಬರುವ ನಿರೀಕ್ಷೆ ದಟ್ಟವಾಗಿದೆ.
ಕ್ಯಾಮೆರಾ ವೈಶಿಷ್ಟ್ಯ ಗಮನಿಸುವುದಾದರೆ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ.
ಇದರ ಜೊತೆಗೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಸದ್ಯದಲ್ಲೇ ಭಾರತಕ್ಕೆ ಲಗ್ಗೆ ಇಟ್ಟು ಜನರ ಮನ ಸೆಳೆಯುವ ಪ್ರಯತ್ನ ನಡೆಸಲು redmi note 12+ pro ಅಣಿಯಾಗಿದೆ.