Bridge Collapse Accident : ಸೇತುವೆ ದುರಂತ ಇಲ್ಲಿಯವರೆಗೆ ಎಷ್ಟು ನಡೆದಿದೆ ಎಂದು?
ಇಲ್ಲಿವರೆಗೆ ಅದೆಷ್ಟೋ ಸೇತುವೆ ದುರಂತಗಳು ನಡೆದಿದೆ ಮತ್ತು ಈಗಲೂ ನಡೆಯುತ್ತಲಿದೆ. ಅಷ್ಟಕ್ಕೂ ಈ ದುರಂತಗಳು ಹೇಗೆ ಸಂಭವಿಸುತ್ತದೆ? ಇಲ್ಲಿಯ ವರೆಗೆ ಅದೆಷ್ಟು ದುರಂತಗಳು ನಡೆದಿವೆ? ಇದರೆಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಾರ್ಜಿಲಿಂಗ್ ಸೇತುವೆ ಕುಸಿತ (2011): ಅದು ಅಕ್ಟೋಬರ್ 22,2011 ಡಾರ್ಜಿಲಿಂಗ್ ಜಿಲ್ಲೆಯ ಬಿಜಾನ್ಬರಿಯಲ್ಲಿ ಗೂರ್ಖಾ ಜನಮುಕ್ತಿ ಮೋರ್ಚಾ ಸಭೆಯು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅನೇಕ ಜನರು ಸೇರಿದ್ದರು. ಹಳೆಯ ಮರದ ಕಾಲು ಸೇತುವೆಯೊಂದರ ಮೇಲೆ ಅತಿಯಾದ ಜನರಿದ್ದ ಕಾರಣ ಸೇತುವೆಯು ಮುರಿದಿದೆ. ಇದರಲ್ಲಿ ಮೂವತ್ತೆರಡು ಜನರು ಸಾವನ್ನಪ್ಪಿದರು ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಅರುಣಾಚಲ ಪ್ರದೇಶದ ಕಾಲ್ಸೇತುವೆ ಕುಸಿತ (2011): ಡಾರ್ಜಿಲಿಂಗ್ ಘಟನೆಯ ಕೇವಲ ಒಂದು ವಾರದ ಅಂತರದಲ್ಲಿ, ಅಂದರೆ ಅಕ್ಟೋಬರ್ 29, 2011 ರಂದು ಅರುಣಾಚಲ ಪ್ರದೇಶದ 63 ಜನರು ಕೀಟವನ್ನು ಹಿಡಿಯಲು ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಮೆಂಗ್ ನದಿಯ ಮೇಲಿನ ಕಾಲು ಸೇತುವೆ ಕುಸಿದಿದೆ. ಇದನ್ನು ‘ತಾರಿ’ ಎಂದು ಕರೆಯಲಾಗಿತ್ತು.
ಕೋಲ್ಕತ್ತಾದಲ್ಲಿ ವಿವೇಕಾನಂದ ಮೇಲ್ಸೇತುವೆ ಕುಸಿತ (2016): ಉತ್ತರ ಕೋಲ್ಕತ್ತಾದಲ್ಲಿ 2.2 ಕಿಮೀ ಉದ್ದದ ವಿವೇಕಾನಂದ ಮೇಲ್ಸೇತುವೆಯು ಜನದಟ್ಟಣೆಯ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದಾಗ ಕುಸಿದು 26 ಜನರನ್ನು ಬಲಿ ತೆಗೆದುಕೊಂಡಿದೆ. ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕೋಲ್ಕತ್ತಾದಲ್ಲಿ ಮಜೆರ್ಹತ್ ಮೇಲ್ಸೇತುವೆ ಕುಸಿತ (2018):
ದಕ್ಷಿಣ ಕೋಲ್ಕತ್ತಾದ 50 ವರ್ಷ ಹಳೆಯದಾದ ಮಜೆರ್ಹತ್ ಸೇತುವೆಯ ಒಂದು ಭಾಗವು ಭಾರೀ ಮಳೆಯ ಕಾರಣ ಕುಸಿದುಬಿದ್ದಿತು. ಇದರಿಂದ ಮೂವರು ಸಾವನ್ನಪ್ಪಿದ್ದರು ಮತ್ತು 24 ಜನರು ಗಾಯಗೊಂಡಿದ್ದರು. ಈ ಘಟನೆಯು ಸೆಪ್ಟೆಂಬರ್ 4, 2018 ರಂದು ನಡೆದಿದೆ.
ಮುಂಬೈ ಅಡಿ ಸೇತುವೆ ಕುಸಿತ (2019): ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲ್ವೆ ನಿಲ್ದಾಣದ ಬಳಿ ಇರುವ ಕಾಲು ಸೇತುವೆಯು ಮಾರ್ಚ್ 14, 2019 ರಂದು ಕುಸಿದು ಆರು ಜನರು ಸಾವನ್ನಪ್ಪಿದ್ದರು ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು
ಸೇತುವೆ ದುರಂತವು ನೈಸರ್ಗಿಕ ವಿಪ್ಪತ್ತಿಗಿಂತಲೂ ಹೆಚ್ಚು ಬೇರೆ ಕಾರಣಕ್ಕೇ ಸೇತುವೆಗಳು ಹಾನಿಗೊಳಗಾಗುತ್ತದಂತೆ. ಇದರಿಂದ ಅಪಾಯ ತಪ್ಪಿದ್ದಲ್ಲ. ಸರಿಯಾದ ನಿರ್ಮಾಣ ಮತ್ತು ನಿರ್ವಹಣೆ ಇಲ್ಲದೆ ಇದ್ದರೆ ಪ್ರಾಣಾಪಾಯ ಖಂಡಿತ. “80.3 ಶೇಕಡಾ” ಸೇತುವೆಯ ಮೂಲಸೌಕರ್ಯದ ವೈಫಲ್ಯದಿಂದಾಗಿಯೇ ಹಾನಿ ಸಂಭವಿಸುತ್ತದೆ ಎಂದು ಅಧ್ಯಯನದ ಪ್ರಕಾರ ತಿಳಿದು ಬಂದಿದೆ. ತಡೆಯಲಾರದಷ್ಟು ಭಾರವನ್ನು ಸೇತುವೆಯ ಮೇಲೆ ಹಾಕುವುದರಿಂದಾಗಿಯೇ ಶೇ 3.28 ಸೇತುವೆ ಹಾನಿಗೊಳಗಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.