Marriage Muhurat : ‘ಕಂಕಣ ಭಾಗ್ಯ’ ಕ್ಕೆ 2023 ರಲ್ಲಿ ಎಷ್ಟು ಮದುವೆ ಮುಹೂರ್ತವಿದೆ? ಇಲ್ಲಿದೆ ಮಾಹಿತಿ!!!
ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯೆಂಬ ಬೆಸುಗೆಗೆ ನಾಂದಿಯಾಗಿ, ಎರಡು ಜೀವಗಳು ಬೆರೆತು ಸಪ್ತ ಪದಿ ತಿಳಿದು ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯುವ ಶುಭ ಗಳಿಗೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಯಾವುದೇ ಅಡೆತಡೆ ಇಲ್ಲದೆ ಮುಂದಿನ ಜೀವನ ಸುಖಮಯವಾಗಿ ಸಾಗಬೇಕು ಎಂಬ ಉದ್ದೇಶದಿಂದ ವಧು ವರನ ಜಾತಕಗಳ ಹೊಂದಾಣಿಕೆಯನ್ನು ನೋಡಿ ಮುಹೂರ್ತ ನಿಗದಿ ಪಡಿಸುವುದು ವಾಡಿಕೆ.
ಮೊನ್ನೆಯಷ್ಟೇ ದೀಪಾವಳಿ ಹಬ್ಬ ಮುಗಿದಿದ್ದು, ತುಳಸಿ ಪೂಜೆ ಮುಗಿದ ತಕ್ಷಣ ಮದುವೆಯ ಸೀಸನ್ಗಳು ಆರಂಭವಾಗುತ್ತವೆ. ಪಂಚಾಂಗ ಶಾಸ್ತ್ರದ ಪ್ರಕಾರ ನೋಡುವುದಾದರೆ, ಈ ವರ್ಷ ನವೆಂಬರ್ 25 ರಿಂದ ಮುಂದಿನ ವರ್ಷ ಜೂನ್ 28 ರವರೆಗೆ ಒಟ್ಟು 58 ವಿವಾಹ ಶುಭ ಮುಹೂರ್ತಗಳಿವೆ.
ಗುರುಗ್ರಹದ ಕಾರಣದಿಂದ ಏಪ್ರಿಲ್ನಲ್ಲಿ ಕೇವಲ ಒಂದು ಮುಹೂರ್ತವಿದೆ. ಮೇ ತಿಂಗಳಲ್ಲಿ ಗರಿಷ್ಠ 14ಮುಹೂರ್ತಗಳಿವೆ. ಇನ್ನು ಜೂನ್’ನಲ್ಲಿ 12 ಮುಹೂರ್ತಗಳು ಮತ್ತು ಫೆಬ್ರವರಿಯಲ್ಲಿ 10 ಮುಹೂರ್ತಗಳಿವೆ.
ಶುಭ ಕಾರ್ಯಗಳನ್ನು ಮಾಡಲು ಕೆಲ ಒಳ್ಳೆಯ ಗಳಿಗೆ , ದಿನವಿದ್ದಂತೆ ಕೆಲ ಸಮಯಗಳಲ್ಲಿ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಅಂತೆಯೇ, 2023ರಲ್ಲಿ ಜೂನ್ 29ರಿಂದ ಚಾತುರ್ಮಾಸ ಪ್ರಾರಂಭವಾಗಲಿದ್ದು, ಧರ್ಮಗ್ರಂಥಗಳ ಪ್ರಕಾರ, ಈ ಸಮಯದಲ್ಲಿ ಯಾವುದೇ ಮದುವೆ, ಶುಭಕಾರ್ಯ ನಡೆಸುವುದಿಲ್ಲ.
ಇನ್ನು ಚಾತುರ್ಮಾಸ್ಯದ ಅಂತ್ಯ ನವೆಂಬರ್ 24 2023 ಹಾಗೂ ಮುಂದಿನ ವರ್ಷ ಏಪ್ರಿಲ್ 22 ರವರೆಗೆ ಗುರುವು ಮೀನ ರಾಶಿಯಲ್ಲಿ ಸ್ವರಾಶಿಯಲ್ಲಿರುವುದರಿಂದ, ಈ ಅವಧಿಯಲ್ಲಿ ಎಲ್ಲಾ ರಾಶಿಗಳಿಗೆ ಗುರುವು ಮಂಗಳಕರವಾಗಿರುತ್ತದೆ.
ಏಪ್ರಿಲ್ 23, 2023 ರಿಂದ ಏಪ್ರಿಲ್ 2024 ರವರೆಗೆ, ಗುರುವು ಮೇಷ ರಾಶಿಯಲ್ಲಿರುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ ಮಿಥುನ, ಸಿಂಹ, ತುಲಾ, ಧನು, ಮೀನ ರಾಶಿಯವರಿಗೆ ಕುಬ್ಜ ಹಾಗೂ ವರನಿಗೆ ಉತ್ತಮ ಗುರುಬಲ ದೊರೆಯುತ್ತದೆ ಎಂಬುದು ಪಂಡಿತರ ಲೆಕ್ಕಾಚಾರವಾಗಿದೆ.
ಯಾವ ತಿಂಗಳುಗಳಲ್ಲಿ ಎಷ್ಟು ಮದುವೆ ಮುಹೂರ್ತವಿದೆ ಎಂಬುದನ್ನೂ ಗಮನಿಸುವುದಾದರೆ:
ನವೆಂಬರ್ 2022 ರಲ್ಲಿ 25, 26, 28, 29 ನಾಲ್ಕು ಶುಭ ಮುಹೂರ್ತಗಳು ಇವೆ. ಡಿಸೆಂಬರ್ ನಲ್ಲಿ 2, 4, 8, 9, 14, 16, 17, 18, 19 ಮದುವೆಗೆ ಸೂಕ್ತವಾದ ದಿನಗಳಾಗಿವೆ.
ಇನ್ನು ಹೊಸ ವರ್ಷ ಜನವರಿ 2023 ರಲ್ಲಿ 18, 26, 27, 31ಶುಭ ಮುಹೂರ್ತಗಳು, ಫೆಬ್ರವರಿಯಲ್ಲಿ 6, 7, 10, 11, 14, 16, 23, 24, 27, 28 ಮದುವೆಗೆ ಸೂಕ್ತವಾದ ದಿನಗಳಾಗಿವೆ.
ಮಾರ್ಚ್ನಲ್ಲಿ 9, 13, 17, 18 ನಾಲ್ಕು ಶುಭ ಗಳಿಗೆ ಮದುವೆ ಕಾರ್ಯ ನಡೆಸಬಹುದು. ಅಲ್ಲದೆ, ಏಪ್ರಿಲ್ ನಲ್ಲಿ ಕೇವಲ ಒಂದು ಶುಭ ಮುಹೂರ್ತ ವಿದ್ದು, 30 ರಂದು ಮಂಗಳ ಕಾರ್ಯಗಳನ್ನೂ ನಡೆಸಬಹುದು.
ಮೇ ಯಲ್ಲಿ 2, 3, 4, 7, 9, 10, 11, 12, 15, 16, 21, 22, 29, 30 ಅನೇಕ ಶುಭ ಮುಹೂರ್ತಗಳಿವೆ. ಕೊನೆಯದಾಗಿ,ಜೂನ್ ನಲ್ಲಿ 1, 4, 7, 8, 11, 12, 13, 14, 23, 26, 27, 28 ಈ ದಿನಾಂಕಗಳು ಪಂಚಾಂಗಗಳ ಪ್ರಕಾರ ಮದುವೆಗೆ ಮಂಗಳಕರ ಸಮಯವಾಗಿದೆ.
ಮದುವೆಯ ಶುಭ ಕಾರ್ಯಗಳನ್ನು ನಡೆಸಲು ಮೇಲೆ ತಿಳಿಸಿದ ದಿನಾಂಕಗಳು ಶುಭಕರ ವಾಗಿದ್ದು, ಈ ದಿನಗಳಲ್ಲಿ ಮದುವೆ ಕಾರ್ಯ ನಡೆಸಬಹುದಾಗಿದೆ.