Bride video : ವಿವಾಹವಾಗಿ ಕಾರಲ್ಲಿ ಕುಳಿತುಕೊಂಡ ವಧು, ವರನಿಗೆ ಕಾರಲ್ಲೇ ನೀಡಿದಳು….

Share the Article

ಮದುವೆ ಸಮಯದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಬೇಸರಗೊಂಡು ಕಣ್ಣು ಒದ್ದೆ ಮಾಡಿಕೊಳ್ಳುವ ಪ್ರಸಂಗ ಸಾಮಾನ್ಯ. ಜೀವನದ ಅವಿಭಾಜ್ಯ ಅಂಗವಾಗಿದ್ದ ಪೋಷಕರನ್ನು ಬಿಟ್ಟು ತಾಳಿ ಕಟ್ಟಿದ ಪತಿಯ ಕೈ ಹಿಡಿದು ಮುಂದೆ ಸಾಗಬೇಕಾದಾಗ ಪ್ರತಿ ಹೆಣ್ಣು ಮಗಳಿಗೂ ಕೂಡ ದುಃಖದ ಛಾಯೆ ಆವರಿಸುತ್ತದೆ. ಆದರೆ , ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ವೊಂದು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

https://www.instagram.com/reel/CTrHPHSpFRp/?utm_source=ig_web_copy_link

ವೈರಲ್ ಆಗಿರುವ ವೀಡಿಯೋದಲ್ಲಿ ಮದುವೆಯ ಬೀಳ್ಕೊಡುಗೆ ಸಮಾರಂಭದ ಬಳಿಕ ಕಾರಿನೊಳಗೆ ಬಂದು ಕುಳಿತುಕೊಳ್ಳುವ ವಧು, ವರನೊಂದಿಗೆ ಮಾಡುವ ಕೆಲಸ ನೋಡಿ ನೀವೂ ಗಾಬರಿಯಾಗುವುದು ಖಚಿತ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವಧು-ವರರು ಕಾರಿನಲ್ಲಿ ಕುಳಿತಿದ್ದು, ತಮ್ಮ ತಮ್ಮ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದಾರೆ.

ಆದರೆ ಬಹುಶಃ ವಧು ಮತ್ತು ವರರು ಈ ರೀತಿ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ, ಆಕಸ್ಮಿಕವಾಗಿ ವಧು ಕೋಪಗೊಳ್ಳುತ್ತಾಳೆ. ಇದಾದ ಬಳಿಕ ಏನಾಯಿತು ತಿಳಿಯುವ ಮೊದಲು ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.

ಕಾರಿನಲ್ಲಿ ಕುಳಿತ ವಧು ಎಷ್ಟು ಕೊಪಗೊಂಡಿದ್ದಾಳೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಆಕೆ ತನ್ನ ಪಕ್ಕದಲ್ಲಿದ್ದ ವರನನ್ನು ಎಡೆಬಿಡದೆ ಕಪಾಳಮೋಕ್ಷ ಮಾಡಿದ್ದಾಳೆ. ವಧುವಿನ ಸುಂದರ ಮುಖ ನೋಡಿದ್ದ ವರನಿಗೆ ಆಕೆಯ ಚಂಡಿಯ ಅವತಾರ ಕಂಡು ಬೆರಗಾಗಿದ್ದಾನೆ. ಬಡಪಾಯಿ ವರ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ಏನು ನಡೆಯುತ್ತಿದೆ ಎಂಬ ಅಚ್ಚರಿಯಿಂದ ದಂಗಾಗಿದ್ದಾನೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಜನ ಲೈಕ್ ಮಾಡಿದ್ದು ಮಾತ್ರವಲ್ಲದೆ, ತಮಾಷೆಯ ರೂಪದಲ್ಲಿ ವರನ ಕಾಲೆಳೆಯುತ್ತಿದ್ದಾರೆ. ಈ ವೀಡಿಯೋ ವೀಕ್ಷಿಸಿ ಹೀಗೂ ಉಂಟೇ?? ಎಂಬ ಪ್ರಶ್ನೆ ಹಲವರನ್ನು ಕಾಡದಿರದು!!…ಈ ವೀಡಿಯೊ ನೋಡಿ ಇನ್ನು ಉಳಿದ ನವ ವಧುಗಳು ವರರ ಮೇಲೆ ಪ್ರಯೋಗ ಮಾಡದಿದ್ದರೆ ಸಾಕು!!!

Leave A Reply