ಸಾಮಾನ್ಯವಾಗಿ ನದಿಗಳಲ್ಲಿ , ಮಾರುಕಟ್ಟೆಯಲ್ಲಿ ಮೀನುಗಳನ್ನು ನೋಡಿರುತ್ತೇವೆ. ಹಾಗೂ ಅದನ್ನು ತಿಂದಿದ್ದೇವೆ ಕೂಡ. ಇದರಲ್ಲಿ ಆಶ್ಚರ್ಯಪಡುವಂತಹ ವಿಷಯವೇನು ಇಲ್ಲಾ ಅಲ್ವಾ! ಹಾಗಾದರೆ ಇಲ್ಲೊಂದು ಅಚ್ಚರಿ ಪಡುವಂತಹ ವಿಷಯವಿದೆ ಅದೇನೆಂದರೆ, ಮೀನುಗಾರರ ಬಲೆಗೆ ವಿಶೇಷವಾದ,ಅಪರೂಪದ ಹಕ್ಕಿ ಮೀನೊಂದು ಸಿಕ್ಕಿದೆ. ಏನಿದು ಹಕ್ಕಿ ಮೀನು? ಹೇಗೆ ಸಿಕ್ಕಿತು? ಎಲ್ಲಿ ಸಿಕ್ಕಿತು? ಅಂತ ನೋಡೋಣ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಗಂಗಾವಳಿ ನದಿಯಲ್ಲಿ ಮೀನು ಹಿಡಿಯಲು ಹೋದ ಮೀನುಗಾರರ ಬಲೆಗೆ ವಿಶೇಷವಾದ, ಅಪರೂಪದ ಹಕ್ಕಿ ಮೀನೊಂದು ಬಿದ್ದಿದೆ. ಈ ಮೀನನ್ನು ನೋಡಿ ಅಲ್ಲಿದ್ದ ಜನರೆಲ್ಲಾ ಅಚ್ಚರಿಯ ಜೊತೆಗೆ ತುಂಬಾನೇ ಖುಷಿ ಪಟ್ಟಿದ್ದಾರೆ.
ಹಕ್ಕಿಯಂತೆ ರೆಕ್ಕೆ ಇರುವ ಈ ಮೀನನ್ನು ನೋಡಿ ಅಲ್ಲಿದ್ದ ಜನರೆಲ್ಲಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಹಕ್ಕಿ ಮೀನನ್ನು ಆಹಾರಕ್ಕೆ ಬಳಸುವುದು ಅತೀ ಕಡಿಮೆ ಎನ್ನಲಾಗಿದೆ. ಈ ಅಪರೂಪದ ಮೀನನ್ನು ಗಜಾನನ ಪೈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದೀಗ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.