Ombudsman Scheme : ಬ್ಯಾಂಕ್ ಸಿಬ್ಬಂದಿ ವರ್ತನೆ ಬಗ್ಗೆ ಏನಾದರೂ ಅಸಮಧಾನವಿದೆಯೇ ? RBI ಗೆ ದೂರು ಸಲ್ಲಿಸಲು ಇಲ್ಲಿದೆ ಸುಲಭ ವಿಧಾನ!!!

ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಆದರೆ ನಿಮ್ಮ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆಯಾಗಲೀ ಅಥವಾ ಬ್ಯಾಂಕ್ ಸಿಬ್ಬಂದಿಯ ಬಗ್ಗೆಯಾಗಲೀ ನಿಮಗೆ ಅಸಮಾಧಾನ ಇದ್ದರೆ ನೇರವಾಗಿ ಆರ್‌ಬಿಐನಲ್ಲಿ ದೂರು ಸಲ್ಲಿಸುವ ಅವಕಾಶ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿರುವ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ ಯೋಜನೆಯನ್ನು ಇದಕ್ಕಾಗಿಯೇ ನೇಮಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ನಿಮ್ಮೊಂದಿಗೆ ಅನುಚಿತವಾಗಿ ವರ್ತಸಿದರೆ, ಅಥವಾ ನಿಮ್ಮ ಸಮಸ್ಯೆಯನ್ನು ಸರಿಯಾಗಿ ಆಲಿಸದಿದ್ದರೆ, ಅಥವಾ ಬ್ಯಾಂಕ್‌ನಿಂದ ನಿಮ್ಮ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯದಿದ್ದರೆ, ಹೀಗೆ ಯಾವುದೇ ರೀತಿಯ ಅಸಮಾಧಾನಗಳು ಬ್ಯಾಂಕ್ ವಿಚಾರದಲ್ಲಿ ನಿಮಗಿದ್ದರೆ ಆರ್‌ಬಿಐಗೆ ನಿಯಮ ಅನುಸಾರವಾಗಿ ದೂರು ಕೊಡಬಹುದಾಗಿದೆ .

ಬ್ಯಾಂಕ್ ಮಾತ್ರವಲ್ಲ, ಆರ್‌ಬಿಐ ನಿಯಂತ್ರಣಕ್ಕೆ ಒಳಪಡುವ ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ), ಎಟಿಎಂ ತೊಂದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ದೋಷ ಏನೇ ಇದ್ದರೂ ಓಂಬುಡಸ್‌ಮನ್ ಸ್ಕೀಮ್ ಅಡಿಯಲ್ಲಿ ದೂರು ದಾಖಲಿಸಬಹುದು. ಈ ವ್ಯವಸ್ಥೆಯಲ್ಲಿ ನೀವು ದೂರಿನ ಜೊತೆ ಸಲಹೆಗಳನ್ನೂ ಕೊಡುವ ಅವಕಾಶವನ್ನು ಸಹ ನೀಡಲಾಗುತ್ತದೆ.

ಕಂಪನಿ ಬದಲಿಸಿದಾಗ ಆನ್‌ನೈನಲ್ಲಿ ಪಿಎಫ್ ಖಾತೆ ವರ್ಗಾಯಿಸುವ ಕ್ರಮಗಳು :
ನೀವು ಆರ್‌ಬಿಐನ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ ಬಳಿ ಏಕಾಏಕಿ ದೂರು ನೀಡಲು ಬರುವುದಿಲ್ಲ. ಅದಕ್ಕೆ ಕೆಲ ನಿಯಮಗಳಿವೆ. ನಿಮಗೆ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ ಬಗ್ಗೆ ಅಸಮಾಧಾನ ಇದ್ದರೆ ಮೊದಲು ಆ ಬ್ಯಾಂಕ್‌ನಲ್ಲೇ ನೀವು ದೂರು ಸಲ್ಲಿಸಬೇಕು. ನಿಮ್ಮ ದೂರಿಗೆ 30 ದಿನದೊಳಗೆ ಉತ್ತರ ನೀಡದಿದ್ದರೆ ಅಥವಾ ನಿಮ್ಮ ದೂರನ್ನು ಆ ಬ್ಯಾಂಕ್ ತಿರಸ್ಕರಿಸಿದರೆ ಆಗ ಮಾತ್ರ ನೀವು ಆರ್‌ಬಿಐ ಮೆಟ್ಟಿಲು ಹತ್ತಬಹುದು.

ದೂರು ಸಲ್ಲಿಸುವ ವಿಧಾನಗಳು :
• ಮೇಲೆ ತಿಳಿಸಿದ ರೀತಿ ನೀವು ಬ್ಯಾಂಕ್‌ನಲ್ಲಿ ನೀಡಿದ ದೂರು ಪ್ರಯೋಜನ ಆಗದೆ ಇದ್ದಲ್ಲಿ, ಆರ್‌ಬಿಐನ ಈ ಲಿಂಕ್‌ಗೆ ಹೋಗಿ ಆನ್‌ಲೈನ್ ಮೂಲಕ ಕಂಪ್ಲೇಂಟ್ ನೊಂದಾಯಿಸಬಹುದು. ಈ ವೆಬ್ ಲಿಂಕ್‌ನಲ್ಲಿ ದೂರು ನೀಡಲು ಫೈಲ್ ಎ ಕಂಪ್ಲೇಂಟ್ ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ದೂರು ನೊಂದಾಯಿಸಲು ಪ್ರತ್ಯೇಕ ಪುಟ ತೆರೆಯುತ್ತದೆ. ಎಲ್ಲಾ ವಿವರ ತುಂಬಿಸಿ ಸಬ್ಮಿಟ್ ಕ್ಲಿಕ್ ಮಾಡಿರಿ.

• ಆರ್‌ಬಿಐನಿಂದ ಸೆಂಟ್ರಲೈಸ್ಡ್ ರೆಸಿಪ್ಟ್ ಅಂಡ್ ಪ್ರೋಸಸಿಂಗ್ ಸೆಂಟರ್ ವ್ಯವಸ್ಥೆ ಇರುತ್ತದೆ. ಇಲ್ಲಿಗೆ ನೀವು ನೇರವಾಗಿ ಇಮೇಲ್ ಮೂಲಕ ಸಂಪರ್ಕಿಸಬಹುದು. ಅದರ ಇಮೇಲ್ ಐಡಿ ಇಲ್ಲಿದೆ. ನಿಮ್ಮ ದೂರಿನ ಜೊತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಮೇಲ್‌ನಲ್ಲಿಯೇ ಅಟ್ಯಾಚ್ ಮಾಡಿ ಕಳುಹಿಸಬಹುದು.

• ಮೂರನೇ ವಿಧಾನದಲ್ಲಿ ನೀವು ಪತ್ರದ ಮುಖೇನ ದೂರು ನೊಂದಾಯಿಸಲು ಸಾಧ್ಯವಿದೆ. ಚಂಡೀಗಡದಲ್ಲಿರುವ ಆರ್‌ಬಿಐ ಕಚೇರಿಯ ವಿಳಾಸಕ್ಕೆ ನೀವು ಪತ್ರ ತಲುಪಿಸಬಹುದು. ನೀವೇ ಖುದ್ದಾಗಿ ಹೋಗಿ ಬೇಕಾದರೆ ದೂರು ಪತ್ರ ಕೊಟ್ಟು ಬರಬಹುದಾಗಿದೆ.

Leave A Reply

Your email address will not be published.