ಫ್ಯಾನ್ ಇಲ್ಲದೆ ಮಲಗಲು ಅಸಾಧ್ಯ ಅನ್ನುವವರು ಓದಲೇ ಬೇಕಾಗಿದೆ ಇದರ ದುಷ್ಪರಿಣಾಮ!!

ಈ ಮಾಹಿತಿಯನ್ನ ಓದುವ ಮೊದಲು ನಿಮಗೆ ಫ್ಯಾನ್ ಇಲ್ಲದೆ ಮಲಗಲು ಸಾಧ್ಯವೇ ಎಂಬುದನ್ನ ಮೊದಲು ಖಚಿತಪಡಿಸಿಕೊಳ್ಳಿ. ಯಾಕಂದ್ರೆ, ಎಷ್ಟೋ ಜನರಿಗೆ ಫ್ಯಾನ್ ಗಾಳಿ ಬಿಡಿ, ಅದರ ಶಬ್ದ ಕೇಳದಿದ್ರೂ ನಿದ್ದೆ ಬರೋದಿಲ್ಲವಂತೆ. ನೀವೇನಾದ್ರೂ ಆ ಗುಂಪಿಗೆ ಸೇರಿದ್ರೆ ನಿಮ್ಮ ಆರೋಗ್ಯಕ್ಕೂ ಕಾದಿದೆ ಅಪಾಯ.

ಕೆಲವೊಂದಷ್ಟು ಜನರು ಫ್ಯಾನ್ ಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಅಂದ್ರೆ, ಹೊರಗಡೆ ಜೋರಾಗಿ ಮಳೆ ಬರುತ್ತಿದ್ರೂ ಇವರು ಮಾತ್ರ ಫ್ಯಾನ್ ಗಾಳಿಗೆ ವಿಶ್ರಾಂತಿ ಪಡೆದು ಕೊಂಡಿರುತ್ತಾರೆ. ಅತಿಯಾದ್ರೆ ಅಮೃತಾನೂ ವಿಷ ಅನ್ನುವಂತೆ, ಯಾವುದಕ್ಕೂ ಹೆಚ್ಚು ಒತ್ತು ಕೊಡಬಾರದು. ಇದರಿಂದ ತಮ್ಮ ಆರೋಗ್ಯಕ್ಕೆ ಅತಿಯಾದ ಪೆಟ್ಟು ಬೀಳುತ್ತದೆ. ಹಾಗಿದ್ರೆ ಫ್ಯಾನ್ ಬಳಸೋದ್ರಿಂದ ಶರೀರಕ್ಕೆ ಏನೆಲ್ಲಾ ದುಷ್ಪರಿಣಾಮ ಬೀಳುತ್ತೆ ಅನ್ನೋದನ್ನ ತಿಳಿದುಕೊಂಡು ಬರೋಣ ಬನ್ನಿ..

ಅಲರ್ಜಿ ಹೆಚ್ಚಾಗುವುದು:
ಅಲರ್ಜಿ ಸಮಸ್ಯೆ ಇರುವವರು ಫ್ಯಾನ್‌ ಹಾಕಿ ಮಲಗಿದರೆ ಅಲರ್ಜಿ ಸಮಸ್ಯೆ ತುಂಬಾನೇ ಹೆಚ್ಚಾಗುವುದು. ಅಲರ್ಜಿ ಇಲ್ಲದವರಿಗೂ ಫ್ಯಾನ್‌ ಹಾಕಿ ಮಲಗುವುದರಿಂದ ಅಲರ್ಜಿ ಸಮಸ್ಯೆ ಉಂಟಾಗುವುದು. ಶೀತ, ಗಂಟಲು ಕೆರೆತ, ಕಣ್ಣಿನಲ್ಲಿ ನೀರು ಬರುವುದು, ಉಸಿರಾಟದ ತೊಂದರೆ ಈ ರೀತಿಯ ಸಮಸ್ಯೆಗಳು ಉಂಟಾಗುವುದು.

ಕಣ್ಣುಗಳು ಹಾಗೂ ತ್ವಚೆ ಒಣಗುವುದು:
ಫ್ಯಾನ್‌ ಹಾಕಿ ಮಲಗಿದರೆ ಕಣ್ಣುಗಳು ಡ್ರೈಯಾಗುವುದು, ಅಲ್ಲದೆ ತ್ವಚೆ ಕೂಡ ಡ್ರೈಯಾಗುವುದು.

ಮೈಕೈ ನೋವು:
ಫ್ಯಾನ್ ಹಾಕಿ ಮಲಗುವುದರಿಂದ ಮೈಕೈ ನೋವು ಉಂಟಾಗುವುದು. ಅಲ್ಲದೆ, ಮೈಕೈ ನೋವಿದ್ದರೆ ಫ್ಯಾನ್ ಹಾಕಿ ಮಲಗುವುದರಿಂದ ನೋವು ಮತ್ತಷ್ಟು ಹೆಚ್ಚಾಗುವುದು.

ಸ್ಥೂಲಕಾಯ:
ಫ್ಯಾನ್‌ ಹಾಕಿ ಮಲಗುವುದರಿಂದ ಅಥವಾ ಏರ್‌ ಕಂಡಿಷನರ್ ರೂಮ್‌ನಲ್ಲಿ ಮಲಗುವುದರಿಂದ ಸ್ಥೂಲ ಕಾಯ ಕೂಡ ಹೆಚ್ಚಾಗುವುದು.

ಶ್ವಾಸಕೋಶದ ಸಮಸ್ಯೆ:
8 ರಿಂದ 9 ಗಂಟೆಗಳ ದಿನನಿತ್ಯ ಫ್ಯಾನ್‌ ಗಾಳಿಯಲ್ಲಿ ಮಲಗಿ ನಿದ್ದೆ ಮಾಡುವುದರಿಂದ ಶ್ವಾಸಕೋಶದ ಸಮಸ್ಯೆಗಳು ಉಂಟಾಗಬಹುದು. ಎದೆಯಲ್ಲಿ ಲೋಳೆಯಂತಹ ಕಫ ಶೇಖರಣೆಯಾಗಿ ಉಸಿರಾಟದ ತೊಂದರೆಯಾಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ ಇದರಿಂದ ರಕ್ತಸಂಚಯದಲ್ಲೂ ಸಮಸ್ಯೆ ಆಗುವ ಅಪಾಯಗಳಿರುತ್ತದೆ. ಇದನ್ನು ತಪ್ಪಿಸಲು ನೀವು ಆಗಾಗ ಎಚ್ಚರಗೊಂಡು ನೀರನ್ನು ಕುಡಿಯಬೇಕು. ಇದರಿಂದ ಉತ್ತಮ ನಿದ್ದೆ ಸಾಧ್ಯವಾಗದು. ಹೀಗಾಗಿ ಆದಷ್ಟು ನೈಸರ್ಗಿಕ ಗಾಳಿಯಲ್ಲೇ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಬೆನ್ನು ನೋವು:
ರಾತ್ರಿಯಿಡೀ ಫ್ಯಾನ್‌ ಕೆಳಗೆ ಮಲಗಿದ್ದರೆ ಬೆಳಗ್ಗೆ ಏಳುವಷ್ಟರಲ್ಲಿ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಫ್ಯಾನ್‌ ಯಾವುದೇ ಏರಿಳಿತವಿಲ್ಲದೆ ಒಂದೇ ರೀತಿಯಲ್ಲಿ ಗಾಳಿ ಸೋಕುತ್ತದೆ. ನಿರಂತರ 8 ರಿಂದ 9 ಗಂಟೆಗಳ ಕಾಲ ಒಂದೇ ತೆರನಾಗಿ ಗಾಳಿ ಬೀಸುತ್ತಿದ್ದರೆ ಸ್ನಾಯು ಸೆಳೆತ ಜಾಸ್ತಿಯಾಗಿ ಬೆನ್ನು ನೋವು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಫ್ಯಾನ್‌ ಅನ್ನು ಅವೈಡ್‌ ಮಾಡಿ ಮಲಗಿ.

ಸ್ನಾಯುಗಳು ಬಿಗಿಗೊಳ್ಳುವುದು :
ರಾತ್ರಿಯಿಡಿ ತಣ್ಣನೆಯ ಗಾಳಿ ಬೀಸುತ್ತಿದ್ದರೆ ಸ್ನಾಯುಗಳಲ್ಲಿ ಕಾಲಕ್ರಮೇಣ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ನಿರಂತರ ಕೃತಕ ತಣ್ಣನೆಯ ಗಾಳಿಗೆ ಒಗ್ಗಿಕೊಳ್ಳುವುದರಿಂದ ಕಾಲು, ಕುತ್ತಿಗೆ, ಬೆನ್ನುಗಳ ಸ್ನಾಯುಗಳು ಬೆಳಗ್ಗೆ ಎನ್ನುವಷ್ಟರಲ್ಲಿ ಬಿಗಿಯಾದ ಅನುಭವವಾಗುತ್ತದೆ. ಇದು ಕಾಲಕ್ರಮೇಣ ದೀರ್ಘಕಾಲದ ನೋವಿಗೆ ಕಾರಣವಾಗುತ್ತದೆ.

ತುಂಬಾ ಸೆಕೆಯಾದಾಗ ಫ್ಯಾನ್‌ ಬಳಸದೇ ಇರಲಿಕ್ಕೆ ಕಷ್ಟ, ಅಂಥ ಸಂದರ್ಭದಲ್ಲಿ ನೀವು ಸೀಲಿಂಗ್‌ ಫ್ಯಾನ್‌ಗಿಂತ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಸುಲಭವಾಗುವ ಫ್ಯಾನ್‌ ಬಳಸುವುದು ಒಳ್ಳೆಯದು. ಅದರಲ್ಲೂ ಫ್ಯಾನ್‌ ಅನ್ನು ಬೆಡ್‌ ನಿಂದ 2-3 ಅಡಿ ಅಂತರಲ್ಲಿ ಇಡುವುದು ಸೂಕ್ತ.

Leave A Reply

Your email address will not be published.