ಹೆಂಡ್ತಿ ಹಿಂಸೆಗೆ ನಲುಗಿ ಹೋದ ಬೆಂಗಳೂರಿನ ಟೆಕ್ಕಿ | ವಿಪರೀತ ಹಿಂಸೆ ತಾಳಲಾರದೇ ಗಂಡನಿಂದ ಪ್ರಧಾನಿಗೆ ಪತ್ರ!!!

ಸಾಮಾನ್ಯವಾಗಿ ಗಂಡನಿಂದ ಹಿಂಸೆಯಾಗುತ್ತಿದೆ, ಗಂಡ ಕುಡಿದು ಬಂದು ಹೊಡೆಯುತ್ತಾನೆ, ಗಂಡನಿಂದ ಹಲ್ಲೆಗೆ ಒಳಗಾದ ಪತ್ನಿ ಹೀಗೇ ಹಲವಾರು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪತ್ನಿಯಿಂದ ಹಿಂಸೆಯಾಗುತ್ತಿದೆ ಎಂದಿದ್ದಾನೆ. ಅಷ್ಟೇ ಅಲ್ಲ ಹೆಂಡತಿಯ ವಿಪರೀತ ಹಿಂಸೆ ತಾಳಲಾರದೇ ಪ್ರಧಾನಿಗೆ ಪತ್ರ ಕೂಡ ಬರೆದಿದ್ದಾನೆ. ಪ್ರಧಾನಿಗೆ ಪತ್ರ ಬರೆಯುವಂತಹ ಹಿಂಸೆ ಏನಿರಬಹುದು? ಆ ಪತ್ರದಲ್ಲಿ ಏನು ಬರೆಯಲಾಗಿತ್ತು? ಎಂಬುದನ್ನು ನೋಡೋಣ.

 

ಬೆಂಗಳೂರಿನ ಟೆಕ್ಕಿ ನನ್ನ ಪತ್ನಿ ಚೂರಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಆಕೆಯಿಂದ ನನಗೆ ರಕ್ಷಣೆ ಕೊಡಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯಕ್ಕೆ ಮೊರೆ ಸಲ್ಲಿಸಿದ್ದಾನೆ. ಪುರುಷರ ಪರವಾದ ಹಕ್ಕುಗಳಿಗೆ ಧ್ವನಿ ಎತ್ತುವ ಯದುನಂದನ್‌ ಆಚಾರ್ಯ ಪಿಎಂಓ ಗೆ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿನ ಟೆಕ್ಕಿ ತನ್ನ ಪತ್ನಿಯಿಂದ ರಕ್ಷಣೆ ಕೋರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ. ನಗರದ ಯದುನಂದನ್ ಆಚಾರ್ಯ ಎಂಬ ವ್ಯಕ್ತಿ ತನ್ನ ಹೆಂಡತಿ ನಿರಂತರವಾಗಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಮತ್ತು ಕೊಲೆ ಬೆದರಿಕೆ ಹಾಕುತ್ತಾಳೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ವ್ಯಕ್ತಿ ಪಿಎಂಒ ಅಧಿಕೃತ ಹ್ಯಾಂಡಲ್‌ಗೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಅದರ ಜೊತೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ , ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿದ್ದಾರೆ.

ಇನ್ನೂ ಪತ್ರದಲ್ಲಿ , “ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ, ಇದು ನೀವು ಉತ್ತೇಜಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಾಕಬಹುದೇ? ಇಲ್ಲವೇ ಎನ್ನುವುದನ್ನು ತಿಳಿಸಿ,” ಎಂದು ಬರೆಯಲಾಗಿದೆ. ಹೆಣ್ಣಿಗೆ ಇಂತಹ ಅನ್ಯಾಯವಾದರೆ ನ್ಯಾಯ ಒದಗಿಸುತ್ತಾರೆ. ತಾನು ಒಬ್ಬ ಗಂಡಸಾಗಿರುವ ಕಾರಣ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದು ಹೇಳಿದರು. ಇನ್ನೂ ಯದುನಂದನ್‌ ಅವರು ಮಾಡಿರುವ ಟ್ವೀಟ್‌ಗೆ ಕೆಲವರು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಿಮ್ಮ ಮೇಲೆ ಹಲ್ಲೆಯಾಗಿದೆ ಎನ್ನುವುದಕ್ಕೆ ಸಾಕ್ಷಿ ಏನಿದೆ ಎಂದು ಒಬ್ಬ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಯದುನಂದನ್‌, ನಿಮಗೆ ಯಾವ ರೀತಿಯ ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಮೈಯಲ್ಲಿ ಚಾಕುವಿನ ಇರಿತದ ಗಾಯವಿದೆ ಎಂದು ಹೇಳಿದ್ದಾರೆ.

ಈ ನಡುವೆ ಅವರ ಟ್ವೀಟ್‌ಗೆ ಉತ್ತರಿಸಿದ ಬೆಂಗಳೂರು ಪೊಲೀಸ್‌ ಕಮೀಷನರ್‌ ಪ್ರತಾಪ್‌ ರೆಡ್ಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಯದುನಂದನ್, ಎರಡು ವರ್ಷಗಳ ಹಿಂದೆ ತಾವು ಮಾಡಿರುವ ಸಂದೇಶವನ್ನು ತೋರಿಸಿ ಆ ವ್ಯಕ್ತಿ ಬೆಂಗಳೂರು ಪೊಲೀಸರನ್ನು ಟಾರ್ಗೆಟ್ ಮಾಡಿದ್ದಾರೆ. ವ್ಯಕ್ತಿಯು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳಿಗಿಂತ ಮೊದಲೇ ಈ ರೀತಿಯ ಹಲ್ಲೆ ನನ್ನ ಮೇಲೆ ನಡೆಯುತ್ತಿದೆ ಎಂದಿದ್ದಾರೆ. ಹೀಗಿರುವಾಗ ಬೆಂಗಳೂರು ಪೊಲೀಸರಿಂದ ಈ ಬಾರಿ ಸಹಾಯ ನಿರೀಕ್ಷೆ ಮಾಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.

ಯದುನಂದನ್ ಆಚಾರ್ಯ ಅವರು ಸಹಾಯ ಕೇಳಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯದುನಂದನ್ ಆಚಾರ್ಯ ಅವರಿಗೆ ಎಲ್ಲಾ ವರ್ಗಗಳ ಬೆಂಬಲ ಸಿಕ್ಕಿದ್ದು, ಕಿರುಕುಳಕ್ಕೊಳಗಾದ ಗಂಡಂದಿರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ. ಇನ್ನೂ ಈತನಿಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗುವ ಸಾಧ್ಯತೆ ಇದೆ.

Leave A Reply

Your email address will not be published.