Amazon: ವಾರೆವ್ಹಾ ಸೂಪರ್ ಅಮೇಜಿಂಗ್ ಫೋನ್ | 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 10,499 ರೂ. ಗೆ ಮಾರಾಟ!!!

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ.

 

ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ.

ಹೌದು ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಅನೇಕ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ಗೆ ಮಾರಾಟ ಆಗುತ್ತಿದೆ. ಇದರಲ್ಲಿ ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ ಎಮ್​13 (Samsung Galaxy M13) ಸ್ಮಾರ್ಟ್​​ಫೋನ್ ಕೂಡ ಇದೆ.

ಇದು 4G ಮತ್ತು 5G ಎರಡು ಆವೃತ್ತಿಯಲ್ಲಿ ಕಳೆದ ಜುಲೈನಲ್ಲಿ ಬಿಡುಗಡೆ ಆಗಿತ್ತು . ಇದರಲ್ಲಿ ಗ್ಯಾಲಕ್ಸಿ M13 4G (Galaxy M13 4G) ಫೋನ್ ಭರ್ಜರಿ ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ. 4ಜಿ ಆವೃತ್ತಿಯ ಫೋನ್​ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಆಕರ್ಷಕ ಕ್ಯಾಮೆರಾ ಕೂಡ ಇದೆ ಎಂಬ ಮಾಹಿತಿ ತಿಳಿಸಲಾಗಿದೆ.

ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ.

ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಎಕ್ಸಿನೋಸ್ 850 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಒನ್​ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಗ್ಯಾಲಕ್ಸಿ M13 4G ಸ್ಮಾರ್ಟ್​​ಫೋನ್ ಒಟ್ಟು ಎರಡು ಮಾದರಿಯಲ್ಲಿ ರಿಲೀಸ್ ಆಗಿತ್ತು. ಇದರ 4GB + 64GB ಸ್ಟೋರೆಜ್ ಮಾದರಿಗೆ 14,999 ರೂ. ಇತ್ತು. ಆದರೀಗ ಅಮೆಜಾನ್​ನಲ್ಲಿ ಈ ಫೋನ್ ಕೇವಲ 10,499 ರೂ. ಗೆ ಸೇಲ್ ಕಾಣುತ್ತಿದೆ. ಜೊತೆಗೆ 9,600 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ.

ಅದಲ್ಲದೆ ಟ್ರಿಪಲ್‌ ಲೇಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್ ಆಫ್ ವ್ಯೂ ನೀಡಲಿದೆ.

ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಇನ್ನು ಗ್ಯಾಲಕ್ಸಿ M13 5G ಸ್ಮಾರ್ಟ್​​ಫೋನ್ ಕೂಡ ಬಂಪರ್ ಆಫರ್​ನಲ್ಲಿ ಕಾಣಿಸಿಕೊಂಡಿದೆ. ಇದರ 4GB + 64GB ಸ್ಟೋರೆಜ್ ಮಾದರಿಗೆ 16,999 ರೂ. ಇದೆ. ಆದರೀಗ ಡಿಸ್ಕೌಂಟ್​ನಲ್ಲಿ ಇದನ್ನು ಕೇವಲ 13,999 ರೂ. ಗೆ ನಿಮ್ಮದಾಗಿಸಬಹುದು.

ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ.

ಅಂತೆಯೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.

Leave A Reply

Your email address will not be published.