EPF Interest Rate : EPF ಬಡ್ಡಿದರ ಇಂದು ನಿಮ್ಮ ಖಾತೆಗೆ ಜಮಾ ಸಾಧ್ಯತೆ | ಮೊತ್ತ ಹೀಗೆ ಪರಿಶೀಲಿಸಿ!!!
ಈಗಾಗಲೇ ನೌಕರರು ತಮ್ಮ ಭವಿಷ್ಯ ನಿಧಿ ಸಂಸ್ಥೆಯಿಂದ ಬಡ್ಡಿದರ ದ ನಿರೀಕ್ಷೆಯಲ್ಲಿ ಇರುವ ನೌಕರರಿಗೆ ಬಡ್ಡಿದರ ನೀಡಲು ಸಂಸ್ಥೆ ನಿರ್ಧರಿಸಿದೆ. ನಿಮ್ಮ ಮೊತ್ತವನ್ನು ಪರಿಶೀಲಿಸಿ ಆದಾಯ ತೆರಿಗೆ ಕಡಿತಕ್ಕೆ ಸಾಫ್ಟ್ವೇರ್ ಅಪ್ಗ್ರೇಡೇಶನ್ ಪೂರ್ಣಗೊಂಡಿರುತ್ತದೆ. ಈಗಾಗಲೇ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಯು ಈಗ ಸದಸ್ಯರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಮಾಸಿಕ ವೇತನದ ಆಧಾರದ ಮೇಲೆ, ಉದ್ಯೋಗಿಗಳಿಗೆ ಉದ್ಯೋಗದಾತರು EPF ಯೋಜನೆಗೆ ಮೂಲ ವೇತನ ಮತ್ತು ತುಟ್ಟಿಭತ್ಯೆಯ 12% ರಷ್ಟು ಸಮಾನ ಪ್ರಮಾಣದಲ್ಲಿ ಹಣವನ್ನು ಹಾಕಲಾಗುತ್ತದೆ. ಅದರ ಹೊರತಾಗಿ ನೌಕರರು ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್) ಯೋಜನೆಯ ಮೂಲಕ ಇಪಿಎಫ್ ಯೋಜನೆಗೆ ಹೆಚ್ಚಿನ ಹಣವನ್ನು ನೀಡಬಹುದಾಗಿದೆ.
ಇಪಿಎಫ್ ಮತ್ತು ವಿಪಿಎಫ್ ಎರಡರ ಮೇಲಿನ ಬಡ್ಡಿ ದರವೂ ಒಂದೇ ಆಗಿರುತ್ತದೆ. ಅದರೊಂದಿಗೆ ಉದ್ಯೋಗಿಗಳು ತಮ್ಮ EPF ಮೊತ್ತವನ್ನು ಈ ಕೆಳಗಿನಂತೆ ಪರಿಶೀಲನೆ ನಡೆಸಬಹುದಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ (EPF) ಬ್ಯಾಲೆನ್ಸ್ನ್ನು ಪರಿಶೀಲಿಸುವ ಕ್ರಮಗಳು :
ಮಿಸ್ಡ್ ಕಾಲ್ :
ಉದ್ಯೋಗಿ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-220-1406 ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಅಗತ್ಯವಿರುವ ಮಾಹಿತಿಯನ್ನು ಪಡೆಯಬಹುದಾಗಿದೆ. ಉದ್ಯೋಗಿ ಮಿಸ್ಡ್ ಕಾಲ್ ಮಾಡುವ ಮೊದಲು ಉದ್ಯೋಗಿಯ UAN ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು PAN ಸಂಖ್ಯೆಯೊಂದಿಗೆ ಸೀಡ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ.
Umang ಅಪ್ಲಿಕೇಶನ್ :
• ಉಮಾಂಗ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಆಪ್ನಲ್ಲಿ ವಿವಿಧ ಸರ್ಕಾರಿ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ.
• ಇದರಲ್ಲಿ ಬಳಕೆದಾರರು ತಮ್ಮ ಇಪಿಎಫ್ ಪಾಸ್ಬುಕ್ ಅನ್ನು ನೋಡಲು, ಕ್ಲೈಮ್ ಮಾಡಲು, ಅವರ ಕ್ಲೈಮ್ಗಳನ್ನು ಟ್ರ್ಯಾಕ್ ಮಾಡಲು ಕೂಡ ಸಹಾಯಕಾರಿ ಆಗಿರುತ್ತದೆ.
• ಉಮಾಂಗ್ ಅಪ್ಲಿಕೇಶನ್ ಮೂಲಕ ಸೇವೆಗಳನ್ನು ಪಡೆಯಲು ಉದ್ದೇಶಿಸಿರುವವರು ಮೊದಲು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
• ನಂತರ ನಿಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಂದು-ಬಾರಿ ನೋಂದಣಿಯನ್ನು ಪೂರ್ಣಗೊಳಿಸುವ ಮೂಲಕ ಪ್ರಾರಂಭಿಸಬಹುದಾಗಿದೆ.
EPFO ಪೋರ್ಟಲ್ :
•EPFO ವೆಬ್ಸೈಟ್ನಲ್ಲಿ, ಉದ್ಯೋಗಿಗಳಿಗಾಗಿ ಆಯಾ ಪ್ರದೇಶದ ಅಡಿಯಲ್ಲಿ ‘ಸದಸ್ಯ ಪಾಸ್ಬುಕ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
•ನಂತರ ಉದ್ಯೋಗಿ ತಮ್ಮ UAN ಮತ್ತು ಪಾಸ್ವರ್ಡ್ ಬಳಸಿ ಲಾಗ್ ಇನ್ ಮಾಡುವ ಮೂಲಕ PF ಪಾಸ್ಬುಕ್ನೊಂದಿಗೆ ನೋಡಬಹುದಾಗಿದೆ.
• ಪ್ರತಿಯೊಬ್ಬ ಉದ್ಯೋಗಿಯು ಉದ್ಯೋಗದಾತನಿಂದ ವೃತ್ತಿಯನ್ನು ಬಿಟ್ಟ ನಂತರ ಆರಂಭಿಕ ಮತ್ತು ಮುಕ್ತಾಯದ ಬಾಕಿಗಳನ್ನು ಇದರಲ್ಲಿ ಸಂಪೂರ್ಣವಾಗಿ ನೋಡಬಹುದಾಗಿದೆ.
• ಒಟ್ಟು ಗಳಿಸಿದ PF ಮೊತ್ತ ಹಾಗೂ ಹಿಂದಿನ ಯಾವುದೇ PF ವರ್ಗಾವಣೆಗಳನ್ನು ಇದರಲ್ಲಿ ಕಾಣಬಹುದಾಗಿದೆ.
SMS :
• EPF ಬ್ಯಾಲೆನ್ಸ್ ಪಡೆಯಲು ಉದ್ಯೋಗಿಯು ತಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಮೊಬೈಲ್ ಸಂಖ್ಯೆ 7738299899 ಗೆ SMS ಕಳುಹಿಸಬೇಕಾಗಿದೆ.
• EPFOHO UAN ENG ಯುನಿವರ್ಸಲ್ ಖಾತೆ ಸಂಖ್ಯೆ ಮತ್ತು ಇಂಗ್ಲಿಷ್ ಭಾಷೆಯಾಗಿರುವ ಸಂದೇಶವನ್ನು ಪಡೆಯಬಹುದಾಗಿದೆ.
• ಉದ್ಯೋಗಿಯು ಬೇರೆ ಯಾವುದೇ ಭಾಷೆಯಲ್ಲಿ ಸಂವಹನವನ್ನು ಸ್ವೀಕರಿಸಲು ಬಯಸಿದರೆ, ಉದ್ಯೋಗಿಯ ಆದ್ಯತೆಯ ಭಾಷೆಯನ್ನು ಬಳಸಿಕೊಂಡು ಸಹ ಮಾಹಿತಿಯನ್ನು ಪಡೆಯಬಹುದಾಗಿದೆ.
ಈ ರೀತಿಯಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಬಡ್ಡಿದರ ಪರಿಶೀಲನೆ ಮಾಡಬಹುದಾಗಿದೆ.