Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು ಅಷ್ಟಿಷ್ಟು ದುಡ್ಡಲ್ಲ!!!

ಈಗಂತೂ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಬಿಟ್ಟು ಕಸ-ಕಡ್ಡಿ, ಕಲ್ಲು ಇಂತವೆ ಬರುತಿದೆ. ‘ಮೋಸ ಹೋಗುವ ಜನರಿರುವವರೆಗೂ, ಮೋಸ ಮಾಡುವ ಜನರು ಇದ್ದೇ ಇರುತ್ತಾರೆ’ ಈ ಮಾತಂತೂ ನಿಜ ಕಣ್ರಿ. ಆನ್ ಲೈನ್ ನಲ್ಲಂತೂ ಮೋಸ ಹೋಗೋ ಘಟನೆ ದಿನಕ್ಕೊಂದು ನಡೀತಾ ಇದೆ. ಇಲ್ಲೊಬಂದು ಅದೇ ಕಥೆ. ಬಿಯರ್ ಆರ್ಡರ್ ಮಾಡಿ 45,000 ಕಳ್ಕೊಂಡಿದ್ದಾನೆ. ಹೇಗೆ ಅಂತೀರಾ ನೀವೆ ನೋಡಿ.

ಗುರುಗ್ರಾಮದಿಂದ ವ್ಯಕ್ತಿಯೊಬ್ಬನು ಮುಂಬೈನ ಕೊಲಾಬಾಕ್ಕೆ ಬಂದಿದ್ದ. ಈ ವೇಳೆಯಲ್ಲಿ ಆತನಿಗೆ ಬಿಯರ್ ಕುಡಿಯುವ ಆಸೆ ಆಯ್ತು. ಇಂಟರ್‌ನೆಟ್‍ನಲ್ಲಿ ಸ್ಥಳೀಯ ವೈನ್ ಶಾಪ್‍ಗಳಿಗಾಗಿ ಹುಡುಕಾಡಿದ. ಆಗ ಸಮೀಪದಲ್ಲೇ ಇರುವ ಅಂಗಡಿಯೊಂದರ ಮೊಬೈಲ್ ನಂಬರ್ ಸಿಕ್ಕಿತ್ತು. ಬಳಿಕ ವ್ಯಕ್ತಿ ಆ ಸಂಖ್ಯೆಗೆ ಕರೆ ಮಾಡಿದ್ದಾನೆ. ಅಂಗಡಿಯಾತನು ಕರೆ ಸ್ವೀಕರಿಸಿ, ವಾಟ್ಸಪ್ ನಲ್ಲಿ ಕರೆ ಮಾಡೆಂದು ಹೇಳಿದ್ದಾನೆ.

ಅದರಂತೆ ವ್ಯಕ್ತಿಯು ಕರೆ ಮಾಡಿ ಒಂದು ಬಿಯರ್ ಬೇಕೆಂದು ಆರ್ಡರ್ ಕೊಟ್ಟಿದ್ದಾನೆ. ಆಗ ಅಂಗಡಿಯಾತನು ನಮ್ಮಲ್ಲಿ ಎರಡು ಬಿಯರ್ ತೆಗೊಂಡ್ರೆ ಮಾತ್ರ ಆರ್ಡರ್ ಬುಕ್ ಮಾಡುವುದಾಗಿ ತಿಳಿಸಿದಾಗ, ವ್ಯಕ್ತಿಯು ಒಪ್ಪಿಕೊಂಡಿದ್ದಾನೆ. ಇದನ್ನೇ ಕಾದು ಕುಳಿತಿದ್ದ ಕಳ್ಳನು ತಕ್ಷಣ ಕ್ಯೂಆರ್ ಕೋಡ್ ಕಳಿಸಿ ಹಣ ಪಾವತಿ ಮಾಡುವಂತೆ ಹೇಳಿದ್ದಾನೆ. ಅಷ್ಟೇ ಅಲ್ಲದೇ ಡೆಲಿವರಿ ಶುಲ್ಕಕ್ಕಾಗಿ 30ರೂ.ವನ್ನು ಹೆಚ್ಚುವರಿಯಾಗಿ ಪಡೆದಿದ್ದಾನೆ.

ಏನೂ ಅರಿಯದ ವ್ಯಕ್ತಿಯು ಅಂಗಡಿಯಾತನಿಗೆ ಹಣ ಪಾವತಿ ಮಾಡಿದ. ಆದರೆ ಅಂಗಡಿಯವನು ಹಣ ಇನ್ನೂ ಬಂದಿಲ್ಲಾ ಮರುಪಾವತಿ ಮಾಡುವಂತೆ ತಿಳಿಸಿದ. ಇದೇ ರೀತಿ ಹಣ ಬಂದಿಲ್ಲ ಎಂದು ಒಂದಲ್ಲಾ ಎರಡಲ್ಲಾ, ಎಂಟು ಬಾರಿ ಹಣ ಪಾವತಿ ಮಾಡಿಸಿಕೊಂಡಿದ್ದಾನೆ. ಈ ವೇಳೆ ವ್ಯಕ್ತಿಯು 44,782 ರೂ. ಹಣ ಕಳೆದುಕೊಂಡಿದ್ದಾನೆ.

ಇಷ್ಟೆಲ್ಲಾ ಆದ ಮೇಲೆ ಎಚ್ಚರಗೊಂಡ ವ್ಯಕ್ತಿಯು ಅಂಗಡಿಯವನಿಗೆ ಕರೆ ಮಾಡಲು ಪ್ರಯತ್ನಿಸಿದ. ಆದರೆ ಸಮಯ ಮೀರಿಹೋಗಿತ್ತು. ತಾನು ಮೋಸ ಹೋಗಿದ್ದೇನೆಂದು ಅರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಅವರು ಸೈಬರ್ ಪೊಲೀಸರ ಸಹಾಯವನ್ನು ಪಡೆದಿದ್ದಾರೆ.

Leave A Reply

Your email address will not be published.