ಕರ್ನಾಟಕ ಹಬ್ಬದ ಆಚರಣೆಯಲ್ಲಿ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ಕೂಡ ಅದರದ್ದೇ ಆದ ಮಹತ್ವವಿದೆ. ಭಾರತದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನ ಹೀಗೆ ನಾನಾ ಜಾತಿಯನ್ನು ಒಳಗೊಂಡಿದ್ದು, ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶ ಸಾರುವ ಮೂಲಕ ತನ್ನತನವನ್ನು ಉಳಿಸಿಕೊಂಡಿದೆ.
ಇತ್ತೀಚೆಗಷ್ಟೇ ದಸರಾ ಹಬ್ಬದ ಕಳೆ ಮುಗಿದು, ದೀಪಾವಳಿಯ ರಂಗು ಮುಗಿದು, ವರ್ಷ ದ ಕೊನೆಗೆ ಕೇವಲ ಎರಡು ತಿಂಗಳುಗಳು ಬಾಕಿ ಉಳಿದಿದೆ. ಅದರಲ್ಲೂ ಕಾರ್ತಿಕ ಮಾಸ ಅದರದ್ದೇ ಆದ ವಿಶೇಷತೆಯನ್ನು ಹೊಂದಿದೆ.
ಶಿವನ ಆರಾಧನೆಗೆ ಮಹತ್ವವಾದ ಕಾಲವಾಗಿದೆ. ದೈವಿಕ ಕಾಲವಾಗಿದ್ದು, ವಿಶೇಷವಾಗಿ ಮಹಿಳೆಯರು ಈ ಸಮಯದಲ್ಲಿ ತುಳಸಿ ಪೂಜೆ, ವ್ರತಾಚರಣೆ ಮಾಡುವ ಮೂಲಕ ಸಂಸ್ಕೃತಿಯ ಜೊತೆಗೆ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳುತ್ತಾರೆ.
ಕಾರ್ತಿಕ ಪೂರ್ಣಿಮಾ ಅದರ ಜೊತೆಗೆ ಏಕಾದಶಿ, ಪ್ರದೋಷ ವ್ರತ , ಸಂಕಷ್ಟಿ, ವಿವಾಹ ಪಂಚಮಿ ಮುಂತಾದ ವಿಶೇಷ ದಿನಗಳನ್ನು ಒಳಗೊಂಡಿದೆ. ಏಕಾದಶಿ, ತುಳಸಿ ವಿವಾಹ, ವೈಕುಂಠ ಚತುದರ್ಶಿಯ ದಿನಾಂಕಗಳು ನವೆಂಬರ್ 1: ಗೋಪಾಷ್ಟಮಿ, ಆದರೆ, ನವೆಂಬರ್ 2: ಅಕ್ಷಯ ನವಮಿ-ಕೂಷ್ಮಂಡ, ನವಮಿ: ಆಮ್ಲ ನವಮಿ ಆಚರಣೆ ಮಾಡಲಾಗುತ್ತದೆ.
ಅಲ್ಲದೆ, ನವೆಂಬರ್ 4: ಪ್ರಬೋಧಿನಿ ಏಕಾದಶಿಯಾದರೆ, ನವೆಂಬರ್ 5: ಪ್ರದೋಷ ವ್ರತ ಬಳಿಕ, ನವೆಂಬರ್ 5: ಪ್ರದೋಷ ವ್ರತ, ತುಳಸಿ ವಿವಾಹ ಮತ್ತು ಕೊನೆಯ ದಿನ ನವೆಂಬರ್ 7: ವೈಕುಂಠ ಚತುದರ್ಶಿ, ಪೂರ್ಣಿಮಾ ವ್ರತ, ದೇವಿ ದೀಪಾವಳಿ ಆಚರಣೆ ಮಾಡಲಾಗುತ್ತದೆ.
ಇದಲ್ಲದೆ, ಕಾರ್ತಿಕ ಪೂರ್ಣಿಮಾ, ಸಂಕಷ್ಠಿ ಚತುರ್ಥಿ ನವೆಂಬರ್ 8ರಂದು ಮಾಡಲಾಗುತ್ತದೆ. ನವೆಂಬರ್ 9: ಮಾರ್ಗಶಿರ ಮಾಸ ಪ್ರಾರಂಭ ಆಗುತ್ತದೆ.(ಉತ್ತರ ಭಾರತದ ಕ್ಯಾಲೆಂಡರ್ ಪ್ರಕಾರ )ನವೆಂಬರ್ 12: ಸಂಕಷ್ಠಿ ಗಣೇಶ ಚತುರ್ಥಿ ಆಚರಣೆ ಯಾದರೆ, ನವೆಂಬರ್ 16: ಕಾಲ ಭೈರವ ಅಷ್ಟಮಿ ಮಾಡಲಾಗುತ್ತದೆ.
ದೈವಿಕ ಕಾರ್ಯಗಳ ಪ್ರಸಿದ್ಧ ಐತಿಹಾಸಿಕ ಕೇರಳದ ಶಬರಿ ಮಲೆ ದೇವಾಲಯದ ಬಾಗಿಲು ನವೆಂಬರ್ 17 ರಂದು ತೆರೆಯಲಾಗುತ್ತದೆ. ಸೋಮ ಪ್ರದೋಷ ವ್ರತ ಹಾಗೂ ವಿವಾಹ ಪಂಚಮಿ ನಡೆಯುವ ದಿನಾಂಕಗಳು ನವೆಂಬರ್ 20: ಉತ್ಪನ್ನ ಏಕಾದಶಿ ವೈಷ್ಣವ ವ್ರತ ನಡೆಸಲಾಗುತ್ತದೆ. ನವೆಂಬರ್ 21: ಸೋಮ ಪ್ರದೋಷ ವ್ರತ
ಅಲ್ಲದೆ,ನವೆಂಬರ್ 23: ಅಮವಾಸ್ಯೆಯಾದರೆ, ನವೆಂಬರ್ 24: ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗೋವಾದಲ್ಲಿ ಮಾರ್ಗಶೀರ್ಷ ಮಾಸ ಪ್ರಾರಂಭ ಆಗುತ್ತದೆ.
ನವೆಂಬರ್ 28: ವಿವಾಹ ಪಂಚಮಿ ಹಾಗೂ ನವೆಂಬರ್ 30: ಮಿತ್ರ ಸಪ್ತಮಿ-ನಂದ ಸಪ್ತಮಿ ಆಚರಣೆ ಮಾಡಲಾಗುತ್ತದೆ.
ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಹೆಚ್ಚು ಹಬ್ಬ ಹರಿದಿನಗಳು ನಡೆಯಲಿದ್ದು, ಜನರು ಭಕ್ತಿಯಿಂದ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ನಡೆಸುವುದು ವಿಶೇಷ.