‘ ಸ್ವಂತ ನೀರು ತಂದು ಸ್ನಾನ ಮಾಡ್ಬೇಕು; ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಬಂದು ಕೂರಬಾರದು – ಸಿ ಸಿ ಪಾಟೀಲ್ | SC ST ಮೀಸಲಾತಿಯ ಲಾಭ ಹೊಡೆಯಲು ಹೊರಟ ಪಕ್ಷಗಳಿಗೆ ಗೇಲಿ !!

ಸ್ವಂತ ನೀರು ತಂದು ಜಳಕ ಹೊಡ್ಕೊಬೇಕು, ಹೊರ್ತು ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂತು ಸ್ನಾನ ಮಾಡಬಾರದು ಎಂದು ಸಚಿವ ಸಿ.ಸಿ.ಪಾಟೀಲ್ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಸಿಡಿದು ಬಿದ್ದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ಜಾರಿಗೆ ತಂದ ಎಸ್ ಸಿ ಎಸ್ ಟಿ ಮೀಸಲಾತಿಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿವೆ ಎಂದು ಸಿಸಿ ಪಾಟೀಲ್ ಅವರು ಎರಡು ಪಕ್ಷಗಳ ಮೇಲೆ ಕೆಂಡ ಕಾರಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಎಸ್ಸಿ-ಎಸ್ಟಿ ಮೀಸಲಾತಿ ಮಾಡಿದ್ದು ಬಿಜೆಪಿ ಸರ್ಕಾರ. ಮೀಸಲಾತಿ ಮಾಡಿದ್ದು ಬಿಎಸ್‌ವೈ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶ್ರೀರಾಮುಲು ಹಾಗೂ ಇತರ ಸಚಿವ ಸಂಪುಟದ ಎಲ್ಲ ಸದಸ್ಯರು. ಆದರೀಗ ಮೀಸಲಾತಿ ಕೀರ್ತಿಗಾಗಿ ಕಾಂಗ್ರೆಸ್
ಜೆಡಿಎಸ್ ಗುದ್ದಾಡುತ್ತಿವೆ. ನಿಮಗೆ ಕೀರ್ತಿ ಬೇಕಾದ್ರೆ ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಆ ನಿರ್ಧಾರ ತೆಗೆದುಕೊಳ್ಳಲಿಲ್ಲ? ನಾವು ನಿರ್ಧಾರ ತೆಗೆದುಕೊಂಡಾಗ ಅದರ ಲಾಭ ನೀವು ಪಡಿಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Ad Widget

ಸಚಿವ ಸಿ.ಸಿ.ಪಾಟೀಲ್ ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಮೀಸಲಾತಿ ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಎಸ್ಸಿ-ಎಸ್ಟಿ ಸಮುದಾಯದ ಜನ ಮುಗ್ಧರೇ ಇರಬಹುದು. ಆದರೆ ಅವರು ಹುಚ್ಚರು, ಬುದ್ಧಿಗೇಡಿಗಳಲ್ಲ ಎಂಬುದು ಜ್ಞಾಪಕವಿರಲಿ. ಹಿಂದುಳಿದ ಜನರನ್ನು ತಮ್ಮ ಮತ ಬ್ಯಾಂಕ್ ಮಾಡಿಕೊಂಡು ಆಸೆ ಆಮಿಷ ತೋರಿಸುತ್ತಾ ಚುನಾವಣೆಯಲ್ಲಿ ಮತ ಹಾಕಿಸಿಕೊಂಡರು. ಈ ಸಮುದಾಯಗಳಿಗೆ ಯಾವೊಂದು ಕೆಲಸವನ್ನೂ ಅವರು ಮಾಡಿಕೊಡಲಿಲ್ಲ ಎಂJದು ವಾಗ್ದಾಳಿ ನಡೆಸಿದ್ದಾರೆ.

ಪೂರ್ವಭಾವಿ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸೇರಿದಂತೆ ಬಿಜೆಪಿಯ ಹಲವು ಹಿರಿ ಕಿರಿಯ.ಮುಖಂಡರು ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!
Scroll to Top
%d bloggers like this: