ಸೂರ್ಯನೂ ನಗ್ತಾನೆ!ನಾಸಾದ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಅದ್ಭುತ ದೃಶ್ಯ

ಜನರು ನಗೋದು ಸಾಮಾನ್ಯವಾದ ವಿಷಯ ಆದರೆ ಸೂರ್ಯ ಕೂಡ ನಗ್ತಾನೆ ಅಂತಾ ಕೇಳಿದ್ರೆ ಆಶ್ಚರ್ಯ ಆಗ್ತದೆ ಅಲ್ವಾ! ಕಳೆದ ಬಾರಿ ಸೂರ್ಯನನ್ನು ಸ್ಪರ್ಶಿಸಿದ ನಾಸಾ ಈ ಬಾರಿ ಸೂರ್ಯನ ನಗುವಿನ ಅದ್ಭುತವಾದ ದೃಶ್ಯವನ್ನು ಸೆರೆ ಹಿಡಿದಿದೆ. ಅರೆ! ಸೂರ್ಯನು ನಗ್ತಾನ, ಕೇಳಲು ಆಶ್ಚರ್ಯವೆನಿಸಿದರೂ ಇದು ಸತ್ಯ. ಹಾಗಾದರೆ ಸೂರ್ಯ ನಕ್ಕಾಗ ಹೇಗೆ ಕಂಡಿರಬಹುದು ಎಂದು ನೋಡೋಣ.

ನಾಸಾ ಬಾಹ್ಯಾಕಾಶ ಅನ್ವೇಷಣೆ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವುದು. ನಾಸಾ, ಇಸ್ರೋ ಬಾಹ್ಯಾಕಾಶ ಸಂಸ್ಥೆಗಳು ಆಗಾಗ ಖಗೋಳ ವಿಸ್ಮಯದ ಹಲವಾರು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತದೆ. ಸೂರ್ಯಗ್ರಹಣ ಚಂದ್ರಗ್ರಹಣ, ಮಂಗಳನ ಅಂಗಳದ ಸಾಕಷ್ಟು ಫೋಟೋಗಳನ್ನು ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಬಿಡುಗಡೆ ಮಾಡಿದೆ. ಅದೇ ರೀತಿ ಈ ಬಾರಿ ನಾಸಾ ಬಿಡುಗಡೆ ಮಾಡಿರುವ ಫೋಟೋ ಎಲ್ಲರಲ್ಲೂ ಅಚ್ಚರಿಯ ಜೊತೆಗೆ ಕುತೂಹಲ ಮೂಡಿಸಿದೆ.

ನಾಸಾದ ಕ್ಯಾಮೆರಾ ಕಣ್ಣಿನಲ್ಲಿ ಸೂರ್ಯನ ನಗು ಮುಖ ಸೆರೆಯಾಗಿದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಫೋಟೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸೂರ್ಯ ನಗುವಂತೆ ಗೋಚರಿಸುತ್ತಿದೆ. ಸೂರ್ಯ ಭೂಮಿಯಲ್ಲಿರುವ ನಮ್ಮನ್ನು ನೋಡಿ ನಗುತ್ತಾನೆ ಎಂಬ ಇಂಗ್ಲಿಷ್ ನುಡಿಗಟ್ಟನ್ನು ನಿಜ ಮಾಡುವಂತಿದೆ ಈ ಫೋಟೋ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ನೇರಳಾತೀತ ಬೆಳಕಿನಲ್ಲಿ ನೋಡಿದರೆ, ಸೂರ್ಯನ ಮೇಲಿನ ಈ ಡಾರ್ಕ್ ಪ್ಯಾಚ್‌ಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ ಮತ್ತು ಅವುಗಳ ವೇಗದ ಸೌರ ಮಾರುತವು ಬಾಹ್ಯಾಕಾಶಕ್ಕೆ ಚಿಮ್ಮುವ ಪ್ರದೇಶಗಳಾಗಿವೆ ಎಂದು ನಾಸಾ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಬರೆದುಕೊಂಡಿದೆ.

Leave A Reply

Your email address will not be published.