ಆಶ್ಚರ್ಯ : ತನಗೆ ಹಾವು ಕಚ್ಚಿತೆಂದು ಸಿಟ್ಟಿನಿಂದ ಹಾವಿಗೇ ವಾಪಸ್ ಕಚ್ಚಿದ ಬಾಲಕ | ಅನಂತರ ನಡೆದದ್ದು ಪವಾಡ!!!
ಸಾಮಾನ್ಯವಾಗಿ ಹಾವು ಅಂದ್ರೆ ಎಲ್ಲರಿಗೂ ಭಯನೇ. ಇನ್ನೂ ಹಾವು ಕಚ್ಚಿದರೆ ಕೇಳಬೇಕಿಲ್ಲ ಹೆದರಿ ಬೇಗನೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ತನಗೆ ಹಾವು ಕಚ್ಚಿತೆಂದು ತಿರುಗಿ ಹಾವಿಗೆ ಕಚ್ಚಿರುವ ಭಯಾನಕವಾದ ಘಟನೆಯೊಂದು ಚತ್ತಿಸ್ ಗಡದ ಜಶ್‌ಪುರದಲ್ಲಿ ನಡೆದಿದೆ.
ಚತ್ತಿಸ್ ಗಡದ ಜಶ್‌ಪುರದಲ್ಲಿ 12 ವರ್ಷದ ಬಾಲಕನಿಗೆ ನಾಗರ ಹಾವೊಂದು ಕಚ್ಚಿದೆ. ಇದರಿಂದ ತೀವ್ರ ಕೋಪಗೊಂಡ ಬಾಲಕ ಹೆದರದೆ ತನಗೆ ಕಚ್ಚಿದ ಹಾವಿಗೆ ತಿರುಗಿ ಕಚ್ಚಿದ್ದಾನೆ. ವಿಷಯ ತಿಳಿದ ಮನೆಯವರು ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಘಟನೆ ಹೇಗಾಯಿತು ಅಂದ್ರೆ, ದೀಪಕ್ ಎಂಬ ಯುವಕ ತನ್ನ ಸಹೋದರಿಯ ಮನೆಗೆ ಹೋಗಿದ್ದ. ಅಂದು ತನ್ನ ಸಹೋದರಿ ನೀರು ತರಲು ಹೋದಾಗ ದೀಪಕ್ ಮನೆಯ ಹೊರಗೆ ಆಟವಾಡುತ್ತಿದ್ದ. ಆಟವಾಡುತ್ತಾ ಅಲ್ಲೇ ಇದ್ದ ಪೊದೆಯ ಬಳಿ ಸಾಗಿದ್ದಾನೆ. ಆ ಸಮಯದಲ್ಲಿ ಪೊದೆಯಲ್ಲಿದ್ದ ಹಾವೊಂದು ದೀಪಕ್ ಕೈಗೆ ಕಚ್ಚಿದೆ. ಇದರಿಂದ ತೀವ್ರ ಕೋಪಗೊಂಡ ದೀಪಕ್ ಹಾವನ್ನು ಕೈಯಿಂದ ಹಿಡಿದು ಹಲ್ಲಿನಿಂದ ಕಚ್ಚಿ ಅಲ್ಲೆ ಬಿಸಾಡಿದ್ದಾನೆ.
ನಂತರ ದೀಪಕ್ ಮನೆಗೆ ಬಂದು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಇದರಿಂದ ಭಯಗೊಂಡ ಮನೆಯವರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಶ್ಚರ್ಯ ಎನ್ನುವ ಹಾಗೆ, ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಏನೂ ತೊಂದರೆ ಇಲ್ಲ ಬಾಲಕ ತುಂಬಾ ಆರೋಗ್ಯವಾಗಿದ್ದಾನೆ, ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಂತರ ನಿರಾಳಗೊಂಡು ಮನೆಗೆ ಬಂದಾಗಲೇ ಗೊತ್ತಾಗಿದ್ದು ಬಾಲಕ ಕಚ್ಚಿ ಬಿಸಾಕಿದ್ದ ಹಾವು ಸಾವನ್ನಪ್ಪಿದೆ ಎಂದು.
ಮನುಷ್ಯರಿಗೆ ವಿಷದ ಹಾವು ಕಚ್ಚಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಮೂಢನಂಬಿಕೆ ಜಶ್ಪುರ್ ಜಿಲ್ಲೆಯ ಜನರಲ್ಲಿದೆ. ಆ ಮೂಢನಂಬಿಕೆಯಿಂದಲೇ ಬಾಲಕ ಹಾವಿಗೆ ಕಚ್ಚಿದ್ದಾನೆ. ಬಾಲಕನ ಅದೃಷ್ಟ ಚೆನ್ನಾಗಿತ್ತು ಎಂದೇ ಹೇಳಬಹುದು ಹಾಗಾಗಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಬಾಲಕ ಬದುಕುಳಿದಿದ್ದಾನೆ. ಈ ಘಟನೆ ವಿಸ್ಮಯವೆನಿಸಿದರೂ ನಿಜವೇ. ಆದರೆ ದುರಾದೃಷ್ಟವಶಾತ್ ಹಾವು ಮಾತ್ರ ಬಾಲಕ ಕಚ್ಚಿದ್ದಕ್ಕೆ ಸಾವನ್ನಪಿದೆ.