30 ವರ್ಷಗಳಲ್ಲಿ ಬರೊಬ್ಬರಿ 70 ಮಹಿಳೆಯರ ಕೊಲೆ | ತಂದೆಯ ಇಂತಹ ಕಾರ್ಯಕ್ಕೆ  ಮಗಳ ಹೇಳಿಕೆ

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದೋ ಎರಡೋ ಕೊಲೆಮಾಡಿರುವುದನ್ನು ನಾವು  ಕೇಳಿರುತ್ತೇವೆ ಅಥವಾ  ಓದಿರುತ್ತೇವೆ. ಮತ್ತು ಕೊಲೆಗಾರ ಎಷ್ಟು ಕ್ರೂರಿ ಇರಬಹುದು ಅಂತಾನೂ ಅನಿಸ್ತದೆ ಅಲ್ವಾ! ಆದರೆ  ಇಲ್ಲೊಬ್ಬ  ರೈತ  30 ವರ್ಷಗಳಲ್ಲಿ  70 ಮಹಿಳೆಯರನ್ನು ಹತ್ಯೆಗೈದಿರುವ ಭಯಾನಕವಾದ ವಿಚಾರ ಬೆಳಕಿಗೆ ಬಂದಿದೆ.

 

ಅಮೆರಿಕಾದ ಇತಿಹಾಸದಲ್ಲಿ ಸುಪ್ರಸಿದ್ಧ ಸರಣಿ ಕೊಲೆಗಾರರ ​​ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗುವಂತಿದೆ. ಆಯೋವಾದಲ್ಲಿ ರೈತನೊಬ್ಬ ಕಳೆದ 30 ವರ್ಷಗಳಲ್ಲಿ  ಬರೊಬ್ಬರಿ 70 ಮಹಿಳೆಯರನ್ನು ಕೊಂದಿದ್ದು, ಅದರ ಜೊತೆಗೆ ಹೆಣಗಳನ್ನು ಎಲ್ಲಿ ಹೂತಿದ್ದಾನೆ ಎಂಬ ವಿಷಯ ಕೂಡ ತಿಳಿದಿದೆ ಎಂದು ಆತನ ಪುತ್ರಿ  ಪೊಲೀಸರಿಗೆ ಹೇಳಿದ್ದಾಳೆ. ಪೊಲೀಸರು ಈ ಹೇಳಿಕೆಯ ಸತ್ಯಾಸತ್ಯತೆಯನ್ನು  ಪರಿಶೀಲನೆ ನಡೆಸುತ್ತಿದ್ದಾರೆ.

ಸೀರಿಯಲ್ ಕಿಲ್ಲರ್  ಡೊನಾಲ್ಡ್ ಡೀನ್ ಸ್ಟುಡೆ  ಕೊಲೆಮಾಡಿರುವ ಮಹಿಳೆಯರ ಹೆಣವನ್ನು  100 ಅಡಿ ಆಳದ ಬಾವಿಗೆ ಎಸೆಯುತ್ತಿದ್ದರು. ಮತ್ತು ಅಯೋವಾದ ಥರ್ಮನ್‌ನಲ್ಲಿರುವ ಕೃಷಿಭೂಮಿಯ ಮೇಲೆ ಶವಗಳನ್ನು ಸಾಗಿಸಲು ಚಳಿಗಾಲದಲ್ಲಿ ಟೊಬೊಗ್ಗನ್ ಮತ್ತು ಬೇಸಿಗೆಯಲ್ಲಿ ಚಕ್ರದ ಕೈಬಂಡಿಯನ್ನು  ಬಳಸುತ್ತಿದ್ದರು ಎಂದು ಆತನ ಪುತ್ರಿ ಲೂಸಿ ಸ್ಟುಡೆ ಹೇಳಿದ್ದಾಳೆ.

ಆಕೆಯ ಈ ಎಲ್ಲಾ ಹೇಳಿಕೆಗಳ  ಆಧಾರದ ಮೇಲೆ ಸತ್ಯವನ್ನು ಹೊರಹಾಕಲು ಪೊಲೀಸರು ಹೆಚ್ಚಿನ ಶೋಧನೆಯನ್ನು ನಡೆಸುತ್ತಿದ್ದಾರೆ.  ಫ್ರೀಮಾಂಟ್ ಕೌಂಟಿ ಶೆರಿಫ್ ಕೆವಿನ್ ಐಸ್ಟ್ರೋಪ್ ಪ್ರಕಾರ, ಎರಡು ಶೋಧ ನಾಯಿಗಳು ಬಾವಿಯಲ್ಲಿ ಹೆಣಗಳ ಉಪಸ್ಥಿತಿಯನ್ನು ಪತ್ತೆ ಹಚ್ಚಿವೆ ಎಂಬುದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸ್ಟ್ರೋಪ್ , ನಮಗೆ ಮೂಳೆ ಕೂಡ ಸಿಕ್ಕಿಲ್ಲ , ನಾಯಿಗಳ ಶೋಧನೆಯ ಪ್ರಕಾರ ಇದು ಬಹಳ ದೊಡ್ಡ ಸಮಾಧಿಯಸ್ಥಳ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.  ಡೊನಾಲ್ಡ್ ಸ್ಟುಡೆ ಮಹಿಳೆಯರನ್ನು ಕೊಲ್ಲುವ ಮೊದಲು ತನ್ನ  5 ಎಕರೆ ಕಾಡಿನ ಪ್ರದೇಶವನ್ನು ಮತ್ತು ಹೊಲಗಳನ್ನು ಆಮಿಷವೊಡ್ಡಿದ್ದಾರೆಂದು , ಕೊಲೆಯಾದ ಮಹಿಳೆಯರಲ್ಲಿ ಹೆಚ್ಚಿನವರು  ಲೈಂಗಿಕ ಕಾರ್ಯಕರ್ತರು ಅಥವಾ ನೆರೆಯ ಒಮಾಹಾ, ನೆಬ್ರಸ್ಕಾದಲ್ಲಿ ಸಿಕ್ಕಿಬಿದ್ದ ಬೀದಿ ಜನರು ಎನ್ನಲಾಗಿದೆ. ಇಷ್ಟೆಲ್ಲಾ ಮಹಿಳೆಯರ ಹತೈಗೈದಿರುವ ಡೊನಾಲ್ಡ್ 75 ನೇ ವಯಸ್ಸಿನಲ್ಲಿ ಮಾರ್ಚ್ 2013 ರಲ್ಲಿ, ನಿಧನರಾದರು.

ಈ ವಿಚಾರವು ಪುತ್ರಿಯ ಹೇಳಿಕೆಯಂತೆ  ನಿಜವಾಗಿದ್ದರೆ, ಡೊನಾಲ್ಡ್ ಡೀನ್ ಸ್ಟುಡೆ ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಸರಣಿ ಕೊಲೆಗಾರರಲ್ಲಿ ಸ್ಥಾನ ಪಡೆಯುತ್ತಾನೆ.  ಹಾಗೇ ಆತನ ಪುತ್ರಿ ಲೂಸಿ ಸ್ಟುಡೆ ಸಮಾಧಿ ಸ್ಥಳಗಳನ್ನು ಅಗೆದು ಕೊಲೆಯಾಗಿರುವ ಮಹಿಳೆಯರಿಗೆ ಸೂಕ್ತ ಸಮಾದಿ ಸ್ಥಳವನ್ನು ನೀಡುತ್ತೇನೆಂದು ಹೇಳಿದ್ದಾಳೆ.

Leave A Reply

Your email address will not be published.