Nokia G60 5G : ಮತ್ತೆ ತನ್ನ ಹವಾ ಎಬ್ಬಿಸಲು ಬರುತ್ತಿದೆ ನೊಕಿಯಾ | 5G ಫೋನ್ ಬಿಡುಗಡೆಗೆ ತಯಾರಿ ಶುರು!!!

ಇವತ್ತಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ ಬೇಕೇ ಬೇಕು. ಮೊದಲೆಲ್ಲ ಮೊಬೈಲ್ ಅಂದ್ರೆ ಅದು ನೋಕಿಯಾ(Nokia) , ಭಾರತದಲ್ಲಿಯೇ ಹೆಸರುವಾಸಿಯಾದಂತಹ ಮೊಬೈಲ್. ಆದರೆ ಇತ್ತೀಚೆಗೆ Xiaomi, ಸ್ಯಾಮ್​ಸಂಗ್, ರಿಯಲ್ ಮಿ, ವಿವೋ ಬ್ರ್ಯಾಂಡ್​ಗಳೆಲ್ಲ ಬಂದ ಮೇಲೆ ನೋಕಿಯಾ ಕಂಪನಿಯ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಉತ್ತಮ ಮಟ್ಟದ ಯಶಸ್ಸು ಕಾಣುತ್ತಿಲ್ಲ.

ಆದರೆ ಇದೀಗ ತನ್ನ ನೆಲೆಯನ್ನು ಭದ್ರಪಡಿಸಲು ನೋಕಿಯಾ ಮತ್ತೆ ಹೊಸತಾಗಿ ರೂಪುಗೊಳ್ಳುತ್ತಿದೆ. ದೇಶದಾದ್ಯಂತ 5G ಯುಗ ಪ್ರಾರಂಭವಾಗುತ್ತಿರುವುದು ತಿಳಿದಿರುವ ವಿಷಯವೇ .

ಕಳೆದ ತಿಂಗಳು ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಾಯಿತು. ಈಗಾಗಲೇ ಕೆಲವು ಮೆಟ್ರೊ ನಗರಗಳಲ್ಲಿ ಜಿಯೋ, ಏರ್ಟೆಲ್ 5ಜಿ ಸೇವೆ ಕೂಡ ಆರಂಭವಾಗಿದೆ. ಇದೀಗ ನೋಕಿಯಾ ಕಂಪನಿ ಕೂಡ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌, Nokia G60 5G ಬಿಡುಗಡೆ ಮಾಡಲು ಸಜ್ಜಾಗಿದೆ.

ಇನ್ನು ಈ ನೋಕಿಯಾ G60 5G ಸ್ಮಾರ್ಟ್‌ಫೋನ್‌ ಸಾಕಷ್ಟು ಫೀಚರ್ಸ್ ಗಳನ್ನೊಳಗೊಂಡಿದೆ. ಉತ್ತಮವಾದ 695 SoC ಪ್ರೊಸೆಸರ್‌ ವೇಗವನ್ನು ಹೊಂದಿರುವ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹಾಗೂ ಡಿಸ್ ಪ್ಲೇ ಕೂಡ ವಿಭಿನ್ನವಾಗಿದ್ದು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದಿರಲಿದೆ.

ಹಾಗೂ ನೋಕಿಯಾ G60 5G, 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​ನಿಂದ ಕೂಡಿರಲಿದೆ.

ಜೊತೆಗೆ ಆಂಡ್ರಾಯ್ಡ್‌ 12 OS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3 ವರ್ಷಗಳ ಆಂಡ್ರಾಯ್ಡ್‌ ಒಎಸ್‌ ಅಪ್‌ಗ್ರೇಡ್‌ ಮತ್ತು ಮಾಸಿಕ ಸೆಕ್ಯುರ್‌ ಅಪ್ಡೇಟ್‌ ನೀಡಲಿದೆ.

ಅಷ್ಟೇ ಅಲ್ಲದೆ ನೋಕಿಯಾ G60 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಹೊಂದಿದೆ .

ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಹೊಂದಿರುತ್ತದೆ. ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.