Bengaluru Police Holiday Rules : ಪೊಲೀಸ್ ಸಿಬ್ಬಂದಿ ರಜೆಗೆ ಹೊಸ ರೂಲ್ಸ್ | ವೈರಲ್ ಆದ DCP ಸುತ್ತೋಲೆ | ಅರಗ ಜ್ಞಾನೇಂದ್ರ ಗರಂ!!!

ನಮ್ಮ ದೇಶದಲ್ಲಿ ಕಾನೂನಿನ ಜೊತೆಗೆ ಕೈಗೂಡಿಸಿ ಸಮಾಜಕ್ಕೋಸ್ಕರ ಸಮಾಜದ ಶಾಂತಿ ಸಮಾನತೆ ಕಾಪಾಡಲು ಪೋಲೀಸ್ ಸಿಬ್ಬಂದಿಗಳ ಪಾತ್ರ ಸಹ ಮಹತ್ವ ಆಗಿದೆ. ಆದರೆ ಪೋಲೀಸ್ ಸಿಬ್ಬಂದಿ ವರ್ಗದ ರಜೆ ವಿಚಾರದಲ್ಲಿ ಒಂದು ಸುತ್ತೋಲೆ ಹೊರಡಿಸಿದ್ದು, ಇದೀಗ ಸುತ್ತೋಲೆಯು ವೈರಲ್ ಆಗಿದೆ.

ಹೌದು ಪೊಲೀಸ್ ಸಿಬ್ಬಂದಿಗಳಿಗೆ ರಜೆ ನೀಡುವ ವಿಚಾರದ ಸುತ್ತೋಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ ತಮ್ಮ ವಿಭಾಗದ ಸಿಬ್ಬಂದಿಗೆ ರಜೆ ತೆಗದುಕೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ಎರಡು ಕಾರಣಗಳಿಗೆ ಮಾತ್ರ ರಜೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸುತ್ತೋಲೆ ಬಗ್ಗೆ ಪೊಲೀಸ್​ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದಾರೆ ಮತ್ತು , ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದಲ್ಲಿ ಪದೇ ಪದೇ ಸಿಬ್ಬಂದಿ ರಜೆಗಳ ಮೇಲೆ ತೆರಳ್ತಿರೋ ಹಿನ್ನೆಲೆ ಈ ಸುತ್ತೋಲೆ ಹೊರಡಿಸಲಾಗಿದೆ.
ಸುತ್ತೋಲೆ ಪ್ರಕಾರ :
• ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರೆ ಹಾಗೂ
• ಮನೆಯಲ್ಲಿ ಸಾವಿನ ಕಾರಣವಿದ್ದರೆ ರಜೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಸಕಾರಣವಿಲ್ಲದೆ ಸುಮ್ಮನೆ ರಜೆಗಳು ಹಾಕಿದಾಗ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ. ಮೇಲಿನ ಎರಡು ಕಾರಣ ಬಿಟ್ಟು ಬೇರೆ ಕಾರಣಕ್ಕೆ ರಜೆ ಬೇಕಾಗಿದ್ದಲ್ಲಿ ಡಿಸಿಪಿಯಿಂದಲೇ ಅನುಮತಿ ಕಡ್ಡಾಯ ಎಂದು ಹೇಳಲಾಗಿದೆ. ಇತ್ತೀಚೆಗೆ ಆಗ್ನೇಯ ವಿಭಾಗದಲ್ಲಿ ರಜೆಗಳ ಮೆಲೆ ಸಿಬ್ಬಂದಿ ಹೆಚ್ಚು ಹೋಗ್ತಿದ್ದು, ಕರ್ತವ್ಯಕ್ಕೆ ಸಮಸ್ಯೆ ಹಿನ್ನೆಲೆ ಸುತ್ತೋಲೆ ಹೊರಡಿಸಲಾಗಿದೆ.

‘ಯಾರಾದರೂ ಮೃತಪಟ್ಟರಷ್ಟೇ ಪೊಲೀಸರಿಗೆ ಸಿಗಲಿದೆ ರಜೆ ‘ಕುರಿತ ಆದೇಶದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ಕೊಡುವಂತೆ ಡಿಸಿಪಿ ಅವರಿಗೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ತಕ್ಷಣ ಈ ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ.

ಡಿಸಿಪಿ ಸಿ‌ಕೆ ಬಾಬಾ ಸ್ಪಷ್ಟನೆಯ ಪ್ರಕಾರ :
ಇದು ನಮ್ಮ ವಿಭಾಗದ ಆಂತರಿಕ ಆಡಳಿತ ಸುತ್ತೋಲೆಯಾಗಿದ್ದು, ಇದನ್ನ ಸಿಬ್ಬಂದಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾವು ಇನ್ಸ್ ಪೆಕ್ಟರ್ ಸೇರಿ ಮೇಲ್ಮಟ್ಟದ ಅಧಿಕಾರಿ ವರ್ಗಕ್ಕೆ ಅಷ್ಟೇ ರಜೆ ನೀಡಲಾಗುತ್ತದೆ. ಸಿಬ್ಬಂದಿಗಳಿಗೆ ಆಯಾ ಠಾಣಾ ವ್ಯಾಪ್ತಿಯಲ್ಲಿನ ಠಾಣಾಧಿಕಾರಿಗಳಿಗೆ ನೀಡುತ್ತಾರೆ. ಮುಖ್ಯವಾದ ಹಬ್ಬ, ಬಂದೋಬಸ್ತ್ ಇನ್ನಿತರ ಸೂಕ್ಷ್ಮ ಘಟನಾವಳಿಗಳು ನಡೆದಾಗ ಕೆಲ ಸಿಬ್ಬಂದಿ ರಜೆಯಲ್ಲಿರುವ ಪ್ರವೃತ್ತಿ ಬೆಳೆಸಿಕೊಂಡಿರುತ್ತಾರೆ‌. ಇದು ಮುಂದಿನ ದಿನಗಳಲ್ಲಿ ಮುಂದುವರಿಯಬಾರದು ಅಂತಷ್ಟೇ ಠಾಣಾಧಿಕಾರಿಗಳಿಗೆ ಆದೇಶ ನೀಡಿದ್ದೇವೆ ಎಂದು ಎಸ್.ಕೆ.ಬಾಬಾ ತಮ್ಮ ಸುತ್ತೋಲೆಗೆ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆ ಈ ಸ್ಪಷ್ಟನೆಯಿಂದ ಪೋಲೀಸ್ ಸಿಬ್ಬಂದಿಗಳು ಕೊಂಚ ಕಸಿವಿಸಿ ಗೊಂಡಿದ್ದು ಅಲ್ಲದೆ, ಪೋಲೀಸ್ ಸಿಬ್ಬಂದಿಗಳ ಪಾಡು ಅವರಿಗೇ ಸಾಕು ಅಂತಾಗಿದೆ.

Leave A Reply

Your email address will not be published.