Vibhuti: ಸಾಯಿ ಬಾಬಾ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು !!!ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು?

ಪ್ರತಿ ವಿಚಾರದಲ್ಲೂ ನಂಬಿಕೆ ಮುಖ್ಯ ಪಾತ್ರ ವಹಿಸುತ್ತದೆ. ದೈವಿಕ ಶಕ್ತಿಯ ಬಗ್ಗೆ ಕೆಲವರು ನಂಬಿಕೆ ಇಟ್ಟುಕೊಂಡರೆ ಮತ್ತೆ ಕೆಲವರು ಅದೆಲ್ಲ ಭ್ರಮೆ ಎಂದು ವಾದಿಸಬಹುದು. ಪವಾಡ ಪುರುಷ ಎಂದು ಹೆಚ್ಚಿನವರು ನಂಬುವ ಪುಟ್ಟಪರ್ತಿ ಸಾಯಿ ಬಾಬಾ ಫೋಟೊದಿಂದ ಪವಾಡವೊಂದು ನಡೆದಿದೆ ಎಂಬ ವಿಚಾರ ದೊಡ್ದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಯಿಬಾಬಾ ಫೋಟೋದಿಂದ ವಿಭೂತಿ ಉದುರುತ್ತಿದೆ ಎಂದು ಗ್ರಾಮಸ್ಥರು, ಆ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ಘಟನೆ ಜರುಗಿದೆ. ಅಲ್ಲಿ ಜರುಗಿದಾದ್ದರು ಏನು ಎಂಬ ಪ್ರಶ್ನೆ ಸದ್ಯ ಕುತೂಹಲ ಮೂಡಿಸಿದೆ.

ಬಾಬಾ ನಮ್ಮ ನಡುವೆ ಇಲ್ಲದಿದ್ದರೂ ಅವರನ್ನು ಪೂಜಿಸುವ ಮತ್ತು ಪೂಜಿಸುವವರಿಗೆ ಅವರು ಯಾವಾಗಲೂ ಜೀವಂತವಾಗಿದ್ದಾರೆ ಎಂದು ಆಗಾಗ ಸಾಬೀತಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ , ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಗ್ರಾಮದಲ್ಲಿ ಪವಾಡವೊಂದು ನಡೆದಿದ್ದು, ಸತ್ಯಸಾಯಿ ಫೋಟೋದಿಂದ ವಿಭೂತಿ (Vibhuti) ಉದುರುತ್ತಿದೆ ಎಂದು ಗ್ರಾಮಸ್ಥರು ಆ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಪುಟ್ಟಪರ್ತಿ ಪುರಸಭೆಯ ಪೆದ್ದಕಮ್ಮವಾರಿಪಲ್ಲಿ ಗ್ರಾಮದಲ್ಲಿ ಸತ್ಯಸಾಯಿ ಬಾಬಾ (Puttaparthi Sai Baba) ಭಕ್ತೆಯ ಮನೆಯಲ್ಲಿ ಈ ವಿಶೇಷ ಘಟನೆ ನಡೆದಿದೆ ಎಂಬ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ.

ಇದು ಸತ್ಯಸಾಯಿ ಬಾಬಾರವರ ಜನ್ಮ ಮಾಸವಾದ್ದರಿಂದ ಈ ಪವಾಡ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ನೋಡಿದ ಕುಟುಂಬಸ್ಥರು ಪೂಜೆ ಮಾಡತೊಡಗಿದ್ದಾರೆ. ಇದರಿಂದ ಆ ಮನೆಗೆ ಸುತ್ತಮುತ್ತಲಿನ ಗ್ರಾಮಸ್ತರು ಬರಲಾರಂಭಿಸಿದ್ದಾರೆ.

ಅಷ್ಟೇ ಅಲ್ಲ, ಈ ಹಿಂದೆಯೂ ಜಿಲ್ಲೆಯಲ್ಲಿ ಹಲವು ಪವಾಡಗಳು ನಡೆದಿವೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಹೀಗೆ ವಿಭೂತಿ ಉದುರುವ ಪವಾಡ ನಡೆಯುತ್ತದೆ.. ಇದೆಲ್ಲ ಸತ್ಯಸಾಯಿಯ ಮಹಿಮೆ ಎಂಬ ನಂಬಿಕೆ ಜನರಲ್ಲಿದೆ.

ಇದೇ ವೇಳೆ…ಸತ್ಯಸಾಯಿ ಜಿಲ್ಲೆಯ ಜೀರಿಗೆಪಲ್ಲಿ ಎಂಬ ಗ್ರಾಮದಲ್ಲಿ ಮತ್ತೊಂದು ಅಪರೂಪದ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಸ್ಥಳೀಯ ಅಮ್ಮಾಜಿ ದೇವಸ್ಥಾನಕ್ಕೆ ಎರಡು ಕರಡಿಗಳು ನುಗಿದ್ದು, ದೇವಸ್ಥಾನದ ಮುಖ್ಯ ದ್ವಾರದಿಂದ ದೇವಸ್ಥಾನ ಪ್ರವೇಶಿಸಿವೆ.

ಅದಾದ ನಂತರ ಎರಡು ಕರಡಿಗಳ ಪೈಕಿ.. ಒಂದು ಕರಡಿ ದೇವಸ್ಥಾನದ ಗಂಟೆಗೆ ನೇತಾಡುವ ಹಗ್ಗವನ್ನು ಕಚ್ಚಿಕೊಂಡು ಸುತ್ತುತ್ತಿದೆ. ತನ್ನ ಮುಂಭಾಗದ ಕಾಲುಗಳಿಂದ ಎಳೆಯುತ್ತಾ ದೇವಾಲಯದ ಗಂಟೆಯನ್ನು ಬಾರಿಸಿದೆ. ಇದನ್ನು ಕಂಡವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು , ಎಲ್ಲೆಡೆ ವೈರಲ್ ಆಗಿ ಸದ್ಯ ಈ ವಿಚಾರ ಸುದ್ದಿಯಲ್ಲಿದೆ.

Leave A Reply

Your email address will not be published.